ಬೈರುತ್: ಹೆಜ್ಬುಲ್ಲಾ ಉಗ್ರರನ್ನು ಗುರಿಯಾಗಿಸಿ ಲೆಬನಾನ್(Lebanon pager Blast)ನಲ್ಲಿ ನಡೆದ ಪೇಜರ್ ಮತ್ತು ವಾಕಿಟಾಕಿ ಸ್ಫೋಟ ಬೆನ್ನಲ್ಲೇ ಶುರುವಾಗಿರುವ ಇಸ್ರೇಲ್- ಹೆಜ್ಬುಲ್ಲಾ(Hezbollah) ನಡುವಿನ ಸಂಘರ್ಷ ತೀವ್ರಗೊಂಡಿದ್ದು, ಇಸ್ರೇಲ್(Israel Strikes) ಸೇನೆ ಸೋಮವಾರ 300ಕ್ಕೂ ಅಧಿಕ ರಾಕೆಟ್ ದಾಳಿ ನಡೆಸಿವೆ. ಈ ಭೀಕರ ದಾಳಿಯಲ್ಲಿ50ಕ್ಕೂ ಹೆಚ್ಚು ಜನ ಬಲಿಯಾಗಿದ್ದು, 300ಕ್ಕೂ ಅಧಿಕ ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಆ ಮೂಲಕ ಎರಡೂ ದೇಶಗಳ ನಡುವೆ ಪೂರ್ಣಪ್ರಮಾಣದ ಯುದ್ಧ ಶುರುವಾಗಿದೆ. 300 ದಾಳಿಗಳ ಮೂಲಕ ಇಸ್ರೇಲ್ ಸೇನೆ ಹೆಜ್ಬುಲ್ಲಾಗಳ ಶಿಬಿರಗಳನ್ನು ಧ್ವಂಸಗೊಳಿಸಿವೆ.
ಈ ಕುರಿತು ಇಸ್ರೇಲ್ ಸೇನಾ ಪಡೆ(IDF) ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ವೊಂದನ್ನು ಮಾಡಿದ್ದು, IDF ಹೆಡ್‌ಕ್ವಾರ್ಟರ್ಸ್ ಅಂಡರ್‌ಗ್ರೌಂಡ್ ಆಪರೇಷನ್ ಸೆಂಟರ್‌ನಿಂದ ಲೆಬನಾನ್‌ನಲ್ಲಿ ಹೆಜ್ಬೊಲ್ಲಾ ಗುರಿಗಳ ಮೇಲೆ ದಾಳಿ ನಡೆಸಲು ಜನರಲ್ ಸ್ಟಾಫ್ ಮುಖ್ಯಸ್ಥರು ಅನುಮತಿ ನೀಡಿದ್ದಾರೆ. ಇಲ್ಲಿಯವರೆಗೆ, ಇಂದು 300 ಕ್ಕೂ ಹೆಚ್ಚು ಹಿಜ್ಬುಲ್ಲಾಗಳನ್ನು ಗುರಿಯಾಗಿಸಿ ದಾಳಿ ನಡೆಸಲಾಗಿದೆ. ಲೆಬನಾನ್‌ನ ಸಿನಾಯ್ ಗ್ರಾಮದಲ್ಲಿ ಹೆಜ್ಬುಲ್ಲಾಗಳ ನೆಲೆಗಳ ಮೇಲೆ ಇಸ್ರೇಲ್ ಯುದ್ಧ ವಿಮಾನಗಳು ಏಕಾಏಕಿ ದಾಳಿ ನಡೆಸಿವೆ. ಈ ವೀಡಿಯೊವನ್ನು ಇಸ್ರೇಲ್ ಪರ ಚಾನೆಲ್ ಪೋಸ್ಟ್ ಮಾಡಿದೆ
כפר סינאי בלבנון pic.twitter.com/u740rYaGcj
— כל החדשות בזמן אמת (@Saher_News_24_7) September 23, 2024
ಆದರೆ ಹೆಜ್ಬೊಲ್ಲಾ ಉಗ್ರ ಸಂಘಟನೆ ಇಸ್ರೇಲ್ ಉತ್ತರ ಭಾಗದ ದೊಡ್ಡ ನಗರವಾದ ಹೈಫಾದಲ್ಲಿ ನೂರಾರು ರಾಕೆಟ್‌ಗಳ ಮೂಲಕ ದಾಳಿ ನಡೆಸಿ ಅಶಾಂತಿ ಸೃಷ್ಟಿಸಿದೆ. ಆದರೆ, ಇಸ್ರೇಲ್‌ನ ವಾಯು ರಕ್ಷಣಾ ವ್ಯವಸ್ಥೆ ಸಾಕಷ್ಟು ಕ್ಷಿಪಣಿಗಳನ್ನ ಆಗಸದಲ್ಲೇ ಹೊಡೆದುರುಳಿಸಿದೆಯಾದರೂ, ಈ ಭಾಗದಲ್ಲಿ ಅಭದ್ರತೆ ಮುಂದುವರೆದಿದೆ. ಈ ಭಾಗದ ಶಾಲೆಗಳನ್ನ ಮುಚ್ಚಲಾಗಿದೆ. ಇಸ್ರೇಲ್ ಭದ್ರತಾ ಪಡೆಗಳು ಲೆಬನಾನ್‌ನ ಹೆಜ್ಬೊಲ್ಲಾ ಉಗ್ರ ಸಂಘಟನೆ ಸದಸ್ಯರ ನಡುವಿನ ಅಲ್ಲಲ್ಲಿ ಗುಂಡಿನ ಚಕಮಕಿ ಕೂಡಾ ನಡೆದಿದೆ.
ಇಸ್ರೇಲ್ ಇತ್ತೀಚೆಗೆ ನಡೆಸಿದ ವಾಯು ದಾಳಿಯಲ್ಲಿ ಲೆಬನಾನ್‌ನಲ್ಲಿ ಮೂವರು ನಾಗರಿಕರು ಸಾವನ್ನಪ್ಪಿದ್ದಾರೆ ಎಂದು ಲೆಬನಾನ್‌ನ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ. ಇದಲ್ಲದೆ ಹೆಜ್ಬೊಲ್ಲಾ ಉಗ್ರ ಸಂಘಟನೆಯ ಇಬ್ಬರು ಫೈಟರ್‌ಗಳೂ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ. ಇದೇ ವೇಳೆ ಲೆಬನಾನ್‌ನಿಂದ ಇಸ್ರೇಲ್‌ಗೆ ಸುಮಾರು 300 ರಾಕೆಟ್‌ಗಳು, ಕ್ಷಿಪಣಿಗಳು ಹಾಗೂ ಡ್ರೋನ್‌ಗಳ ಮೂಲಕ ದಾಳಿ ನಡೆಸಲಾಗಿದೆ ಎಂದು ಇಸ್ರೇಲ್ ಸೇನೆ ಲೆಕ್ಕ ಕೊಟ್ಟಿದೆ.
The Chief of the General Staff approves strikes on Hezbollah targets in Lebanon from the IDF Headquarters Underground Operations Center. So far, more than 300 Hezbollah targets have been struck today. pic.twitter.com/hbNKWJ8QAs
— Israel Defense Forces (@IDF) September 23, 2024
ನಾಗರಿಕರಿಗೆ ಇಸ್ರೇಲ್ ಸೇನೆ ಸಂದೇಶ
ಹಿಂದಿನ ಸೋಮವಾರ, ಇಸ್ರೇಲಿ ಮಿಲಿಟರಿ ಲೆಬನಾನ್‌ನಲ್ಲಿರುವ ಜನರಿಗೆ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಗೊಳ್ಳುವಂತೆ ಇಸ್ರೇಲ್ ಸೇನೆ ಮನವಿ ಮಾಡಿದೆ. ಮಿಲಿಟರಿ ಉದ್ದೇಶಗಳಿಗಾಗಿ ಹೆಜ್ಬುಲ್ಲಾ ಬಳಸಿದ ಕಟ್ಟಡಗಳು ಮತ್ತು ಪ್ರದೇಶಗಳ ಮೇಲೆ ದಾಳಿ ನಡೆಯಲಿದೆ. ಹೀಗಾಗಿ ಅದರ ಪಕ್ಕದಲ್ಲಿರುವ ಲೆಬನಾನಿನ ಹಳ್ಳಿಗಳ ನಾಗರಿಕರು ಆ ಸ್ಥಳಗಳಿಂದ ತೆರಳುವಂತೆ ಮಿಲಿಟರಿ ವಕ್ತಾರ ರಿಯರ್ ಅಡ್ಮಿರಲ್ ಡೇನಿಯಲ್ ಹಗರಿ ಮನವಿ ಮಾಡಿದ್ದಾರೆ.
ಈ ಸುದ್ದಿಯನ್ನೂ ಓದಿ: Al Jazeera: ಅಲ್ ಜಜೀರಾ ಕಚೇರಿ ಮೇಲೆ ಇಸ್ರೇಲ್ ಸೇನೆ ರೇಡ್; ದೇಶ ಬಿಡಲು 45 ದಿನಗಳ ಗಡುವು