Thursday, 12th December 2024

ಪಿಎಸ್‌ಎಲ್ ವಿ ಸಿ50 ರಾಕೆಟ್ ಯಶಸ್ವಿ ಉಡಾವಣೆ: ಇಸ್ರೋ ಸಾಧನೆ

ISRO- PSLV

ಶ್ರೀಹರಿಕೋಟಾ: ಸಂಪರ್ಕ ಸೇವೆಗೆ ಬಳಸಲಾಗುವ ಸಿಎಂಎಸ್1 ಉಪಗ್ರಹವನ್ನು ಹೊತ್ತ ಪಿಎಸ್‌ಎಲ್ ವಿ ಸಿ50 ರಾಕೆಟ್ ಅನ್ನು ಗುರುವಾರ ಭಾರತದ ಬಾಹ್ಯಾಕಾಶ ಸಂಸ್ಥೆ ಇಸ್ರೋ ಯಶಸ್ವಿಯಾಗಿ ಉಡಾವಣೆ ಮಾಡಿದೆ.

ಆಂಧ್ರ ಪ್ರದೇಶದ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಸಿಎಂಎಸ್-01 ಉಪಗ್ರಹವನ್ನು ಯಶಸ್ವಿಯಾಗಿ ಉಡಾವಣೆ ಮಾಡಲಾಯಿತು. ಇದು ಪಿಎಸ್‌ಎಲ್‌ವಿ ಸರಣಿಯ 5ನೇ ಕಾರ್ಯಕ್ರಮವಾಗಿದ್ದು, ಸಿಎಂಎಸ್ 01 ಭಾರತದ 43ನೇ ಸಂವಹನ ಉಪಗ್ರಹವಾಗಿದೆ.

ಸಿಎಂಎಸ್‌ -01 ಸಂಪರ್ಕ ಸೇವೆಯ ಉಪಗ್ರಹವಾಗಿದ್ದು, ವಿಸ್ತರಿಸಲಾದ ಸಿ-ಬ್ಯಾಂಡ್‌ ತರಂಗಾಂತರದಲ್ಲಿ ಸೇವೆಯನ್ನು ಕಲ್ಪಿಸಲಿದೆ ಎಂದು ಇಸ್ರೋ ತನ್ನ ಹೇಳಿಕೆಯಲ್ಲಿ ತಿಳಿಸಿದೆ.