Thursday, 12th December 2024

ತಿರುಪತಿ ದೇವರ ದರ್ಶನ ಪಡೆದ ಇಸ್ರೋ ವಿಜ್ಞಾನಿಗಳ ತಂಡ

ತಿರುಪತಿ: ಚಂದ್ರಯಾನ-3 ಉಡಾವಣೆಗೂ ಮುನ್ನ ಇಸ್ರೋ ವಿಜ್ಞಾನಿಗಳ (ISRO scientists) ತಂಡವು ಆಂಧ್ರಪ್ರದೇಶದ ತಿರುಪತಿ ದೇವಸ್ಥಾನಕ್ಕೆ ಆಗಮಿಸಿ ಈ ಯೋಜನೆ ಯಶಸ್ವಿ ಆಗಲಿ ಎಂದು ಪ್ರಾರ್ಥಿಸಿತು.

ಚಂದ್ರಯಾನ 3 ಉಡಾವಣೆಯ ಮುನ್ನಾ ದಿನ ಇಸ್ರೋದ ವೈಜ್ಞಾನಿಕ ಕಾರ್ಯದರ್ಶಿ ಶಾಂತನು ಭಟ್ವಾಡೇಕರ್ ಜೊತೆ ಇಸ್ರೋ ವಿಜ್ಞಾನಿಗಳು ಚಂದ್ರಯಾನ 3 ಮಾದರಿ ಯೊಂದಿಗೆ ಆಗಮಿಸಿ ಪ್ರಾರ್ಥನೆ ಮಾಡಿದರು.

ಈ ವೇಳೆ ಮಧ್ಯಮಗಳ ಜೊತೆ ಮಾತನಾಡಿದ ಅವರು, ನಾಳೆ ಉಡಾವಣೆ ನಡೆಯಲಿದೆ ಎಂದು ತಿಳಿಸಿದರು. ಇಸ್ರೋದ ಮಹತ್ವಾ ಕಾಂಕ್ಷಿ ಚಂದ್ರಯಾನ 3 ಉಡಾವಣೆ ಶುಕ್ರವಾರ ಮಧ್ಯಾಹ್ನ 2:35ಕ್ಕೆ ನಡೆಯಲಿದೆ. ಚಂದ್ರಯಾನ-3 ಅನ್ನು ಎಲ್‌ಎಂವಿ3 ರಾಕೆಟ್‌ ಮೂಲಕ ಶ್ರೀಹರಿಕೋಟಾದಿಂದ ಉಡಾವಣೆ ಮಾಡಲಾಗುತ್ತದೆ.

ಚಂದ್ರಯಾನ-3 ಉಡಾವಣೆ ದಿನಾಂಕವನ್ನು ಈ ಮೊದಲು ಜು.13 ಕ್ಕೆ ನಿಗದಿಪಡಿಸ ಲಾಗಿತ್ತು ನಂತರ ಉಡಾವಣೆಯ ದಿನಾಂಕ ವನ್ನು ಪರಿಷ್ಕರಿಸಿ ಜು.14ರ ಶುಕ್ರವಾರಕ್ಕೆ ನಿಗದಿ ಮಾಡಲಾಗಿದೆ.