ಚೆನ್ನೈ: ಕ್ರೈಸ್ತ ಧರ್ಮದ ನೀತಿಗಳನ್ನು ಬೋಧಿಸುತ್ತಿರುವ ಜೀಸಸ್ ಕಾಲ್ಸ್ ಎಂಬ ಸಂಘಟನೆಗೆ ಸೇರಿದ 28 ಸಂಸ್ಥೆಗಳ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಬುಧವಾರ ದಾಳಿ ನಡೆಸಿದ್ದಾರೆ.
ಈ ಕ್ರೈಸ್ತ ಸಂಘಟನೆ ತನ್ನ ಶಾಖೆಗಳನ್ನು ಹೊಂದಿದ್ದ ಅಲ್ಲೆಲ್ಲಾ ಏಕಕಾಲದಲ್ಲಿ ದಾಳಿ ನಡೆದಿದೆ. ತೆರಿಗೆ ಪಾವತಿಯಲ್ಲಿ ವಂಚನೆ ನಡೆದಿದೆ ಎಂದು ಅಧಿಕಾರಿಗಳು ಪರಿಶೀಲಿಸುತ್ತಿದ್ದಾರೆ.
ದಿವಂಗತ ಡಿ ಜಿ ಎಸ್ ದಿನಕರ್ ಪುತ್ರ ಪೌಲ್ ದಿನಕರನ್ ಸಂಸ್ಥೆಗಳನ್ನು ನಡೆಸಿಕೊಂಡು ಹೋಗುತ್ತಿದ್ದಾರೆ. ಈ ಕುಟುಂಬವೇ ಕಾರುಣ್ಯ ತಂತ್ರಜ್ಞಾನ ಮತ್ತು ವಿಜ್ಞಾನ ಸಂಸ್ಥೆಯನ್ನು ಸಹ ಕೊಯಂಬತ್ತೂರಿನಲ್ಲಿ ನೋಡಿಕೊಂಡು ಹೋಗುತ್ತಿದೆ. ಪಾಲ್ ದಿನಕರನ್ ಒಬ್ಬ ಪ್ರಮುಖ ಸುವಾರ್ತಾಬೋಧಕರಾಗಿದ್ದು, ಅವರು ಕ್ರೈಸ್ತರಲ್ಲಿ ಗಮನಾರ್ಹ ಅನುಯಾಯಿಗಳನ್ನು ಹೊಂದಿದ್ದಾರೆ.