Thursday, 19th September 2024

ಆದಾಯ ತೆರಿಗೆ ಮೌಲ್ಯಮಾಪನ ಕಾಲಮಿತಿ ಮೂರು ವರ್ಷಕ್ಕೆ ಕಡಿತ

ನವದೆಹಲಿ: ಆದಾಯ ತೆರಿಗೆ ಮೌಲ್ಯಮಾಪನ ಪುನರಾರಂಭಿಸುವ ಕಾಲಮಿತಿಯನ್ನು ಮೂರು ವರ್ಷಗಳಿಗೆ ತಗ್ಗಿಸಲಾಗಿದೆ. ಇದಕ್ಕೂ ಮುನ್ನ, ಇದು ಆರು ವರ್ಷಗಳ ಕಾಲಮಿತಿಯಾಗಿತ್ತು.

ತೆರಿಗೆ ವಂಚನೆ ಪ್ರಕರಣಗಳಲ್ಲಿ ₹ 50 ಲಕ್ಷ ಅಥವಾ ಅದಕ್ಕಿಂತ ಹೆಚ್ಚಿನ ಮೊತ್ತದ ಆದಾಯ ಮರೆಮಾಚಿದ್ದರೆ ಅಂತಹ ಪ್ರಕರಣ ಗಳನ್ನು ಪುನರಾರಂಭಿಸುವ ಕಾಲಮಿತಿಯಲ್ಲಿ ಬದಲಾವಣೆ ಮಾಡಿಲ್ಲ. ಅಂತಹ ಪ್ರಕರಣಗಳ ಕಾಲಮಿತಿ 10 ವರ್ಷ ಇರಲಿದೆ.

ಅನಿವಾಸಿ ಭಾರತೀಯರು (ಎನ್‌ಆರ್‌ಐ) ಎದುರಿಸುತ್ತಿರುವ ದುಪ್ಪಟ್ಟು ತೆರಿಗೆ ಸಮಸ್ಯೆ ಬಗೆಹರಿಸಲು ತೆರಿಗೆ ಇಲಾಖೆ ನೆರವಾಗ ಲಿದೆ. ₹ 50 ಲಕ್ಷದವರೆಗಿನ ವಹಿವಾಟು ನಡೆಸುವ ಸಣ್ಣ ತೆರಿಗೆದಾರರಿಗೆ ತೆರಿಗೆ ಸಮಸ್ಯೆಗಳನ್ನು ಬಗೆಹರಿಸಲು ಸಮಿತಿ ರಚನೆ ಆಗಲಿದೆ.

ಷೇರು, ಬಾಂಡ್‌ಗಳ ಮೇಲಿನ ಬಂಡವಾಳ ಗಳಿಕೆ, ಲಾಭಾಂಶ ವರಮಾನ ಹಾಗೂ ಬ್ಯಾಂಕ್‌ ಮತ್ತು ಅಂಚೆ ಕಚೇರಿಗಳಿಂದ ಬರುವ ಬಡ್ಡಿ ವರಮಾನದ ಮಾಹಿತಿಗಳು ಮುಂಚಿತವಾಗಿ ಭರ್ತಿ ಆಗಿರುವ ಆದಾಯ ತೆರಿಗೆ ರಿಟರ್ನ್ಸ್‌ ಶೀಘ್ರವೇ ಲಭ್ಯವಾಗಲಿದೆ.

ತೆರಿಗೆ ವ್ಯಾಜ್ಯಗಳನ್ನು ಬಗೆಹರಿಸಿಕೊಳ್ಳಲು ತೆರಿಗೆದಾರರು ವಿವಾದ್‌ ಸೆ ವಿಶ್ವಾಸ್‌ ಯೋಜನೆಯ ಪ್ರಯೋಜನ ಪಡೆದು ಕೊಂಡಿ ದ್ದಾರೆ. ಡಿಜಿಟಲ್‌ ರೂಪದಲ್ಲಿಆದಾಯ ತೆರಿಗೆ ಮೇಲ್ಮನವಿ ನ್ಯಾಯಾಧೀಕರಣ ಪ್ರಾರಂಭಿಸಲು ಬಜೆಟ್‌ನಲ್ಲಿ ಪ್ರಸ್ತಾಪಿಸ ಲಾಗಿದೆ.

Leave a Reply

Your email address will not be published. Required fields are marked *