ನವದೆಹಲಿ: ರಾಷ್ಟ್ರಪತಿ ರಾಮನಾಥ್ ಕೋವಿಡ್ ಅವರು ರಾಷ್ಟ್ರಪತಿ ಭವನದಲ್ಲಿ ಜ. 23ರಂದು ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ 125ನೇ ಜನ್ಮದಿನದ ಪ್ರಯುಕ್ತ ಅವರ ವರ್ಣಚಿತ್ರ ಅನಾವರಣಗೊಳಿಸಿದ್ದರು.
ರಾಷ್ಟ್ರಪತಿ ಭವನದ ಅಧಿಕೃತ ಟ್ವಿಟ್ಟರ್ ಖಾತೆ ಕೂಡ ಈ ಚಿತ್ರವನ್ನು ಹಂಚಿಕೊಂಡಿತ್ತು. ಆದರೆ, ಚಿತ್ರ ಈಗ ತೀವ್ರ ಟೀಕೆಗೆ ಗುರಿ ಯಾಗಿದೆ. ಏಕೆಂದರೆ ರಾಷ್ಟ್ರಪತಿ ಅನಾವರಣಗೊಳಿಸಿದ ಚಿತ್ರ ವಾಸ್ತವವಾಗಿ ಸುಭಾಷ್ ಚಂದ್ರ ಬೋಸ್ ಅವರ ಚಿತ್ರವಲ್ಲ. ಬೋಸ್ ಅವರ ನಿಗೂಢ ಸಾವಿನ ಕುರಿತು ಶ್ರೀಜಿತ್ ಮುಖರ್ಜಿ ಅವರ ನಿರ್ದೇಶನದಲ್ಲಿ ತಯಾರಾದ ಬಂಗಾಳಿ ಚಿತ್ರದಲ್ಲಿ ನೇತಾಜಿಯ ಪಾತ್ರ ವಹಿಸಿದ್ದ ಪ್ರೊಸೆಂಜಿತ್ ಚಟರ್ಜಿ ಅವರ ಚಿತ್ರವಿದು.
ಇಂದು ನೇತಾಜಿ ಜನ್ಮದಿನ: ಸುಭಾಷ್ ಚಂದ್ರ ಬೋಸ್ ಅವರ ನೆಚ್ಚಿನ ತಿನಿಸು ಯಾವುದು ಗೊತ್ತೇ? ‘ಭಾರತದ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ರಾಷ್ಟ್ರಪತಿ ಭವನದಲ್ಲಿ ಸುಭಾಷ್ ಚಂದ್ರ ಬೋಸ್ ಅವರ ಚಿತ್ರವನ್ನು ಅನಾವರಣ ಗೊಳಿಸಿದರು. ಬೋಸ್ ಅವರ 125ನೇ ಜನ್ಮ ವರ್ಷಾಚರಣೆಯ ಆರಂಭದ ಅಂಗವಾಗಿ ಈ ಚಿತ್ರದ ಅನಾವರಣ ಮಾಡಲಾಗಿದೆ’ ಎಂದು ರಾಷ್ಟ್ರಪತಿ ಭವನ ಹೇಳಿಕೆ ನೀಡಿತ್ತು.
ಬೋಸ್ ಅವರ ಹಳೆಯ ಚಿತ್ರವನ್ನು ನೋಡಿದವರಿಗೆ ಈ ಚಿತ್ರ ಅವರನ್ನು ಹೋಲುವುದಿಲ್ಲ ಎನ್ನುವುದು ಸ್ಪಷ್ಟವಾಗಿ ತಿಳಿಯು ತ್ತದೆ.