ನವದೆಹಲಿ: ಇಟಲಿಯ ಪ್ರಧಾನಿ ಜಾರ್ಜಿಯ ಮೆಲೋನಿ ಅವರು 74ನೇ ಜನುಮದಿನ ಆಚರಿಸಿಕೊಳ್ಳುತ್ತಿದ್ದ (PM Modi Birthday) ಪ್ರಧಾನಿ ನರೇಂದ್ರ ಮೋದಿಯವರಿಗೆ ಶುಭಾಶಯಗಳನ್ನು ಕೋರಿದ್ದು. ಇದೇ ವೇಳೆ ಅವರು ಉಭಯ ದೇಶಗಳ ದ್ವಿಪಕ್ಷೀಯ ಸಂಬಂಧಗಳ ಭವಿಷ್ಯದ ಬಗ್ಗೆ ಆಶಾವಾದ ವ್ಯಕ್ತಪಡಿಸಿದ್ದಾರೆ.
Tanti auguri di buon compleanno al Primo Ministro dell’India @narendramodi. Sono certa che continueremo a rafforzare la nostra amicizia e la collaborazione tra Italia e India, per affrontare insieme le sfide globali che ci attendono 🇮🇹🇮🇳 pic.twitter.com/pqXo0ljK8F
— Giorgia Meloni (@GiorgiaMeloni) September 17, 2024
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, “ಭಾರತದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಜನ್ಮದಿನದ ಶುಭಾಶಯಗಳು. ನಮಗಾಗಿ ಕಾಯುತ್ತಿರುವ ಜಾಗತಿಕ ಸವಾಲುಗಳನ್ನು ಒಟ್ಟಾಗಿ ಎದುರಿಸಲು ಇಟಲಿ ಮತ್ತು ಭಾರತದ ನಡುವಿನ ನಮ್ಮ ಸ್ನೇಹ ಮತ್ತು ಸಹಯೋಗ ಬಲಪಡಿಸುವುದನ್ನು ಮುಂದುವರಿಸುತ್ತೇವೆ ” ಎಂದು ಬರೆದುಕೊಂಡಿದ್ದಾರೆ.
ಪ್ರಧಾನಿ ಮೋದಿ ಅವರಿಗೆ ನೇಪಾಳ, ಆಸ್ಟ್ರೇಲಿಯಾ ಹೈಕಮಿಷನ್, ರಷ್ಯಾದ ಅಂಬಾಸಿಡರ್ ಸೇರಿದಂತೆ ಜಾಗತಿಕ ಮುಂಚೂಣಿ ದೇಶಗಳ ನಾಯಕರು ಶುಭಾಶಯ ತಿಳಿಸಿದ್ದಾರೆ.
ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಮತ್ತು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಪ್ರಧಾನಿಗೆ ಜನ್ಮದಿನದ ಶುಭಾಶಯಗಳನ್ನು ಕೋರಿದ್ದಾರೆ, “ಪ್ರಧಾನಿ ಶ್ರೀ ನರೇಂದ್ರ ಮೋದಿ ಜಿ ಅವರಿಗೆ ಜನ್ಮದಿನದ ಶುಭಾಶಯಗಳು. ಅವರು ಉತ್ತಮ ಆರೋಗ್ಯ ಮತ್ತು ದೀರ್ಘಾಯುಷ್ಯದಿಂದ ಆಶೀರ್ವದಿಸಲಿ” ಎಂದು ಹೇಳಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರು ಇಂದು ತಮ್ಮ 74 ನೇ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಸೆಪ್ಟೆಂಬರ್ 17, 1950 ರಂದು ಗುಜರಾತ್ನ ಮೆಹ್ಸಾನಾದಲ್ಲಿ ಜನಿಸಿದ ನರೇಂದ್ರ ದಾಮೋದರ್‌ದಾಸ್ ಮೋದಿ ಅವರು ಭಾರತದ ಅತ್ಯಂತ ಪ್ರಭಾವಶಾಲಿ ರಾಜಕೀಯ ನಾಯಕರಲ್ಲಿ ಒಬ್ಬರಾಗಿ ಬೆಳೆದಿದ್ದಾರೆ.
2001 ರಿಂದ 2014 ರವರೆಗೆ ಸತತ ಮೂರು ಅವಧಿಗೆ ಗುಜರಾತ್ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ ಮೋದಿ ಅವರ ಅಧಿಕಾರಾವಧಿಯು ಗಮನಾರ್ಹ ಆರ್ಥಿಕ ಬೆಳವಣಿಗೆ ಮತ್ತು ಆಡಳಿತ ಸುಧಾರಣೆಗಳಿಂದ ಗಮನ ಸೆಳೆದಿದ್ದರು. 2014ರಲ್ಲಿ ಭಾರತದ ಪ್ರಧಾನಿಯಾದ ಬಳಿಕ ಅಂತಾರಾಷ್ಟ್ರೀಯ ವೇದಿಕೆಯಲ್ಲಿ ಅವರ ನಾಯಕತ್ವದ ಪ್ರಭಾವ ಪಸರಿಸಿತು.