Wednesday, 30th October 2024

ಯುವಕರಲ್ಲಿ ಜಾಗೃತಿ ಮೂಡಿಸುವ ದಿನ: ಪ್ರಧಾನಿ ಮೋದಿ

ನವದೆಹಲಿ: ದೇಶದ ಪ್ರಜಾಪ್ರಭುತ್ವ ಬಲಪಡಿಸಲು ಮತ್ತು ಚುನಾವಣೆಗಳನ್ನು ಸುಗಮವಾಗಿ ನಡೆಸಲು ಚುನಾವಣಾ ಆಯೋಗವು ನೀಡಿದ ಮಹತ್ವದ ಕೊಡುಗೆ ಶ್ಲಾಘಿಸುವ ಸಂದರ್ಭ ರಾಷ್ಟ್ರೀಯ ಮತದಾರರ ದಿನವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಚುನಾವಣಾ ಆಯೋಗದ ಸ್ಥಾಪನಾ ದಿನ ಗುರುತಿಸಲು ಜನವರಿ 25ನ್ನು “ರಾಷ್ಟ್ರೀಯ ಮತದಾರರ ದಿನ” ಎಂದು ಆಚರಿಸ ಲಾಗುತ್ತದೆ.

“ಮತದಾರರ ನೋಂದಣಿ ಖಾತರಿ ಪಡಿಸುವ ಅಗತ್ಯತೆಯ ಬಗ್ಗೆ, ವಿಶೇಷವಾಗಿ ಯುವಕರಲ್ಲಿ ಜಾಗೃತಿ ಮೂಡಿಸುವ ದಿನ ಇದಾಗಿದೆ ಎಂದು ಹೇಳಿದ್ದಾರೆ.