Sunday, 15th December 2024

ಮಾರುತಿ ಸುಜುಕಿ ಮಾಜಿ ಎಂಡಿ ಜಗದೀಶ್ ಖಟ್ಟರ್ ಇನ್ನಿಲ್ಲ

ನವದೆಹಲಿ : ಮಾರುತಿ ಸುಜುಕಿಯ ಮಾಜಿ ವ್ಯವಸ್ಥಾಪಕ ನಿರ್ದೇಶಕ ಜಗದೀಶ್ ಖಟ್ಟರ್(78) ಅವರು ಸೋಮವಾರ ಹೃದಯಾ ಘಾತಕ್ಕೆ ಒಳಗಾಗಿ ನಿಧನರಾದರು.

ಖಟ್ಟರ್ ನಿಧನದ ಸುದ್ದಿಯನ್ನು ಮಾರುತಿ ಸುಜುಕಿ ಅಧ್ಯಕ್ಷ ಆರ್ ಸಿ ಭಾರ್ಗವ ದೃಢಪಡಿಸಿದ್ದಾರೆ. ನಾವು ಅನೇಕ ವರ್ಷಗಳಿಂದ ಒಟ್ಟಿಗೆ ಕೆಲಸ ಮಾಡಿದ್ದೇವೆ. ಅವರು ಮಾರುತಿಗಾಗಿ ಸಾಕಷ್ಟು ಒಳ್ಳೆಯದನ್ನು ಮಾಡಿದ ವ್ಯಕ್ತಿ’ ಎಂದು ತಿಳಿಸಿದರು.

ಖಟ್ಟರ್ 1993 ಮತ್ತು 2007ರ ನಡುವೆ ಮಾರುತಿ ಉದ್ಯೋಗ್ ಲಿಮಿಟೆಡ್ ನೊಂದಿಗೆ ಇದ್ದರು. ಅವರು 1993ರಲ್ಲಿ ಮಾರುತಿಗೆ ನಿರ್ದೇಶಕರಾಗಿ (ಮಾರ್ಕೆಟಿಂಗ್) ಸೇರಿದರು. 1999ರಲ್ಲಿ ವ್ಯವಸ್ಥಾಪಕ ನಿರ್ದೇಶಕರಾದರು, ಮೊದಲು ಸರ್ಕಾರಿ ನಾಮನಿರ್ದೇಶಿತ ರಾಗಿ ಆನಂತರ 2002ರಲ್ಲಿ ಸುಜುಕಿ ಮೋಟಾರ್ ಕಾರ್ಪೊರೇಷನ್ (ಎಸ್ ಎಂಸಿ) ನಾಮನಿರ್ದೇಶಿತರಾಗಿ ಕೆಲಸ ಮಾಡಿದ್ದರು.

ಮಾರುತಿಗೆ ಸೇರುವ ಮೊದಲು, ಭಾರತೀಯ ಆಡಳಿತ ಸೇವೆಯ ಅಧಿಕಾರಿಯಾದ ಖಟ್ಟರ್ ಅವರು ಕೇಂದ್ರ ಉಕ್ಕು ಸಚಿವಾಲಯ ದಲ್ಲಿ ಜಂಟಿ ಕಾರ್ಯದರ್ಶಿಯಾಗಿ ಮತ್ತು ಉತ್ತರ ಪ್ರದೇಶ ಸರ್ಕಾರದ ವಿವಿಧ ಪ್ರಮುಖ ಆಡಳಿತಾತ್ಮಕ ಹುದ್ದೆಗಳಲ್ಲಿ ಸೇವೆ ಸಲ್ಲಿಸಿ ದರು.

2007 ರಲ್ಲಿ ತಮ್ಮ 65ನೇ ವಯಸ್ಸಿನಲ್ಲಿ ನಿವೃತ್ತರಾದ ನಂತರ, ಅವರು ಕಾರ್ನೇಷನ್ ಎಂಬ ಬಹು ಬ್ರಾಂಡ್ ಕಾರು ಮಾರಾಟ ಮತ್ತು ಸೇವಾ ಜಾಲವನ್ನು ಪ್ರಾರಂಭಿಸಿದರು. ಈ ಉದ್ಯಮವನ್ನು ಮಹೀಂದ್ರಾ ಫಸ್ಟ್ ಚಾಯ್ಸ್ 2018ರಲ್ಲಿ ಸ್ವಾಧೀನಪಡಿಸಿ ಕೊಂಡಿತು.