ಎಸ್‌ಸಿ ವರ್ಗಕ್ಕೆ ಆದ್ಯತೆ ನೀಡುವ ಭಾಗವಾಗಿ ಉತ್ತರಾಂಧ್ರ ರಾಜನ್ನ ದೊರ ಅವರಿಗೆ ಡಿಸಿಎಂ ಹುದ್ದೆ ನೀಡಿದ್ದು, ಅದರ ಜತೆಗೆ ಬುಡಕಟ್ಟು ಜನಾಂಗದ ಕಲ್ಯಾಣ ಖಾತೆಯನ್ನು ನೀಡಿದ್ದಾರೆ. ಮೈನಾರ್ಟಿ ವರ್ಗದಿಂದ ಅಂಜಾದ್ ಬಾಷಾ ಅವರಿಗೆ ಜಗನ್ ಡಿಸಿಎಂ ಹುದ್ದೆ ಕಲ್ಪಿಸಿ ಅಲ್ಪ ಸಂಖ್ಯಾತ ಕಲ್ಯಾಣ ಇಲಾಖೆ ಖಾತೆಯನ್ನು ಅವರಿಗೆ ನೀಡಿ ಜಗನ್ ಸಮುದಾಯಗಳಿಗೆ ಹೆಚ್ಚು ಆದ್ಯತೆ ನೀಡಿದ್ದಾರೆ.
ಬುಡಿ ಮುತ್ಯಾಲ ನಾಯ್ಡು ಅವರಿಗೆ ಡಿಸಿಎಂ ಸ್ಥಾನದ ಜತೆಗೆ ಪಂಚಾಯತ್ ರಾಜ್ ಮತ್ತು ಗ್ರಾಮೀಣಾಭಿವೃದ್ಧಿ ಸಚಿವ ಖಾತೆಯನ್ನು ಜಗನ್ ನೀಡಿದ್ದಾರೆ. ಕೊಟ್ಟು ಸತ್ಯನಾರಾಯಣ ಅವರಿಗೆ ಡಿಸಿಎಂ ಸ್ಥಾನದ ಜತೆಗೆ ಮುಜರಾಯಿ ಖಾತೆ ಹಂಚಿಕೆ ಮಾಡಲಾಗಿದೆ.
ಎಸ್ ಸಿ ಸಮುದಾಯಕ್ಕೆ ಆದ್ಯತೆ ನೀಡುವ ಭಾಗವಾಗಿ ಕೆ. ನಾರಾಯಣ ಸ್ವಾಮಿ ಅವರಿಗೆ ಡಿಸಿಎಂ ಹುದ್ದೆ ಜತೆಗೆ ಅಬಕಾರಿ ಸಚಿವ ಸ್ಥಾನ ನೀಡಲಾಗಿದೆ.
ಎಸ್ ಸಿ ಮಹಿಳೆಗೆ ಹೋಮ್ ಮಿನಿಸ್ಟರ್ ಹುದ್ದೆ ನೀಡಿದ್ದನ್ನು ಜಗನ್ ಕೂಡ ಹೇಳಿಕೊಂಡಿದ್ದರು. ಈ ಬಾರಿ ಕೂಡ ಅದೇ ಮಾನದಂಡ ಅನುಸಿ ಜಗನ್ ತಾನೇಟಿ ವನಿತಾ ಅವರಿಗೆ ಹೋಮ್ ಮಿನಿಸ್ಟರ್ ಸ್ಥಾನ ನೀಡಿದ್ದಾರೆ. ಅದರ ಜೆತೆಗೆ ಡಿಸಾಸ್ಟರ್ ಮ್ಯಾನೇಜ್ ಮೆಂಟ್ ಖಾತೆ ಯನ್ನೂ ಹೆಚ್ಚುವರಿಯಾಗಿ ನೀಡಿದ್ದಾರೆ. ತಾನೇಟಿ ವನಿತಾ ಗೆ ಗೃಹ ಸಚಿವ ಸ್ಥಾನ ನೀಡುವ ಮೂಲಕ ಎರಡನೇ ಬಾರಿಯೂ ಹೋಮ್ ಮಿನಿಸ್ಟರ್ ಖಾತೆಯನ್ನು ಮಹಿಳೆಗೆ ಹಂಚಿಕೆ ಮಾಡಿ ಮಾದರಿ ಮೆರೆದಿದ್ದಾರೆ.
ಬಿಸಿ ಕೆಟಗಿರಿ ವರ್ಗದಿಂದ ಗುರುತಿಸಿಕೊಂಡಿರುವ ನಟಿ ರೋಜಾ ಅವರಿಗೆ ಕೊನೆ ಕ್ಷಣದಲ್ಲಿ ರೋಜಾ ಅವರಿಗೆ ಪ್ರವಾಸೋದ್ಯಮ ಖಾತೆ ನೀಡಲಾಗಿದೆ. ಇದರ ಜತೆಗೆ ಸಂಸ್ಕೃತಿ ಮತ್ತು ಯುವ ಜನ ಸೇವಾ ಖಾತೆ ನೀಡಲಾಗಿದೆ.
ಜಗನ್ 2.0 ಕ್ಯಾಬಿನೆಟ್ ಸಚಿವರ ಪಟ್ಟಿ ಇಲ್ಲಿದೆ.
ಧರ್ಮನ ಪ್ರಸಾದ್ ರಾವ್- ಕಂದಾಯ,ನೋಂದಣಿ ಮತ್ತು ಮುದ್ರಾಂಕ
ಸೀದಿರಿ ಅಪ್ಪಲ ರಾಜು- ಪಶು ಸಂಗೋಪನೆ, ಡೈರಿ ಅಭಿವೃದ್ಧಿ, ಮೀನುಗಾರಿಕೆ
ಬೋತ್ಸಾ ಸತ್ಯನಾರಾಯಣ- ಶಿಕ್ಷಣ
ರಾಜನ್ನ ದೊರ ಪಿಡಿಕ-ಡಿಸಿಎಂ, ಬುಡಕಟ್ಟು ಅಭಿವೃದ್ಧಿ,
ಗುಡಿವಾಡ ಅಮರನಾಥ್, ಕೈಗಾರಿಕೆ, ಮೂಲ ಸೌಕರ್ಯ, ಹೂಡಿಕೆ ಮತ್ತು ವಾಣಿಜ್ಯ , ಮಾಹಿತಿ ತಂತ್ರಜ್ಞಾನ,
ದಾಡಿಶೆಟ್ಟಿ ರಾಮಲಿಂಗೇಶ್ವರರಾವ್, ರಸ್ತೆ ಮತ್ತು ಕಟ್ಟಡ,
ಪಿ. ವಿಶ್ವರೂಪು, ಸಾರಿಗೆ
ಚೆಲ್ಲುಬೊಯಿನ ಶ್ರೀನಿವಾಸ ವೇಣುಗೋಪಾಲ ಕೃಷ್ಣ -ಹಿಂದುಳಿದ ಕಲ್ಯಾಣ, ಮಾಹಿತಿ ಮತ್ತು ಸಾರ್ವಜನಿಕ ಸಂಪರ್ಕ, ಸಿನಿಮೋಟೋಗ್ರಫಿ,
ತಾನೇಟಿ ವನಿತಾ-ಗೃಹ ಖಾತೆ ಮತ್ತು ಡಿಸಾಸ್ಟರ್ ಮ್ಯನೇಜ್ಮೆಂಟ್,
ಕುರುಮುರಿ ವೆಂಕಟ ನಾಗೇಶ್ವರ ರಾವ್- ನಾಗರಿಕ ಸೇವೆ ಮತ್ತು ಗ್ರಾಹಕ ಪೂರೈಕೆ,
ಕೊಟ್ಟು ಸತ್ಯನಾರಾಯಣ-ಡಿಸಿಂ ಮತ್ತು ಮುಜರಾಯಿ ಇಲಾಖೆ,
ಜೋಗಿ ರಮೇಶ್- ವಸತಿ ಸಚಿವ,
ಮೆರುಗು ನಾಗಾರ್ಜುನ- ಸಮಾಜ ಕಲ್ಯಾಣ,
ವಿಡುದಲ ರಜಿನಿ- ಆರೋಗ್ಯ ಮತ್ತು ಕುಟುಂಬ ಕಲ್ಯಾಣ , ವೈದ್ಯಕೀಯ ಶಿಕ್ಷಣ,
ಅಂಬಾಟಿ ರಾಂಬಾಬು- ಜಲ ಸಂಪನ್ಮೂಲ ಖಾತೆ,
ಅಡಿಮುಲುಪು ಸುರೇಶ್- ಪೌರಾಡಳಿತ ಮತ್ತು ನಗರಾಭಿವೃದ್ಧಿ,
ಕಾಕಿಣಿ ಗೋವರ್ಧನ ರೆಡ್ಡಿ- ಕೃಷಿ, ಸಹಕಾರ, ಮಾರ್ಕೆಟಿಂಗ್,
ಪೆದ್ದಿರೆಡ್ಡಿ ರಾಮಚಂದ್ರ ರೆಡ್ಡಿ- ವಿದ್ಯುತ್, ಅರಣ್ಯ, ಪರಿಸರ ಮತ್ತು ವಿಜ್ಞಾನ ಮತ್ತು ತಂತ್ರಜ್ಞಾನ, ಗಣಿ
ಆರ್.ಕೆ. ರೋಜಾ- ಟೂರಿಸಂ, ಯುವ ಕಲ್ಯಾಣ,
ಕೆ. ನಾರಾಯಣಸ್ವಾಮಿ- ಡಿಸಿಎಂ, ಅಬಕಾರಿ,
ಅಮ್ಜದ್ ಬಾಷಾ- ಡಿಸಿಎಂ, ಅಲ್ಯ ಸಂಖ್ಯಾತರ ಕಲ್ಯಾಣ ಖಾತೆ,
ಬುಗ್ಗನ ರಾಜೇಂದ್ರನಾಥ್-ಹಣಕಾಸು, ಯೋಜನೆ, ವಾಣಿಜ್ಯ ತೆರಿಗೆ, ಕೌಶಲ್ಯ ಅಭಿವೃದ್ಧಿ,
ಗುಮ್ಮನೂರು ಜಯರಾಂ- ಕಾರ್ಮಿಕ, ಉದ್ಯೋಗ, ತರಬೇತಿ, ಕೈಗಾರಿಕೆ
ಉಷಾ ಶ್ರೀ ಚರಣ್- ಮಹಿಳೆ ಮತ್ತು ಮಕ್ಕಳ ಕಲ್ಯಾಣ ಇಲಾಖೆ