Sunday, 15th December 2024

ವಾಯಪಡೆಯ ಕಣ್ಗಾವಲು ವಿಮಾನ ಪತನ

ಜೈಪುರ: ಭಾರತೀಯ ವಾಯಪಡೆಯ ಕಣ್ಗಾವಲು ವಿಮಾನವೊಂದು ರಾಜಸ್ಥಾನದ ಜೈಸಲ್ಮೇರ್‌ನಿಂದ ಸುಮಾರು 25 ಕಿಲೋಮೀಟರ್‌ ದೂರದಲ್ಲಿರುವ ಪಿಥಾಲ ಗ್ರಾಮದ ಬಳಿಯ ಜಮೀನಿನಲ್ಲಿ ಗುರುವಾರ ಬೆಳಗ್ಗೆ ಪತನಗೊಂಡಿದೆ.

ಇದು ಮಾನವರಹಿತ ವಿಮಾನವಾದ ಕಾರಣ ಯಾವುದೇ ಸಾವು-ನೋವು ಸಂಭವಿಸಿಲ್ಲ. ವಿಮಾನವು ಜಮೀನಿನಲ್ಲಿ ಪತನಗೊಂಡ ಕಾರಣ ಯಾವುದೇ ಅವಘಡ ಸಂಭವಿಸಿಲ್ಲ. ಆದರೆ, ಇಡೀ ವಿಮಾನವು ಸುಟ್ಟು ಕರಕಲಾಗಿದೆ ಎಂದು ತಿಳಿದುಬಂದಿದೆ.

ವಿಮಾನ ಪತನದ ಸುದ್ದಿ ತಿಳಿಯುತ್ತಲೇ ಖುರಿ ಪೊಲೀಸ್‌ ಠಾಣೆ ಅಧಿಕಾರಿ ಮೇ ಜಾಬ್ತಾ ಅವರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ. ವಾಯುಪಡೆ ಅಧಿಕಾರಿಗಳು ಕೂಡ ಸ್ಥಳಕ್ಕೆ ಆಗಮಿಸಿದ್ದು, ಪ್ರಕರಣವನ್ನು ತನಿಖೆಗೆ ಆದೇಶಿಸಲಾಗಿದೆ ಎಂಬ ತಿಳಿದು ಬಂದಿದೆ.