Thursday, 12th December 2024

ಹಾಲಿ ಮುಖ್ಯಮಂತ್ರಿ ಜೈರಾಮ್ ಠಾಕೂರ್ ಭಾರಿ ಗೆಲುವು

ಹಿಮಾಚಲ ಪ್ರದೇಶ: ವಿಧಾನಸಭಾ ಚುನಾವಣೆಯಲ್ಲಿ ಹಾಲಿ ಮುಖ್ಯಮಂತ್ರಿ ಜೈರಾಮ್ ಠಾಕೂರ್ ಭಾರಿ ಗೆಲುವು ದಾಖಲಿಸಿ ದ್ದಾರೆ.

ವರದಿಯ ಪ್ರಕಾರ, ಜೈರಾಮ್ ಠಾಕೂರ್ ಅವರು ತಮ್ಮ ಸಾಂಪ್ರದಾಯಿಕ ವಿಧಾನಸಭಾ ಕ್ಷೇತ್ರ ಸೆರಾಜ್‌ನಿಂದ ಸತತ ಆರನೇ ಬಾರಿಗೆ 20,000 ಕ್ಕೂ ಹೆಚ್ಚು ಮತಗಳಿಂದ ಗೆದ್ದಿದ್ದಾರೆ. ಟ್ರೆಂಡ್‌ಗಳಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ನಿಕಟ ಸ್ಪರ್ಧೆ ದಾಖಲಾಗಿದೆ.

ಕಾಂಗ್ರೆಸ್ ಪಕ್ಷವು 68 ಸ್ಥಾನಗಳಲ್ಲಿ 38 ರಲ್ಲಿ ಮುನ್ನಡೆ ಸಾಧಿಸಿದ್ದರೆ, ಬಿಜೆಪಿ 27 ಸ್ಥಾನಗ ಳಲ್ಲಿ ಮುನ್ನಡೆ ಸಾಧಿಸಿದೆ.

“ಹಿಮಾಚಲದಲ್ಲಿ ಬಿಜೆಪಿ ಮತ್ತೆ ಸರ್ಕಾರ ರಚಿಸುತ್ತಿದೆ ಎಂದು ಹಲವಾರು ಎಕ್ಸಿಟ್ ಪೋಲ್‌ಗಳು ತೋರಿಸಿವೆ. ಆದರೆ ಕೆಲವು ಭಾಗಗಳಲ್ಲಿ ಜಿದ್ದಾಜಿದ್ದಿನ ಪೈಪೋಟಿ ಕಂಡು ಬರಲಿದೆ ಎಂದು ಕೆಲವರು ಹೇಳಿದ್ದಾರೆ.

ಅಂತಿಮ ಫಲಿತಾಂಶಕ್ಕಾಗಿ ನಾವು ಡಿ.8 ರವರೆಗೆ ಕಾಯಬೇಕು. ನಮ್ಮ ವಿಶ್ಲೇಷಣೆಯ ಪ್ರಕಾರ, ಅಲ್ಲಿ ಸರಳ ಬಹುಮತದೊಂದಿಗೆ ಬಿಜೆಪಿ ಸರ್ಕಾರ ರಚಿಸುವ ಉತ್ತಮ ಸಾಧ್ಯತೆ ಇದೆ ಎಂದು ಹೇಳಿದ್ದಾರೆ.