ನವದೆಹಲಿ: ಪ್ರಧಾನಿ ನರೇಂದ್ರ ಮೋದಿ 2017 ರಲ್ಲಿ ಮಾಜಿ ರಾಷ್ಟ್ರಪತಿ ಹಮೀದ್ ಅನ್ಸಾರಿ ಅವರ ನಿರ್ಗಮನ ಭಾಷಣದ ವೇಳೆ ಅಪಹಾಸ್ಯ ಮಾಡಿರುವ ವಿಡಿಯೋವನ್ನು ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ ಎಕ್ಸ್ ಮೂಲಕ ಹಂಚಿಕೊಂಡಿದ್ದಾರೆ.
ಈ ಮೂಲಕ ಕಾಂಗ್ರೆಸ್ ವರಿಷ್ಠ ರಾಹುಲ್ ಗಾಂಧಿ ಲೋಕಸಭೆಯಲ್ಲಿ ಸಂಸದರ ಉಚ್ಚಾಟನೆ ಖಂಡಿಸಿ ಪ್ರತಿಭಟನೆ ನಡೆಸುತ್ತಿದ್ದ ವೇಳೆ ನಡೆದಿದ್ದ ಮಿಮಿಕ್ರಿ ವಿವಾದ ಈಗ ಇನ್ನೊಂದು ಮೆಟ್ಟಿಲೇರಿದೆ.
ಉಪರಾಷ್ಟ್ರಪತಿ ಮತ್ತು ರಾಜ್ಯಸಭೆಯ ಅಧ್ಯಕ್ಷ ಸ್ಥಾನದಿಂದ ನಿವೃತ್ತರಾಗುತ್ತಿರುವ ಹಮೀದ್ ಅನ್ಸಾರಿಯವರ ವಿದಾಯದ ವೇಳೆ ಪ್ರಧಾನಿ ಮೋದಿ ಅವರನ್ನು ಲೇವಡಿ ಮಾಡಿ ಭಾಷಣ ಮಾಡಿದ್ದರು. ಇದೊಂದು ಆಘಾತಕಾರಿ ವಿಷಯವಾಗಿದ್ದು, ಭಾರತದ ಅತ್ಯಂತ ಪ್ರತಿಷ್ಠಿತ ರಾಜತಾಂತ್ರಿಕರಲ್ಲಿ ಒಬ್ಬರಾದ ಅನ್ಸಾರಿ ಅವರ ಗುರುತನ್ನು ಅವರ ಧರ್ಮಕ್ಕೆ ಸೀಮಿತಗೊಳಿಸುವ ಮೂಲಕ ಪ್ರಧಾನಿ ಅಪಹಾಸ್ಯ ಮಾಡಿದ್ದರು ಎಂದು ರಮೇಶ್ ಆರೋಪಿಸಿದ್ದಾರೆ.