Friday, 22nd November 2024

Jammu Development Authority: ಕಾಶ್ಮೀರಿ ಪಂಡಿತರ ಮಳಿಗೆಗಳು ಧ್ವಂಸ; ಭುಗಿಲೆದ್ದ, ಆಕ್ರೋಶ ಪ್ರತಿಭಟನೆ

Jammu Development Authority

ಶ್ರೀನಗರ : ಜಮ್ಮು ಅಭಿವೃದ್ದಿ ಪ್ರಾಧಿಕಾರ (Jammu Development Authority) ನಗರದಲ್ಲಿದ್ದ ಬೀಡು ಬಿಟ್ಟಿರುವ ವಲಸಿಗ ಕಾಶ್ಮೀರಿ ಪಂಡಿತರಿಗೆ (Kashmiri Pandits) ಸೇರಿದ ಒಂದು ಡಜನ್ ಅಂಗಡಿಗಳನ್ನು  ನೆಲಸಮಗೊಳಿಸಿದೆ. ಯಾವುದೇ ನೋಟೀಸ್‌ ನೀಡದೆ ನೆಲಸಮಗೊಳಿಸಿದ್ದಕ್ಕೆ ಅಧಿಕಾರಿಗಳ ವಿರುದ್ದ  ಕ್ರಮಕ್ಕೆ ಒತ್ತಾಯಿಸಿ ನಗರದಾದ್ಯಂತ ಉಗ್ರ ಪ್ರತಿಭಟನೆಗಳು ನಡೆಯುತ್ತಿವೆ.

ಮೂರು ದಶಕಗಳ ಹಿಂದೆ ಮುಥಿ ಶಿಬಿರದ (Muthi camp) ಬಳಿ ಸ್ಥಳಾಂತರಗೊಂಡ ಕಾಶ್ಮೀರಿ ಪಂಡಿತರು ನಿರ್ಮಿಸಿದ ಅಂಗಡಿಗಳನ್ನು ಬುಧವಾರ ಕೆಡವಲಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ನೆಲಸಮ ಮಾಡಿದ ಹಳೆಯ ಅಂಗಡಿಗಳು ಜೆಡಿಎಗೆ ಸೇರಿದ ಭೂಮಿಯಲ್ಲಿವೆ. ಮೂರು ತಿಂಗಳೊಳಗೆ ಕಾಶ್ಮೀರಿ ಪಂಡಿತರು ತಮ್ಮ ಅಂಗಡಿಗಳನ್ನು ತಾವಾಗಿಯೇ ತೆಗೆದುಹಾಕಲು ಗಡುವು ನೀಡಿದ್ದರು. ಇಲ್ಲದಿದ್ದರೆ ಅತಿಕ್ರಮಣಗಳನ್ನು ತೆಗೆದುಹಾಕಲಾಗುವುದು ಎಂದು ಎಚ್ಚರಿಕೆ ನೀಡಲಾಗಿತ್ತು. ಇದೀಗ ನೆಲ ಸಮ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಾಧಿಕಾರದ ಆಯುಕ್ತ ಅರವಿಂದ ಕರ್ವಾನಿ ಅವರು ಪರಿಸ್ಥಿತಿಯನ್ನು ಅವಲೋಕಿಸಲು ಪ್ರದೇಶಕ್ಕೆ ಭೇಟಿ ನೀಡಿ, ಸಂತ್ರಸ್ತ ಕುಟುಂಬಗಳಿಗೆ ಈ ಪ್ರದೇಶದಲ್ಲಿ ಹೊಸ ಅಂಗಡಿಗಳನ್ನು ನಿರ್ಮಿಸಲಾಗುವುದು ಎಂದು ಭರವಸೆ ನೀಡಿದರು. ಮಾತನಾಡಿದ ಅವರು ಈ ಅಂಗಡಿಗಳು ಜೆಡಿಎ ಜಮೀನಿನಲ್ಲಿದ್ದವು. ಮುಥಿ ಕ್ಯಾಂಪ್ 2 ರಲ್ಲಿ ಶಾಪಿಂಗ್ ಕಾಂಪ್ಲೆಕ್ಸ್ ನಿರ್ಮಿಸಲು ಸಂಸ್ಥೆ ಟೆಂಡರ್ ಕರೆದಿದೆ. ಶೀಘ್ರದಲ್ಲೇ ಹತ್ತು ಮಳಿಗೆಗಳನ್ನು ನಿರ್ಮಿಸಿ ಈ ಮಳಿಗೆದಾರರಿಗೆ ಮಂಜೂರು ಮಾಡಲಾಗುವುದು ಎಂದು ಹೇಳಿದರು.

ಬಿಜೆಪಿ, ಪಿಡಿಪಿ ಮತ್ತು ಅಪ್ನಿ ಪಾರ್ಟಿ ಸೇರಿದಂತೆ ರಾಜಕೀಯ ಪಕ್ಷಗಳು ಮತ್ತು ಹಲವಾರು ಕಾಶ್ಮೀರ ಪಂಡಿತ್ ಸಂಘಟನೆಗಳು ಜೆಡಿಎ ಕ್ರಮವನ್ನು ಖಂಡಿಸಿವೆ. ನಿರಾಶ್ರಿತ ಸಮುದಾಯಕ್ಕೆ ಹೊಸ ಅಂಗಡಿಗಳನ್ನು ನಿರ್ಮಿಸಿ ಅವರ ಜೀವನೋಪಾಯಕ್ಕೆ ಸಹಾಯ ಮಾಡುವಂತೆ ಅವರು ಕರೆ ನೀಡಿದ್ದಾರೆ.

ಇನ್ನೊಂದೆಡೆ ಅಂಗಡಿ ಕಳೆದುಕೊಂಡ ಮಾಲೀಕರು ಜೀವನೋಪಾಯಕ್ಕೆ ಬೇರೆ ದಾರಿ ಇಲ್ಲ ಎಂದು ಕಣ್ಣೀರಿಡುತ್ತಿದ್ದಾರೆ. ತನ್ನ ಕೆಡವಲಾದ ಅಂಗಡಿಯನ್ನು ತೋರಿಸಿ ಅದರ ಮಾಲೀಕ ಕುಲದೀಪ್ ಕಿಸ್ರೂ, ಮಾತನಾಡಿದ್ದು, ಉತ್ತಮ ಸೌಲಭ್ಯಗಳು ಮತ್ತು ಆರ್ಥಿಕ ನೆರವು ನೀಡುವ ಮೂಲಕ ನಮಗೆ ಬದುಕಲು ಸಹಾಯ ಮಾಡುವ ಬದಲು, ಈ ಸರ್ಕಾರವು ನಮ್ಮ ಅಂಗಡಿಗಳನ್ನು ಕಡೆವುತ್ತಿದೆ. ನಮ್ಮ ಆಹಾರವನ್ನು ಕಸಿದುಕೊಳ್ಳುತ್ತಿದೆ. ನಮ್ಮ ಸಂಪೂರ್ಣ ಕುಟುಂಬ ಅಂಗಡಿಯ ಮೇಲೆ ಅವಲಂಬಿತವಾಗಿದೆ. ಲೆಫ್ಟಿನೆಂಟ್ ಗವರ್ನರ್ ಮತ್ತು ಮುಖ್ಯಮಂತ್ರಿ ಮಧ್ಯಸ್ಥಿಕೆ ವಹಿಸಿ ನಮಗೆ ನ್ಯಾಯ ಒದಗಿಸಬೇಕೆಂದು ನಾವು ಒತ್ತಾಯಿಸುತ್ತೇವೆ ಎಂದು ಅವರು ವಿನಂತಿಸಿ ಕೊಂಡಿದ್ದಾರೆ.

ಇದನ್ನೂ ಓದಿ : J&K Statehood: ಅಮಿತ್‌ ಶಾ ಜತೆ ಒಮರ್ ಅಬ್ದುಲ್ಲಾ ಮಾತುಕತೆ; ಜಮ್ಮು & ಕಾಶ್ಮೀರಕ್ಕೆ ಶೀಘ್ರ ರಾಜ್ಯದ ಸ್ಥಾನಮಾನದ ಭರವಸೆ