Thursday, 19th September 2024

ಜಮ್ಮು-ಪಠಾಣ್‍ಕೋಟ್: ವ್ಯಾನ್‌ ಲಾರಿಗೆ ಡಿಕ್ಕಿ, ಇಬ್ಬರ ಸಾವು

ಜಮ್ಮು: ಸಾಂಬಾ ಜಿಲ್ಲೆಯ ಜಮ್ಮು-ಪಠಾಣ್‍ಕೋಟ್ ರಾಷ್ಟ್ರೀಯ ಹೆದ್ದಾರಿಯಲ್ಲಿ ವ್ಯಾನ್‌ ಲಾರಿಗೆ ಡಿಕ್ಕಿ ಹೊಡೆದು ಇಬ್ಬರು ಮೃತಪಟ್ಟು, ಮೂವರಿಗೆ ಗಂಭೀರ ಗಾಯಗಳಾಗಿವೆ.

ಶನಿವಾರ ಬೆಳಗ್ಗೆ ಸಂಭವಿಸಿದೆ ಅಪಘಾತದಲ್ಲಿ 70 ವರ್ಷದ ಹನ್ಸರಾಜ್ ಮೃತಪಟ್ಟು, 35 ವರ್ಷದ ಪುತ್ರ ಸೋಹನ್ ಲಾಲ್‍ಗೆ ತೀವ್ರ ಗಾಯಗಳಾಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.

ಕತುವಾದಿಂದ ಬರುತ್ತಿದ್ದ ವ್ಯಾನ್ ಜಮ್ಮು-ಪಠಾಣ್‍ಕೋಟ್ ರಾಷ್ಟ್ರೀಯ ಹೆದ್ದಾರಿಯ ಮನ್ಸಾರ್ ಮೋರ್ಹ್ ಬಳಿ ನಿಯಂತ್ರಣಕ್ಕೆ ಸಿಗದೆ ಹಿಂದಿನಿಂದ ಟ್ರಕ್‍ಗೆ ಗುದ್ದಿದೆ. ರಮೇಶ್ ಚಂದರ್ (60), ಹಿಮಂತ್ ಕುಮಾರ್ (35) ಮತ್ತು ಗೌರವ್ ಕುಮಾರ್ (18) ಗಂಭೀರ ಗಾಯಗಳಿಂದ ಆಸ್ಪತ್ರೆ ಸೇರಿದ್ದಾರೆ ಸ್ಥಳೀಯ ಪೊಲೀಸರು ತಿಳಿಸಿದ್ದಾರೆ.

 

Leave a Reply

Your email address will not be published. Required fields are marked *