Friday, 22nd November 2024

ಜಮ್ಮು ಹೊರವಲಯದಲ್ಲಿ ಎನ್‌ಕೌಂಟರ್‌: ಮೂವರು ಉಗ್ರರ ಹತ್ಯೆ

ಶ್ರೀನಗರ: ಜಮ್ಮುವಿನ ಹೊರವಲಯದಲ್ಲಿ ಭದ್ರತಾ ಪಡೆಗಳು ಮತ್ತು ಭಯೋತ್ಪಾದಕರ ನಡುವೆ ಗುಂಡಿನ ಚಕಮಕಿ ನಡೆದಿದ್ದು, ಎನ್‌ಕೌಂಟರ್‌ನಲ್ಲಿ ಕನಿಷ್ಠ ಮೂವರು ಉಗ್ರರು ಹತರಾಗಿದ್ದಾರೆ.

ಬುಧವಾರ ಜಮ್ಮುವಿನ ಹೊರವಲಯದ ಜಮ್ಮುವಿನ ಪಂಜತೀರ್ಥಿ-ಸಿದ್ರಾ ರಸ್ತೆಯಲ್ಲಿ ಅನುಮಾನಾಸ್ಪದವಾಗಿ ಕಂಡು ಬಂದ ಟ್ರಕ್ ಅನ್ನು ಭದ್ರತಾ ಪಡೆಗಳು ತಡೆದ ನಂತರ ಗುಂಡಿನ ಚಕಮಕಿ ನಡೆದಿದೆ. ಎನ್‌ಕೌಂಟರ್‌ನಲ್ಲಿ ಕನಿಷ್ಠ ಮೂವರು ಭಯೋ ತ್ಪಾದಕರು ಹತರಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

 

ಗುಂಡಿನ ಕಾಳಗದಲ್ಲಿ ಟ್ರಕ್‌ಗೆ ಬೆಂಕಿ ಹೊತ್ತಿಕೊಂಡಿದ್ದು, ಬೆಂಕಿಯನ್ನು ನಂದಿಸಲು ಅಗ್ನಿ ಶಾಮಕ ದಳವನ್ನು ಸ್ಥಳಕ್ಕೆ ಕರೆಯಲಾ ಗಿದೆ ಎಂದಿದ್ದಾರೆ.

ಪ್ರದೇಶದಲ್ಲಿ ಟ್ರಕ್‌ನ ಅನುಮಾನಾಸ್ಪದ ಚಲನವಲನವಿತ್ತು. ಪೊಲೀಸರು ಚೆಕ್ ಪೋಸ್ಟ್‌ ನಲ್ಲಿ ಟ್ರಕ್ ಅನ್ನು ತಡೆದರು. ಭದ್ರತಾ ಪಡೆಗಳು ಟ್ರಕ್ ಅನ್ನು ಶೋಧಿಸಲು ಪ್ರಾರಂಭಿಸಿ ದಾಗ, ಒಳಗೆ ಅಡಗಿದ್ದ ಭಯೋತ್ಪಾದಕರು ಭದ್ರತಾ ಪಡೆಗಳ ಮೇಲೆ ಗುಂಡು ಹಾರಿಸಿದರು. ಗುಂಡಿನ ಚಕಮಕಿಯಲ್ಲಿ ಎಲ್ಲಾ ಭಯೋತ್ಪಾದಕರು ಹತರಾಗಿದ್ದಾರೆ. ಟ್ರಕ್ ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ ” ಎಂದು ಜಮ್ಮುವಿನ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಹೇಳಿದ್ದಾರೆ.

ಜಮ್ಮು ಮತ್ತು ಕಾಶ್ಮೀರದ ಉಧಂಪುರ ಜಿಲ್ಲೆಯಲ್ಲಿ ಸೋಮವಾರವಷ್ಟೇ 15 ಕಿಲೋಗ್ರಾಂಗಳಷ್ಟು ತೂಕದ ಸುಧಾರಿತ ಸ್ಫೋಟಕ ಸಾಧನವನ್ನು (ಐಇಡಿ) ಪೊಲೀಸರು ನಿಷ್ಕ್ರಿಯಗೊಳಿಸಿದ್ದರು.

Read E-Paper click here