Friday, 25th October 2024

ಜಮ್ಮು-ಕಾಶ್ಮೀರದಲ್ಲಿ ಎರಡು ಲಘು ಭೂಕಂಪ

ಮ್ಮು: ಲಡಾಖ್ ಮತ್ತು ಜಮ್ಮು ಮತ್ತು ಕಾಶ್ಮೀರದಲ್ಲಿ ಲಘು ತೀವ್ರತೆಯ ಎರಡು ಭೂಕಂಪಗಳು ಸಂಭವಿಸಿವೆ.

ಕಂಪನದಿಂದ ಯಾವುದೇ ಹಾನಿಯಾದ ಬಗ್ಗೆ ತಕ್ಷಣದ ವರದಿಗಳಿಲ್ಲ ಎಂದು ಹೇಳಿದರು. ಎರಡು ಭೂಕಂಪಗಳ ಕೇಂದ್ರಬಿಂದು ಲಡಾಖ್‍ನ ಲೇಹ್ ಜಿಲ್ಲೆ ಮತ್ತು ಜಮ್ಮು ಮತ್ತು ಕಾಶ್ಮೀರದ ಕಿಶ್ತ್ವಾರ್ ಜಿಲ್ಲೆಯಲ್ಲಿದೆ ಎಂದುಹೇಳಿದರು.

ಲಡಾಖ್‍ನಲ್ಲಿ ಬೆಳಿಗ್ಗೆ 4.33 ಕ್ಕೆ 4.5 ತೀವ್ರತೆಯ ಭೂಕಂಪ ಸಂಭವಿಸಿದೆ. ಭೂಕಂಪದ ಆಳವು ಭೂಮಿಯ ಮೇಲ್ಮೈಯಿಂದ ಐದು ಕಿಲೋಮೀಟರ್ ಕೆಳಗೆ 34.73 ಡಿಗ್ರಿ ಅಕ್ಷಾಂಶ ಮತ್ತು 77.07 ಡಿಗ್ರಿ ರೇಖಾಂಶದಲ್ಲಿದೆ ಎಂದು ಹೇಳಿದೆ.

ಭೂಕಂಪವು ಕಾರ್ಗಿಲ್ ಮತ್ತು ಲೇಹ್ ಜಿಲ್ಲೆಗಳ ನಿವಾಸಿಗಳನ್ನು ಬೆಚ್ಚಿಬೀಳಿಸಿದೆ ಆದರೆ ಎಲ್ಲಿಯೂ ಯಾವುದೇ ಹಾನಿಯಾದ ವರದಿಯಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಜಮ್ಮು ಮತ್ತು ಕಾಶ್ಮೀರದ ಕಿಶ್ತ್ವಾರ್ ಜಿಲ್ಲೆಯಲ್ಲಿ 3.7 ತೀವ್ರತೆಯ ಭೂಕಂಪ ಸಂಭವಿಸಿದೆ. ಭೂಕಂಪದ ಆಳವು ಮೇಲ್ಮೈ ಯಿಂದ 33.36 ಡಿಗ್ರಿ ಅಕ್ಷಾಂಶ ಮತ್ತು 76.67 ಡಿಗ್ರಿ ರೇಖಾಂಶದಲ್ಲಿ ಐದು ಕಿ.ಮೀ. ಇತ್ತು ಎಂದು ತಿಳಿಸಿದೆ