Sunday, 17th November 2024

J&K Assembly Election Result: ಕಣಿವೆನಾಡಲ್ಲಿ ಖಾತೆ ತೆರೆದ ಆಪ್‌- ಮೆಹರಾಜ್‌ ಮಲಿಕ್‌ಗೆ ಭರ್ಜರಿ ಗೆಲುವು

JK election

ಶ್ರೀನಗರ: ಜಮ್ಮು ಮತ್ತು ಕಾಶ್ಮೀರ ವಿಧಾನಸಭಾ ಚುನಾವಣಾ ಫಲಿತಾಂಶ(J&K Assembly Election Result) ಹೊರ ಬಿದ್ದಿದ್ದು, ನ್ಯಾಷನಲ್‌ ಕಾನ್ಫರೆನ್ಸ್‌ ಪಕ್ಷವು ಕ್ಲೀನ್‌ ಸ್ವೀಪ್‌ ಮಾಡಿದೆ. ಇನ್ನು ಈ ಬಾರಿ ಅರವಿಂದ ಕೇಜ್ರಿವಾಲ್‌(Arvind Kejriwal) ನೇತೃತ್ವದ ಆಮ್‌ ಆದ್ಮಿ ಪಕ್ಷ(AAP) ಒಂದು ಸ್ಥಾನ ಗಳಿಸುವಲ್ಲಿ ಯಶಸ್ವಿಯಾಗಿದೆ. ದೋಡಾ ವಿಧಾನಸಭಾ ಕ್ಷೇತ್ರದಲ್ಲಿ ಆಪ್‌ ಗೆಲವು ಸಾಧಿಸಿದೆ.

ದೋಡಾ ಕ್ಷೇತ್ರದಲ್ಲಿ ಅಪ್‌ ಅಭ್ಯರ್ಥಿ ಮೆಹರಾಜ್‌ ಮಲಿಕ್‌ ಬಿಜೆಪಿಯ ಅಭ್ಯರ್ಥಿಯ ಗಜಯ್‌ ಸಿಂಗ್‌ ರಾಣಾ ವಿರುದ್ಧ ಅಭೂತಪೂರ್ವ ಗೆಲುವ ಸಾಧಿಸಿದ್ದಾರೆ. ಬಹಿರಂಗವಾಗಿ ಮಾತನಾಡುವ ನಾಯಕ ಎಂದು ಹೆಸರುವಾಸಿಯಾದ ಮಲಿಕ್ ಅವರು ಭಾರತೀಯ ಜನತಾ ಪಕ್ಷ, ಕಾಂಗ್ರೆಸ್ ಮತ್ತು ನ್ಯಾಷನಲ್ ಕಾನ್ಫರೆನ್ಸ್ ವೈಫಲ್ಯವನ್ನು ಮುಂದಿಟ್ಟುಕೊಂಡು ಹುರುಪಿನ ಪ್ರಚಾರ ನಡೆಸಿದರು.

ಇನ್ನು ಕಾಶ್ಮೀರಲ್ಲಿ ಎನ್‌ಸಿ ಜನಭೇರಿ ಭಾರಿಸಿದ್ದು, ಮಾಜಿ ಸಿಎಂ ಫಾರೂಕ್‌ ಅಬ್ದುಲ್ಲಾ(Farooq Abdullah) ಅವರು ತಮ್ಮ ಪುತ್ರ ಒಮರ್‌ ಅಬ್ದುಲ್ಲಾ(Omar Abdullah) ಅವರನ್ನು ಕಣಿವೆ ರಾಜ್ಯದ ಮುಂದಿನ ಮುಖ್ಯಮಂತ್ರಿ ಎಂದು ಘೋಷಿಸಿದ್ದಾರೆ.

ಈ ಬಾರಿ ಕಾಂಗ್ರೆಸ್‌ ಮತ್ತು ಎನ್‌ಸಿ ಮೈತ್ರಿ ಮಾಡಿಕೊಂಡು ಕಣಕ್ಕಿಳಿದಿತ್ತು. ಇಂದು ಚುನಾವಣಾ ಫಲಿತಾಂಶ ಹೊರಬಿದ್ದಿದ್ದು, ಎನ್‌ಸಿ ಅಭೂತಪೂರ್ವ ಗೆಲುವು ಸಾಧಿಸಿದ್ದು ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಕಾಂಗ್ರೆಸ್ ಮತ್ತು ಎನ್‌ಸಿ ಮೈತ್ರಿ ಸರ್ಕಾರ ರಚಿಸಲಿದ್ದು, ಓಮರ್‌ ಅಬ್ದುಲ್ಲಾ ಅವರು ಮೊದಲ ಬಾರಿಗೆ ಮುಖ್ಯಮಂತ್ರಿಯಾಗಿ ಪದಗ್ರಹಣ ಮಾಡಲಿದ್ದಾರೆ.

ಜಮ್ಮು ಮತ್ತು ಕಾಶ್ಮೀರದಲ್ಲಿ ಎನ್‌ಸಿ ಮತ್ತು ಕಾಂಗ್ರೆಸ್‌ ಮೈತ್ರಿ ಕ್ಲೀನ್‌ ಸ್ವೀಪ್‌ ಮಾಡಿದ್ದು, ಬರೋಬ್ಬರಿ 49 ಸ್ಥಾನಗಳನ್ನು ಪಡೆದಿವೆ. ಇನ್ನು ಬಿಜೆಪಿ 29ಸ್ಥಾನಗಳನ್ನು ಗಳಿಸಿದ್ದು, ಪಿಡಿಪಿ ಕೇವಲ ಮೂರು ಸ್ಥಾನಗಳುಗೆ ತೃಪ್ತಿಪಟ್ಟುಕೊಳ್ಳಬೇಕಿದೆ.

ಈ ಸುದ್ದಿಯನನೂ ಓದಿ: J&K Assembly Election Result: ಒಮರ್‌ ಅಬ್ದುಲ್ಲಾ ಕಾಶ್ಮೀರದ ಮುಂದಿನ ಸಿಎಂ