Friday, 22nd November 2024

ಜಂತರ್ ಮಂತರ್’ನಲ್ಲಿ ಕುಸ್ತಿಪಟುಗಳ ಧರಣಿಗೆ ಅವಕಾಶವಿಲ್ಲ

ವದೆಹಲಿ: ದೆಹಲಿ ಪೊಲೀಸರು ಪ್ರತಿಭಟನಾ ನಿರತ ಕುಸ್ತಿಪಟುಗಳ ಧರಣಿ ಸ್ಥಳವನ್ನು ತೆರವುಗೊಳಿಸಿದ ಒಂದು ದಿನದ ನಂತರ, ಸೋಮವಾರ ಜಂತರ್ ಮಂತರ್ ಹೊರತುಪಡಿಸಿ ನಗರದ ಸೂಕ್ತ ಸ್ಥಳದಲ್ಲಿ ಪ್ರತಿಭಟನೆಗೆ ಅವಕಾಶ ನೀಡುವುದಾಗಿ ಭದ್ರತಾ ಪಡೆ  ಹೇಳಿದೆ.

ಜಂತರ್ ಮಂತರ್‌ನ ಕೇಂದ್ರ ಸ್ಥಳದಲ್ಲಿ ಕುಸ್ತಿಪಟುಗಳ ಪ್ರತಿಭಟನೆ ನಡೆಯುತ್ತಿತ್ತು. ಆದರೆ ಭಾನುವಾರ ಪ್ರತಿಭಟನಾಕಾರರು ನಮ್ಮ ಬೇಡಿಕೆ ಗಳನ್ನು ತಲುಪಿಸಲು ಪಾರ್ಲಿಮೆಂಟ್‌ಗೆ ಹೋಗಲು ಪ್ರಯತ್ನಿಸಿದರು. ಆದ್ದರಿಂದ ನಾವು ಸ್ಥಳವನ್ನು ತೆರವು ಗೊಳಿಸಿ ಪ್ರತಿಭಟನೆ ಮಾಡದಂತೆ ತಿಳಿಸಿದ್ದೇವೆ ಎಂದು ಉಪ ಪೊಲೀಸ್ ಆಯುಕ್ತ ಹಿಂದಿಯಲ್ಲಿ ಟ್ವೀಟ್ ಮಾಡಿದ್ದಾರೆ.

ಕುಸ್ತಿಪಟುಗಳು ಮುಂದೆ ಮತ್ತೆ ತಮ್ಮ ಧರಣಿ ನಡೆಸಲು ಅನುಮತಿಗಾಗಿ ಅರ್ಜಿ ಸಲ್ಲಿಸಿದರೆ, ಜಂತರ್ ಮಂತರ್ ಹೊರತು ಪಡಿಸಿ ಯಾವುದೇ ಸೂಕ್ತ ಅಧಿಸೂಚಿತ ಸ್ಥಳದಲ್ಲಿ ಹಾಗೆ ಮಾಡಲು ಅವರಿಗೆ ಅವಕಾಶ ನೀಡಲಾ ಗುತ್ತದೆ ಎಂದು ಅದು ಹೇಳಿದ್ದಾರೆ.

ಕುಸ್ತಿಪಟುಗಳಾದ ವಿನೇಶ್ ಫೋಗಟ್, ಸಾಕ್ಷಿ ಮಲಿಕ್ ಮತ್ತು ಬಜರಂಗ್ ಪೂನಿಯಾ ಮತ್ತು ಇತರ ಪ್ರತಿಭಟನಾಕಾರರ ಮೇಲೆ ಗಲಭೆ ಮತ್ತು ಕರ್ತವ್ಯ ನಿರ್ವಹಣೆಗೆ ಅಡ್ಡಿಪಡಿಸಿದ ಆರೋಪದಡಿಯಲ್ಲಿ ಹೊಸ ಸಂಸತ್ ಭವನದ ಉದ್ಘಾಟನೆ ವೇಳೆ ಭದ್ರತಾ ಸಿಬ್ಬಂದಿಯನ್ನು ತಡೆಯಲು ಯತ್ನಿಸಿದ ಭದ್ರತಾ ಸಿಬ್ಬಂದಿಯೊಂದಿಗೆ ವಾಗ್ವಾದ ನಡೆಯಿತು.

ಬಳಿಕ ದೆಹಲಿ ಪೊಲೀಸರು ಜಂತರ್ ಮಂತರ್‌ನಲ್ಲಿ ತಮ್ಮ ತಿಂಗಳ ಧರಣಿ ಸತ್ಯಾಗ್ರಹದ ಸ್ಥಳವನ್ನು ತೆರವುಗೊಳಿಸಿ ಅವರನ್ನು ಮತ್ತೆ ಜಂತರ್‌ ಮಂತರ್‌ನಲ್ಲಿ ಪ್ರತಿಭಟನೆ ಮಾಡಲು ಅನುಮತಿ ನೀಡಲ್ಲ ಎಂದು ಹೇಳಿದರು. ಘಟನೆಯಲ್ಲಿ ರಾಷ್ಟ್ರ ರಾಜಧಾನಿಯಾದ್ಯಂತ 700 ಜನರನ್ನು ಬಂಧಿಸಲಾಗಿದ್ದು, ಮೂವರು ಕುಸ್ತಿಪಟುಗಳು ಸೇರಿದಂತೆ 109 ಪ್ರತಿಭಟನಾ ಕಾರರನ್ನು ಜಂತರ್ ಮಂತರ್‌ನಲ್ಲಿ ಬಂಧಿಸಲಾಯಿತು. ಮಹಿಳಾ ಬಂಧಿತರನ್ನು ಭಾನುವಾರ ಸಂಜೆ ನಂತರ ಬಿಡುಗಡೆ ಮಾಡಲಾಯಿತು.