ಬೆಂಗಳೂರು: ನೈಋತ್ಯ ಜಪಾನ್ನ ಮಿಯಾಝಾಕಿ ವಿಮಾನ ನಿಲ್ದಾಣದ ರನ್‌ವೇ ಬಳಿ ಎರಡನೇ ಮಹಾಯುದ್ಧದ ಸಮಯದಲ್ಲಿ ಅಮೆರಿಕ ಹಾಕಿ ಹೋಗಿದ್ದ ಬಾಂಬ್ ಸ್ಫೋಟಗೊಂಡಿದೆ. ಹೀಗಾಗಿ ಏರ್‌ಪೋರ್ಟ್ ಕಾರ್ಯಾಚರಣೆ ಮುಚ್ಚಲಾಗಿದೆ. ಸ್ಫೋಟದಿಂದಾಗಿ ಟ್ಯಾಕ್ಸಿವೇಯಲ್ಲಿ 7 ಮೀಟರ್ ಅಗಲ ಮತ್ತು 1 ಮೀಟರ್ ಆಳದ ಕುಳಿ ಸೃಷ್ಟಿಯಾಗಿದೆ. ಅಧಿಕಾರಿಗಳು ರನ್‌ವೇ ಮುಚ್ಚಿದ್ದಾರೆ ಎಂದು ಸೌತ್ ಚೀನಾ ಮಾರ್ನಿಂಗ್ ಪೋಸ್ಟ್ ವರದಿ ಮಾಡಿದೆ. ಜಪಾನ್ ಸಾರಿಗೆ ಸಚಿವಾಲಯವು, ಈ ಬಾಂಬ್ ಎರಡನೇ ಮಹಾ ಯುದ್ಧಕಾಲದ ವಾಯು ದಾಳಿಯ ಹಿಂದಿನ ಅಮೆರಿಕದ ಬಾಂಬ್‌ನಿಂದ ಸ್ಫೋಟಗೊಂಡಿದೆ ಎಂದು ದೃಢಪಡಿಸಿದೆ.
ಘಟನೆಯಲ್ಲಿ. ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ರನ್ ವೇ ಸ್ಥಗಿತದಿಂದಾಗಿ 87 ವಿಮಾನಗಳನ್ನು ಗ್ರೌಂಡ್ ಮಾಡಲಾಗಿದೆ. ಕುಳಿಯನ್ನು ತುಂಬಿಸುವ ದುರಸ್ತಿ ಕಾರ್ಯ ಗುರುವಾರ ಬೆಳಿಗ್ಗೆ ವೇಳೆಗೆ ಪೂರ್ಣಗೊಳ್ಳುವ ನಿರೀಕ್ಷೆಯಿದೆ ಎಂದು ಜಪಾನ್ ನ ಉನ್ನತ ಸರ್ಕಾರಿ ವಕ್ತಾರ ಯೋಶಿಮಾಸಾ ಹಯಾಶಿ ಹೇಳಿದ್ದಾರೆ. ಅದರ ಹಠಾತ್ ಸ್ಫೋಟಕ್ಕೆ ಕಾರಣವೇನೆಂದು ಅಧಿಕಾರಿಗಳು ತನಿಖೆ ಮಾಡುತ್ತಿದ್ದಾರೆ.
ಮಿಯಾಝಾಕಿ ವಿಮಾನ ನಿಲ್ದಾಣದಲ್ಲಿನ ಅಡಚಣೆಯಿಂದಾಗಿ ಜಪಾನ್ ಏರ್ಲೈನ್ಸ್ (ಜೆಎಎಲ್) ಮತ್ತು ಆಲ್ ನಿಪ್ಪಾನ್ ಏರ್ವೇಸ್ (ಎಎನ್ಎ) ಮತ್ತು ಇತರ ವಿಮಾನಯಾನ ಸಂಸ್ಥೆಗಳು ನಿರ್ವಹಿಸುವ ವಿಮಾನಗಳ ಮೇಲೆ ಪರಿಣಾಮ ಬೀರಿದೆ. ಈ ಬಾಧಿತ ವಿಮಾನಗಳು ಸಾಮಾನ್ಯವಾಗಿ ಮಿಯಾಝಾಕಿಯನ್ನು ಟೋಕಿಯೊ, ಒಸಾಕಾ ಮತ್ತು ಫುಕುವೊಕಾ ಸೇರಿದಂತೆ ಪ್ರಮುಖ ಜಪಾನಿನ ನಗರಗಳೊಂದಿಗೆ ಸಂಪರ್ಕಿಸುತ್ತವೆ ಎಂದು ವಿಮಾನ ನಿಲ್ದಾಣದ ವೆಬ್ಸೈಟ್ ತಿಳಿಸಿದೆ. ಹಾನಿಗೊಳಗಾದ ಟ್ಯಾಕ್ಸಿವೇಗೆ ದುರಸ್ತಿ ಪೂರ್ಣಗೊಂಡ ವಿಮಾನಯಾನ ಸಂಸ್ಥೆಗಳು ಕಾರ್ಯಾಚರಣೆ ಆರಂಭಿಸಲಿವೆ.
ಈಗಲೂ ಅಪಾಯ ಸೃಷ್ಟಿಸುವ ಸ್ಫೋಟಗೊಳ್ಳದ ಬಾಂಬ್‌ಗಳು
ಸ್ಫೋಟಗೊಳ್ಳದ ಬಾಂಬ್‌ಗಳು ನಿರಂತರ ಬೆದರಿಕೆಯಾಗಿ ಉಳಿದಿವೆ. ಯುದ್ಧ ಮುಗಿದು 79 ವರ್ಷಗಳು ಕಳೆದಿದ್ದರೂ, ಮಿಯಾಝಾಕಿ ವಿಮಾನ ನಿಲ್ದಾಣದಲ್ಲಿ ಈ ಹಿಂದೆ ಅನೇಕ ಸ್ಫೋಟಗೊಳ್ಳದ ಬಾಂಬ್‌ಗಳು ಪತ್ತೆಯಾಗಿವೆ ಎಂದು ಸಾರಿಗೆ ಸಚಿವಾಲಯ ತಿಳಿಸಿದೆ. 2023ರಲ್ಲಿ 37.5 ಟನ್ ತೂಕದ 2,348 ಬಾಂಬ್‌ಗಳನ್ನು ನಿಷ್ಕ್ರಿಯಗೊಳಿಸಿವೆ.
ಇದನ್ನೂ ಓದಿ: Israel strikes Iran : ನಮ್ಮ ಮುಂದಿನ ಟಾರ್ಗೆಟ್ ಇರಾನ್ ಪರಮೋಚ್ಚ ನಾಯಕ ಖಮೇನಿ! ಇಸ್ರೇಲ್ ಘೋಷಣೆ
ಎರಡನೇ ಮಹಾಯುದ್ಧದ ಸಮಯದಲ್ಲಿ ಜಪಾನಿನ ನೌಕಾ ನೆಲೆಯಾಗಿದ್ದ ಮಿಯಾಝಾಕಿ ವಿಮಾನ ನಿಲ್ದಾಣವು ನಂತರ ನಾಗರಿಕ ಬಳಕೆಗೆ ಮೀಸಲಾಯಿತು. ಮಿಯಾಝಾಕಿ ಪ್ರಿಫೆಕ್ಚರ್ನಲ್ಲಿರುವ ಇದು ದೇಶೀಯ ಮತ್ತು ಅಂತರರಾಷ್ಟ್ರೀಯ ವಿಮಾನಗಳಿಗೆ ಸೇವೆ ಸಲ್ಲಿಸುವ ಪ್ರಾದೇಶಿಕ ವಿಮಾನ ನಿಲ್ದಾಣವಾಗಿದೆ. ಇದು ದೇಶೀಯ ಮತ್ತು ಅಂತಾರಾಷ್ಟ್ರೀಯ ಕಾರ್ಯಾಚರಣೆಗಳನ್ನು ನಿರ್ವಹಿಸುವ 2,500 ಮೀಟರ್ ರನ್ ವೇ ಮತ್ತು ಒಂದೇ ಟರ್ಮಿನಲ್ ಹೊಂದಿದೆ. ಜಪಾನ್ ಏರ್ಲೈನ್ಸ್, ಆಲ್ ನಿಪ್ಪಾನ್ ಏರ್ವೇಸ್ ಮತ್ತು ಸೋಲಾಸೀಡ್ ಏರ್‌ನಂಥ ಪ್ರಮುಖ ವಿಮಾನಯಾನ ಸಂಸ್ಥೆಗಳು ಮಿಯಾಝಾಕಿಯಿಂದ ಕಾರ್ಯನಿರ್ವಹಿಸುತ್ತವೆ. ಪ್ರಯಾಣಿಕರನ್ನು ಟೋಕಿಯೊ, ಒಸಾಕಾ ಮತ್ತು ಫುಕುವೊಕಾದಂತಹ ಪ್ರಮುಖ ಸ್ಥಳಗಳು ಮತ್ತು ತೈವಾನ್ ಮತ್ತು ದಕ್ಷಿಣ ಕೊರಿಯಾಕ್ಕೆ ಅಂತರರಾಷ್ಟ್ರೀಯ ಮಾರ್ಗಗಳಿಗೆ ಸಂಪರ್ಕಿಸುತ್ತವೆ.