ಭುವನೇಶ್ವರ: ‘ಜವಾದ್’ ಚಂಡಮಾರುತದ ಪ್ರಭಾವದಿಂದ ಒಡಿಶಾದ ಹಲವೆಡೆ ಭಾರಿ ಮಳೆಯಾಗಿರುವುದು ವರದಿಯಾಗಿದೆ.
ಕಳೆದ 6 ಗಂಟೆಗಳಲ್ಲಿ ಬಂಗಾಳ ಕೊಲ್ಲಿಯಲ್ಲಿ ಚಂಡಮಾರುತವು ಉತ್ತರ-ಈಶಾನ್ಯಕ್ಕೆ ಗಂಟೆಗೆ 20 ಕಿ.ಮೀ ವೇಗದಲ್ಲಿ ಚಲಿಸಿದೆ. ಗೋಪಾಲಪುರದಿಂದ 90 ಕಿ.ಮೀ, ಪುರಿಯಿಂದ 120 ಕಿ.ಮೀ, ಪರದೀಪ್‌ನಿಂದ 210 ಕಿ.ಮೀ. ದೂರದಲ್ಲಿ ಕೇಂದ್ರೀಕೃತವಾಗಿದೆ.
ಗಾಂಜಮ್, ಖುದ್ರಾ, ಪುರಿ, ಖೇಂದ್ರಪರ, ಕೇಂದ್ರಪರಾ ಹಾಗೂ ಜಗತ್‌ಸಿಂಗ್‌ಪುರ ದಲ್ಲಿ ಭಾನುವಾರದಿಂದ ಭಾರಿ ಮಳೆಯಾಗುತ್ತಿದೆ. ಕಾಳಿಕೋಟೆಯಲ್ಲಿ ದಾಖಲೆಯ 158 ಎಂ.ಎಂ. ಮಳೆಯಾಗಿದ್ದು, ನಯಾಗಡ ದಲ್ಲಿ 107.5 ಎಂ.ಎಂ.ಮಳೆಯಾಗಿದೆ.