Thursday, 12th December 2024

’ಲೋಕ’ ಚುನಾವಣೆಯಲ್ಲಿ ತಮ್ಮನ್ನು ಸ್ಫರ್ಧೆಯಿಂದ ಮುಕ್ತಗೊಳಿಸಿ: ಜಯಂತ್‌ ಸಿನ್ಹಾ

ವದೆಹಲಿ: ಮುಂಬರುವ ಲೋಕಸಭಾ ಚುನಾವಣೆಯಲ್ಲಿ ತಮ್ಮನ್ನು ನೇರ ಸ್ಫರ್ಧೆಯಿಂದ ಮುಕ್ತಗೊಳಿಸುವಂತೆ ಬಿಜೆಪಿ ಸಂಸದ ಜಯಂತ್‌ ಸಿನ್ಹಾ ಮುಖಂಡರನ್ನು ಕೇಳಿಕೊಂಡಿದ್ದಾರೆ.

ನೇರ ಚುನಾವಣಾ ಕರ್ತವ್ಯಗಳಿಂದ ಮುಕ್ತಗೊಳಿಸುವಂತೆ ಪಕ್ಷದ ಅಧ್ಯಕ್ಷ ಜೆ.ಪಿ. ನಡ್ಡಾರನ್ನು ವಿನಂತಿಸಿದ್ದಾರೆ. ಆರ್ಥಿಕ ಮತ್ತು ಆಡಳಿತದ ವಿಷಯಗಳ ಬಗ್ಗೆ ಪಕ್ಷದೊಂದಿಗೆ ಕೆಲಸ ಮಾಡುವುದನ್ನು ಮುಂದುವರಿಸುವುದಾಗಿ ಜಯಂತ್ ಸಿನ್ಹಾ ಶನಿವಾರ ಹೇಳಿದ್ದಾರೆ.

ಜಯಂತ್‌ ಸಿನ್ಹಾ ಅವರು ಜಾರ್ಖಂಡ್‌ ರಾಜ್ಯದ ಸಂಸದರಾಗಿದ್ದಾರೆ. ಬಿಜೆಪಿ ಹೊಸ ಮುಖಗಳಿಗೆ ಟಿಕೆಟ್ ನೀಡುವ ಬಗ್ಗೆ ಯೋಚಿಸುತ್ತಿದೆ. ಹಾಲಿ ಸಂಸದರು ಹಾಗೂ ಕೆಲವು ಮುಖಂಡರನ್ನು ಪಕ್ಷದ ಕೆಲಸಗಳಿಗೆ ನಿಯೋಜನೆ ಮಾಡಲಾಗುವುದು ಎಂದು ಬಿಜೆಪಿ ಹೇಳಿದೆ.

ದೆಹಲಿಯ ಬಿಜೆಪಿ ಸಂಸದ ಗೌತಮ್ ಗಂಭೀರ್ ಅವರು ತಾವು ಮುಂದಿನ ದಿನಗಳಲ್ಲಿ ಕ್ರಿಕೆಟ್ ಮೇಲೆ ಗಮನ ಕೇಂದ್ರೀಕರಿಸಲು ಬಯಸಿದ್ದಾರೆ. ರಾಜಕೀಯ ಕರ್ತವ್ಯಗಳಿಂದ ತಮ್ಮನ್ನು ಮುಕ್ತಗೊಳಿಸುವಂತೆ ಪಕ್ಷವನ್ನು ಕೇಳಿಕೊಂಡಿದ್ದೇನೆ ಎಂದು ಗಭೀರ್‌ ಈಗಾಗಲೇ ಹೇಳಿಕೊಂಡಿದ್ದಾರೆ.