ನವದೆಹಲಿ: ಐಐಟಿಗಳ ಪ್ರವೇಶಾತಿಗಾಗಿ ನಡೆಸುವ ಜೆಇಇ ಅಡ್ವಾನ್ಸಡ್ 2021ರ ಫಲಿತಾಂಶ ಬಿಡುಗಡೆ ಯಾಗಿದೆ.
ರಾಜಸ್ಥಾನದ ಜೈಪುರ ಮೂಲದ ಮೃದುಲ್ ಅಗರ್ವಾಲ್, ಅತಿ ಹೆಚ್ಚು ಅಂಕಗಳನ್ನು ಗಳಿಸಿ ಇತಿಹಾಸ ರಚಿಸಿ ದ್ದಾನೆ. ದೆಹಲಿಯ ಕಾವ್ಯ ಚೋಪ್ರ ಎಂಬ ವಿದ್ಯಾರ್ಥಿನಿ ಬಾಲಕಿಯರಲ್ಲಿ ಅತಿ ಹೆಚ್ಚು ಅಂಕ ಗಳನ್ನು ಗಳಿಸಿದ್ದಾಳೆ.
ಅರ್ಹತಾ ಪರೀಕ್ಷೆ ಜೆಇಇ ಮೇಯ್ಸ್ನ ಮಾರ್ಚ್ ಸುತ್ತಿನಲ್ಲಿ ಶೇ.100 ಪರ್ಸೆಂಟೈಲ್ ಗಳಿಸಿ, ದೆಹಲಿ ಐಐಟಿ ವಲಯ ದಿಂದ ಜೆಇಇ ಅಡ್ವಾನ್ಸಡ್ ಪರೀಕ್ಷೆ ಬರೆದಿದ್ದ ಮೃದುಲ್ ಅಗರ್ವಾಲ್, 360 ಕ್ಕೆ 348 ಅಂಕ (ಶೇಕಡ 96.6) ಗಳನ್ನು ಗಳಿಸಿ ಪ್ರಥಮ ರಾಂಕ್ ಪಡೆದಿದ್ದಾನೆ. ಇದು ಐಐಟಿ ಪ್ರವೇಶ ಪರೀಕ್ಷೆ ಗಳಲ್ಲಿ ಈವರೆಗೆ ಯಾವುದೇ ಅಭ್ಯರ್ಥಿ ಗಳಿಸಿರುವ ಅತಿ ಹೆಚ್ಚಿನ ಅಂಕವಾಗಿದೆ ಎನ್ನಲಾಗಿದೆ.
ಜೆಇಇ (ಅಡ್ವಾನ್ಸಡ್) 2021ರ ಎರಡೂ ಪತ್ರಿಕೆಗಳಿಗೆ ದೇಶದ ವಿವಿಧೆಡೆಗಳಿಂದ ಒಟ್ಟು 1,41,699 ಅಭ್ಯರ್ಥಿಗಳು ಹಾಜರಾಗಿದ್ದರು. ಅವರಲ್ಲಿ 41,862 ಅಭ್ಯರ್ಥಿಗಳು ಅರ್ಹತೆ ಗಳಿಸಿದ್ದು, ಇವರಲ್ಲಿ 6,452 ವಿದ್ಯಾರ್ಥಿನಿಯ ರಿದ್ದಾರೆ.
ಐಐಟಿ ದೆಹಲಿ ಜೋನ್ಗೆ ಸಲ್ಲುವ ಕಾವ್ಯ ಚೋಪ್ರ, 360ಕ್ಕೆ 286 ಅಂಕಗಳನ್ನು ಪಡೆದು 98ನೇ ಸ್ಥಾನ ಗಳಿಸಿದ್ದಾಳೆ; ವಿದ್ಯಾರ್ಥಿನಿಯರಲ್ಲಿ ಮೊದಲಿ ಗಳಾಗಿದ್ದಾಳೆ.