Thursday, 12th December 2024

ಪುಲ್ವಾಮಾ ಎನ್‌ಕೌಂಟರ್‌: ಜೆಇಎಂ ಕಮಾಂಡರ್ ಶಾಮ್ ಸೋಫಿ ಹತ

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾ ಜಿಲ್ಲೆಯಲ್ಲಿ ಭದ್ರತಾ ಪಡೆಗಳ ಎನ್‌ಕೌಂಟರ್‌ನಲ್ಲಿ ಜೈಶ್-ಎ-ಮೊಹಮ್ಮದ್’ನ ಟಾಪ್ ಕಮಾಂಡರ್ ಶಾಮ್ ಸೋಫಿ ಹತನಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ದಕ್ಷಿಣ ಕಾಶ್ಮೀರದ ಪುಲ್ವಾಮಾ ಜಿಲ್ಲೆಯ ಅವಂತಿಪೋರಾದ ತ್ರಾಲ್ ಪ್ರದೇಶದಲ್ಲಿ ತಿಲ್ವಾನಿ ಮೊಹಲ್ಲಾ ವಗ್ಗದ್ ನಲ್ಲಿ ಭಯೋತ್ಪಾದಕರು ಇರುವ ಬಗ್ಗೆ ಖಚಿತ ಮಾಹಿತಿಗಳ ಮೇಲೆ ಭದ್ರತಾ ಪಡೆಗಳು ಅಲ್ಲಿ ಸುತ್ತುವರಿದು ಶೋಧ ಕಾರ್ಯಾಚರಣೆ ಆರಂಭಿಸಿದವು. ಉಗ್ರರು ಭದ್ರತಾ ಸಿಬ್ಬಂದಿಯ ಮೇಲೆ ಗುಂಡು ಹಾರಿಸಿದ ನಂತರ ಎನ್ಕೌಂಟರ್ ನಡೆಯಿತು.

ಗುಂಡಿನ ಚಕಮಕಿಯಲ್ಲಿ ಉಗ್ರನನ್ನು ಹತ್ಯೆ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪೊಲೀಸ್ ಇನ್ಸ್‌ಪೆಕ್ಟರ್ ಜನರಲ್ (ಕಾಶ್ಮೀರ) ವಿಜಯ್ ಕುಮಾರ್ ಅವರು ಹತ್ಯೆಗೀಡಾದ ಭಯೋತ್ಪಾದಕರನ್ನು ಶಾಮ್ ಸೋಫಿ ಎಂದು ಗುರುತಿಸಲಾಗಿದೆ. ಅವನು ಟಾಪ್ ಜೆಇಎಂ ಕಮಾಂಡರ್ ಆಗಿದ್ದಾನೆ ಎಂದುಐಜಿಪಿ ಕಾಶ್ಮೀರ ವಲಯ ಪೊಲೀಸರ ಟ್ವಿಟರ್ ಹ್ಯಾಂಡಲ್ ಹೇಳಿದೆ.