Thursday, 12th December 2024

ಕುಲ್ಗಾಮ್‌ ಎನ್‌ಕೌಂಟರ್‌: ಜೆಇಎಂ ಭಯೋತ್ಪಾದಕನ ಹತ್ಯೆ

ಕುಲ್ಗಾಮ್‌ : ಜಮ್ಮು ಮತ್ತು ಕಾಶ್ಮೀರದ ಕುಲ್ಗಾಮ್‌ ಜಿಲ್ಲೆಯಲ್ಲಿ ಬುಧವಾರ ರಾತ್ರಿಯಿಂದ ಆರಂಭ ವಾಗಿದ್ದ ಎನ್‌ಕೌಂಟರ್‌ನಲ್ಲಿ ಜೈಷ್‌-ಎ-ಮೊಹಮ್ಮದ್‌ ಉಗ್ರ ಸಂಘಟನೆಯ ಓರ್ವ ಭಯೋತ್ಪಾದಕನನ್ನು ಹೊಡೆದುರಳಿಸಲಾಗಿದೆ.

ಉಗ್ರರೊಂದಿಗಿನ ಜಂಟಿ ಹೋರಾಟದ ಆರಂಭದಲ್ಲೇ ದುರಾದುಷ್ಟವಶಾತ್‌ ಕಾಶ್ಮೀರದ ಪೊಲೀಸ್‌ ಸಿಬ್ಬಂದಿ ರೋಹಿತ್‌ ಕುಮಾರ್‌ ಚಿಬ್‌ ಹುತಾತ್ಮರಾಗಿದ್ದಾರೆ. 34 ಆರ್‌ಆರ್‌ನ ಮೂವರು ಸೈನಿಕರು ಹಾಗೂ ಇಬ್ಬರು ನಾಗರಿಕರು ಗಾಯಗೊಂಡಿದ್ದಾರೆ ಎಂದು ಕಾಶ್ಮೀರ ವಲಯದ ಐಜಿ ವಿಜಯ್‌ ಕುಮಾರ್‌ ತಿಳಿಸಿದ್ದಾರೆ.

ಕುಲ್ಗಾಮ್‌ ಜಿಲ್ಲೆಯ ಪರಿವಾನ್‌ ಗ್ರಾಮದಲ್ಲಿ ಈ ಎನ್‌ಕೌಂಟರ್‌ ನಡೆದಿದೆ. ಎಲ್ಲಾ ಗಾಯಗಾಳುಗಳನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಎಲ್ಲರ ಆರೋಗ್ಯ ಸ್ಥಿರವಾಗಿದೆ. ಕಳೆದ ಹಲವು ದಿನಗಳಿಂದ ಕಾಶ್ಮೀರದ ಗಡಿ ಸಮೀಪದಲ್ಲಿ ಗುಂಡಿನ ದಾಳಿ ನಡೆಯುತ್ತಲೇ ಇದೆ.