Saturday, 27th July 2024

ಗಣಿ ಕುಸಿದು ಓರ್ವ ಬಾಲಕ ಸೇರಿ ಮೂವರ ಸಾವು

ಜಾರ್ಖಂಡ್: ಕಲ್ಲಿದ್ದಲು ಗಣಿಗಾರಿಕೆ ವೇಳೆ ಗಣಿ ಕುಸಿದು ಓರ್ವ ಬಾಲಕ ಸೇರಿದಂತೆ ಮೂವರು ಸಾವನ್ನಪ್ಪಿ, ಹಲವರು ಗಾಯಗೊಂಡಿರುವ ಘಟನೆ ಜಾರ್ಖಂಡ್​ನ ಧನ್ಬಾದ್ ಜಿಲ್ಲೆಯಲ್ಲಿ ಇಂದು ನಡೆದಿದೆ.

ಭೌರಾ ಒಪಿ ಪ್ರದೇಶದ ಸಂ.12ರ ಗಣಿಯಲ್ಲಿ ಅಕ್ರಮ ಗಣಿಕಾರಿಕೆ ವೇಳೆ ದುರಂತ ಜರುಗಿದೆ ಎಂದು ಹೇಳಲಾಗುತ್ತಿದೆ.

ಭಾರತ್ ಕೋಕಿಂಗ್ ಕೋಲ್ ಲಿಮಿಟೆಡ್‌ (ಬಿಸಿಸಿಎಲ್)ನ ಭೌರಾ ಕಾಲೇರಿ ಪ್ರದೇಶದಲ್ಲಿ ಕಲ್ಲಿದ್ದಲು ಅಗೆಯಲೆಂದು ಕಾರ್ಮಿಕರು ಬಂದಿದ್ದರು. ಇದರ ನಡುವೆ ಗಣಿಯ ಶಾಫ್ಟ್​ನ​ ಭಾರಿ ಸದ್ದಿನೊಂದಿಗೆ ಗಣಿ ಕುಸಿದು ಬಿದ್ದಿದೆ. ಇದರಿಂದ ಗಡಿ ಅಗೆಯುತ್ತಿದ್ದ ಕಾರ್ಮಿಕರು ತಮ್ಮನ್ನು ರಕ್ಷಿಸಿಕೊಳ್ಳಲು ಹೊರಗೆ ಓಡಲಾರಂಭಿಸಿದರು. ಆದರೆ, ಅವಶೇಷ ಗಳಡಿ ಹಲವರು ಸಿಲುಕಿದ್ದರು. ಇದರಲ್ಲಿ ಐವರನ್ನು ಹೊರತೆಗೆಯಲಾಗಿದೆ. ಈ ಪೈಕಿ ಮೂವರು ಮೃತಪಟ್ಟಿ ದ್ದಾರೆ.

ಜೆಸಿಬಿ ಮೂಲಕ ರಕ್ಷಣಾ ಕಾರ್ಯ ನಡೆಯುತ್ತಿದೆ. ಘಟನಾ ಸ್ಥಳದಲ್ಲಿ ಪೊಲೀಸ್​ ಅಧಿಕಾರಿಯೊಬ್ಬರು ಪ್ರತಿಕ್ರಿಯಿಸಿ, ಮೇಲ್ನೋಟಕ್ಕೆ ಅಕ್ರಮ ಗಣಿಗಾರಿಕೆ ವೇಳೆ ಘಟನೆ ನಡೆದಿರುವ ಶಂಕೆ ವ್ಯಕ್ತವಾಗಿದೆ. ಕಾರ್ಯ ಮುಗಿದ ಬಳಿಕ ಮೃತರು ಮತ್ತು ಗಣಿಯಲ್ಲಿ ಸಿಕ್ಕಿಬಿದ್ದ ಹಾಗೂ ಗಾಯಗೊಂಡವರ ನಿಖರವಾದ ಸಂಖ್ಯೆ ತಿಳಿಯಲಿದೆ ಎಂದು ಹೇಳಿದ್ದಾರೆ.

ಮೃತ ಮೂವರ ಪೈಕಿ ಅಪ್ರಾಪ್ತ ವಯಸ್ಕನೂ ಸೇರಿದ್ದಾನೆ ಎಂದು ಹೇಳಲಾಗುತ್ತಿದೆ. ಆ ಅಪ್ರಾಪ್ತನ ಮೃತದೇಹವನ್ನು ಪೂರ್ವ ಜಾರಿಯಾ ಜನರಲ್ ಮ್ಯಾನೇಜರ್ ಕಚೇರಿ ಮುಂದೆ ಇಟ್ಟು ಗ್ರಾಮಸ್ಥರು ಹಾಗೂ ಕುಟುಂಬಸ್ಥರು ಪ್ರತಿಭಟನೆ ನಡೆಸಿದ್ದಾರೆ.

error: Content is protected !!