ರಾಂಚಿ: ಮುಂಬರುವ ವಿಧಾನಸಭಾ ಚುನಾವಣೆ(Jharkhand Assembly Election)ಗೆ ಸಜ್ಜಾಗುತ್ತಿರುವ ಜಾರ್ಖಂಡ್ನಲ್ಲಿ ಎನ್ಡಿಎ(NDA) ಮೈತ್ರಿಕೂಟ ಶುಕ್ರವಾರ ಸೀಟು ಹಂಚಿಕೆ(Seat Sharing) ಘೋಷಿಸಿದೆ. ಮುಂಬರುವ ಚುನಾವಣೆಯಲ್ಲಿ ಒಟ್ಟು 81 ಕ್ಷೇತ್ರಗಳಲ್ಲಿ ಬಿಜೆಪಿ 68 ಕ್ಷೇತ್ರಗಳಲ್ಲಿ ಸ್ಪರ್ಧಿಸಲಿದೆ. ಉಳಿದ ಮಿತ್ರಪಕ್ಷಗಳು 13 ಕ್ಷೇತ್ರಗಳಲ್ಲಿ ಕಣಕ್ಕಿಳಿಯುತ್ತಿವೆ. ಈ ಬಾರೀ ಬಿಜೆಪಿ, ಅಖಿಲ ಜಾರ್ಖಂಡ್ ವಿದ್ಯಾರ್ಥಿ ಘಟನೆ(AJSU), ಜನತಾದಳ ಯನೈಟೆಡ್(JDU), ಲೋಕ ಜನಶಕ್ತಿ ಪಕ್ಷ(ರಾಮ ವಿಲಾಸ್)ಗಳು ಜಂಟಿಯಾಗಿ ಕಣಕ್ಕಿಳಿಯುತ್ತಿವೆ.
#WATCH | Ranchi: BJP's Jharkhand assembly election co-incharge and Assam CM Himanta Biswa Sarma says, "Discussions are going on regarding seat sharing. As of now, All Jharkhand Students Union (AJSU) will contest on 10 seats. Janata Dal (United) on 2 seats and Lok Janshakti Party… pic.twitter.com/58xWQKxGgN
— ANI (@ANI) October 18, 2024
ರಾಂಚಿಯ ಬಿಜೆಪಿ ರಾಜ್ಯ ಪ್ರಧಾನ ಕಚೇರಿಯಲ್ಲಿ ಎಜೆಎಸ್ಯು ಪಕ್ಷದೊಂದಿಗೆ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಸೀಟು ಹಂಚಿಕೆಯನ್ನು ಪ್ರಕಟಿಸಿದ ಅಸ್ಸಾಂ ಮುಖ್ಯಮಂತ್ರಿ ಮತ್ತು ಬಿಜೆಪಿಯ ಜಾರ್ಖಂಡ್ ಚುನಾವಣಾ ಸಹ-ಪ್ರಭಾರಿ ಹಿಮಂತ್ ಬಿಸ್ವಾ ಶರ್ಮಾ, ಎಜೆಎಸ್ಯು 10 ಸ್ಥಾನಗಳಲ್ಲಿ ಸ್ಪರ್ಧಿಸಲಿದೆ ಎಂದು ನಾವು ಒಮ್ಮತಕ್ಕೆ ಬಂದಿದ್ದೇವೆ. ಜೆಡಿಯು ಎರಡು ಸ್ಥಾನಗಳಲ್ಲಿ ಮತ್ತು ಎಲ್ಜೆಪಿ ಒಂದು ಸ್ಥಾನದಲ್ಲಿ ಸ್ಪರ್ಧಿಸಲಿದೆ. ಉಳಿದ ಸ್ಥಾನಗಳಲ್ಲಿ ಬಿಜೆಪಿ ಸ್ಪರ್ಧಿಸಲಿದೆ ಎಂದರು.
ಈ ವೇಳೆ ಕೇಂದ್ರ ಕೃಷಿ ಸಚಿವ ಶಿವರಾಜ್ ಚೌಹಾಣ್ ಮತ್ತು ಜಾರ್ಖಂಡ್ ಬಿಜೆಪಿ ಮುಖ್ಯಸ್ಥ ಬಾಬುಲಾಲ್ ಮರಾಂಡಿ ಅವರಲ್ಲದೆ ಎಜೆಎಸ್ಯು ಮುಖ್ಯಸ್ಥ ಸುದೇಶ್ ಮಹ್ತೋ ಮತ್ತು ಇತರ ಪಕ್ಷದ ನಾಯಕರು ಉಪಸ್ಥಿತರಿದ್ದರು. ಎಜೆಎಸ್ಯು ಸಿಲ್ಲಿ, ರಾಮ್ಗಢ, ಗೋಮಿಯಾ, ಜುಗ್ಸಲೈ (ಎಸ್ಸಿ), ಇಚಗಢ, ಲೋಹರ್ದಗಾ (ಎಸ್ಟಿ), ಪಾಕುರ್, ಮನೋಹರಪುರ (ಎಸ್ಟಿ), ಮಾಂಡು ಮತ್ತು ಡುಮ್ರಿ ಸ್ಪರ್ಧಿಸಲಿದೆ. ಜೆಡಿಯು ಜಮ್ಸೆಧ್ಪುರ ಪಶ್ಚಿಮ ಮತ್ತು ತಮರ್ (ಎಸ್ಟಿ) ಸ್ಪರ್ಧಿಸಲಿದ್ದು, ಎಲ್ಜೆಪಿ (ಆರ್) ಚತ್ರಾ (ಎಸ್ಸಿ) ಕ್ಷೇತ್ರಗಳಲ್ಲಿ ಸ್ಪರ್ಧಿಸಲಿದೆ.
ಜಾರ್ಖಂಡ್ನಲ್ಲಿ ನವೆಂಬರ್ 13 ಮತ್ತು ನವೆಂಬರ್ 20 ರಂದು ಎರಡು ಹಂತಗಳಲ್ಲಿ ಮತದಾನ ನಡೆಯಲಿದೆ. ಮತಗಳ ಎಣಿಕೆ ನವೆಂಬರ್ 23 ರಂದು ನಡೆಯಲಿದೆ. ಪ್ರಸ್ತುತ ಜಾರ್ಖಂಡ್ ವಿಧಾನಸಭೆಯ ಅವಧಿಯು ಜನವರಿ 5, 2025 ರಂದು ಕೊನೆಗೊಳ್ಳಲಿದೆ.
ಈ ಸುದ್ದಿಯನ್ನೂ ಓದಿ: Election Commission: ಮಹಾರಾಷ್ಟ್ರ, ಜಾರ್ಖಂಡ್ ಚುನಾವಣೆಗೆ ಮುಹೂರ್ತ ಫಿಕ್ಸ್; ಇಲ್ಲಿದೆ ಡಿಟೇಲ್ಸ್