Friday, 22nd November 2024

ಅನರ್ಹತೆ ಭೀತಿಯಲ್ಲಿ ಜಾರ್ಖಂಡ್ ಮುಖ್ಯಮಂತ್ರಿ

ಜಾರ್ಖಂಡ್ : ಗಣಿ ಗುತ್ತಿಗೆ ಪ್ರಕರಣದಲ್ಲಿ ಸಿಲುಕಿರುವ ಜಾರ್ಖಂಡ್ ಮುಖ್ಯ ಮಂತ್ರಿ ಹೇಮಂತ್ ಸೊರೇನ್ ವಿಧಾನಸಭೆಯಿಂದ ಅನರ್ಹಗೊಳ್ಳುವ ಸಾಧ್ಯತೆಯಿದೆ.

ಬಿಜೆಪಿ, ಹೇಮಂತ್‌ ಸೊರೇನ್‌ರನ್ನು ಶಾಸಕ ಸ್ಥಾನದಿಂದ ಅನರ್ಹಗೊಳಿಸು ವಂತೆ ಕೋರಿತ್ತು. ಗಣಿಗಾರಿಕೆ ಗುತ್ತಿಗೆಯನ್ನು ಸ್ವತಃ ಸಿಎಂ ವಿಸ್ತರಿಸಿದ್ದಾರೆಂದು ಆರೋಪಿಸಿತ್ತು. ಈ ಸಂಬಂಧ ಚುನಾವಣಾ ಸಮಿತಿ ತಯಾರಿಸಿರುವ ವರದಿ ಯನ್ನು ಜಾರ್ಖಂಡ್ ರಾಜಭವನಕ್ಕೆ ಕಳುಹಿಸಲಾಗಿದೆ.

ಸಂವಿಧಾನದ 192ನೇ ವಿಧಿಯ ಅಡಿಯಲ್ಲಿ, ಒಂದು ರಾಜ್ಯದ ಶಾಸಕಾಂಗದ ಸದಸ್ಯರು ಯಾವುದೇ ಅನರ್ಹತೆಗೆ ಒಳಪಟ್ಟಿದ್ದಾ ರೆಯೇ ಎಂಬ ಪ್ರಶ್ನೆ ಉದ್ಭವಿಸಿದರೆ ಅಂತಿಮ ನಿರ್ಧಾರವನ್ನು ರಾಜ್ಯಪಾಲರಿಗೆ ಬಿಡಲಾಗುತ್ತದೆ. ಅಂತಹ ಯಾವುದೇ ಪ್ರಶ್ನೆಗೆ ಯಾವುದೇ ನಿರ್ಧಾರ ಪ್ರಕಟಿಸುವ ಮೊದಲು ರಾಜ್ಯಪಾಲರು ಚುನಾವಣಾ ಆಯೋಗದ ಅಭಿಪ್ರಾಯವನ್ನು ಪಡೆಯುತ್ತಾರೆ.

ಈ ಪ್ರಕರಣ ಸರ್ಕಾರಿ ಒಪ್ಪಂದಗಳ ಅನರ್ಹತೆಗೆ ಸಂಬಂಧಿಸಿದ 1951ರ ಸೆಕ್ಷನ್ 9 ಎ ಅಡಿಯಲ್ಲಿ ಬರುವುದಿಲ್ಲ ಎಂದು ಸೊರೇನ್‌ ಪರ ವಕೀಲರು ವಾದ ವಿವಾದದ ಸಂದರ್ಭದಲ್ಲಿ ಹೇಳಿದ್ದರು.