Thursday, 12th December 2024

ಜಾರ್ಖಂಡ್ ಮುಖ್ಯಮಂತ್ರಿ ಆಪ್ತ ಸಹಾಯಕ ಪ್ರೇಮ್ ಪ್ರಕಾಶ್ ಬಂಧನ

ರಾಂಚಿ: ಜಾರಿ ನಿರ್ದೇಶನಾಲಯ, ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೆನ್ ಅವರ ಆಪ್ತ ಸಹಾಯಕ ಪ್ರೇಮ್ ಪ್ರಕಾಶ್ ಅವರನ್ನು ಬಂಧಿಸಿದೆ. ಪ್ರೇಮ್ ಪ್ರಕಾಶ್ ನಿವಾಸದಿಂದ 2 ಎಕೆ -47 ರೈಫಲ್‌ಗಳನ್ನು ವಶಪಡಿಸಿ ಕೊಂಡಿತ್ತು.

ಅಕ್ರಮ ಗಣಿಗಾರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರೇಮ್ ಪ್ರಕಾಶ್ ಅವರನ್ನು ಬುಧವಾರ ರಾತ್ರಿ ಬಂಧಿಸಲಾಯಿತು. ಅವರನ್ನು ಮನಿ ಲಾಂಡರಿಂಗ್ ಕಾಯ್ದೆ ಯ ನಿಬಂಧನೆಗಳ ಅಡಿಯಲ್ಲಿ ರಾಂಚಿಯಲ್ಲಿ ಬಂಧಿಸಲಾಗಿದೆ.

ಪ್ರೇಮ್ ಪ್ರಕಾಶ್ ಅವರ ಮನೆಯಿಂದ ಎರಡು ಎಕೆ-47 ರೈಫಲ್‌ಗಳು ಮತ್ತು 60 ಕಾಟ್ರಿಡ್ಜ್‌ಗಳನ್ನು ಇಡಿ ವಶಪಡಿಸಿಕೊಂಡಿತ್ತು. 100 ಕೋಟಿ ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಪ್ರೇಮ್ ಪ್ರಕಾಶ್ ಅವರ ಜಾರ್ಖಂಡ್ ನಿವಾಸವನ್ನು ಶೋಧಿಸುವಾಗ ಇಡಿ ಅಧಿಕಾರಿ ಗಳು ಕಬ್ಬಿಣದ ಅಲ್ಮಿರಾದಲ್ಲಿ ಎರಡು ಎಕೆ -47 ಗಳನ್ನು ಇರಿಸಿರುವುದು ಪತ್ತೆಯಾಗಿದೆ.

ಪ್ರೇಮ್ ಪ್ರಕಾಶ್ ಅವರ ಮನೆಯಲ್ಲಿ ರೈಫಲ್‌ಗಳನ್ನು ಇಟ್ಟುಕೊಂಡಿದ್ದಕ್ಕಾಗಿ ಇಬ್ಬರು ಅಧಿಕಾರಿಗಳನ್ನು ಅಮಾನತುಗೊಳಿಸ ಲಾಗಿದೆ ಎಂದು ರಾಂಚಿ ಪೊಲೀಸರು ತಿಳಿಸಿದ್ದಾರೆ.