ರಾಂಚಿ: ಭೂ ಹಗರಣಕ್ಕೆ ಸಂಬಂಧಪಟ್ಟ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿ ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೆನ್ ಅವರಿಗೆ ಜಾರಿ ನಿರ್ದೇಶನಾಲಯ ಶನಿವಾರ ಹೊಸ ಸಮನ್ಸ್ ಜಾರಿ ಮಾಡಿದೆ.
ಜನವರಿ 29 ಅಥವಾ 31 ರಂದು ವಿಚಾರಣೆಗೆ ಹಾಜರಾಗುವಂತೆ ಇಡಿ ಸೊರೆನ್ ಅವರಿಗೆ ಸಮನ್ಸ್ ನೀಡಿದೆ. ಇಲ್ಲದೇ ಹೋದರೆ ವಿಚಾರಣೆಗೆ ಹೋಗಲಿದೆ ಎಂದು ಎಚ್ಚರಿಕೆ ನೀಡಿದೆ.
ಇದಕ್ಕೂ ಮುನ್ನ ಜನವರಿ 25ರಂದು ಇಡಿ ವಿಚಾರಣೆಗೆ ಕಾಲಾವಕಾಶ ನೀಡಲು ಸಿಎಂ ಪರೋಕ್ಷವಾಗಿ ನಿರಾಕರಿಸಿದ್ದರು. ಜನವರಿ 27ರಿಂದ 31ರೊಳಗೆ ಇಡಿ ತನಿಖಾ ತಂಡದ ಮುಂದೆ ಹಾಜರಾಗುವಂತೆ ಇಡಿ ಜನವರಿ 22ರಂದು ಸಿಎಂಗೆ 9ನೇ ಸಮನ್ಸ್ ಕಳುಹಿಸಿತ್ತು.
ಜನವರಿ 20ರಂದು 8ನೇ ಸಮನ್ಸ್‌ನಲ್ಲಿ ಇಡಿ ಅಧಿಕಾರಿಗಳು ಮುಖ್ಯಮಂತ್ರಿ ನಿವಾಸಕ್ಕೆ ತೆರಳಿ ವಿಚಾರಣೆ ನಡೆಸಿದ್ದರು. ಈ ವೇಳೆ ತಂಡ ಸುಮಾರು 7 ಗಂಟೆ ಗಳ ಕಾಲ ಅವರನ್ನು ವಿಚಾರಣೆ ನಡೆಸಿತು.