ಅಸ್ಸಾಂನ ಕೊಕ್ರಜರ್ ಪೊಲೀಸ್ ಠಾಣೆಯಲ್ಲಿ ಪ್ರಮುಖ ಸಮುದಾಯಗಳ ನಡುವಿನ ಕಲಹಕ್ಕೆ ಸಂಬಂಧಿಸಿದಂತೆ ಕೇಸು ದಾಖಲಿಸಲಾಗಿದೆ.
ದಾಖಲೆಯ ಪ್ರಕಾರ, ಕೆಲವು ದಿನಗಳ ಹಿಂದೆ ಮೇವಾನಿ ಮಾಡಿದ ಟ್ವೀಟ್ ಮೇಲೆ ಎಫ್‌ಐಆರ್ ದಾಖಲಿಸಲಾಗಿದೆ. ಆದರೆ, ಟ್ವೀಟ್ ಅನ್ನು ಟ್ವಿಟರ್ ತಡೆ ಹಿಡಿದಿದೆ. ಅದು ನಾಥೂರಾಂ ಗೋಡ್ಸೆಯ ಬಗ್ಗೆ ಮೆವಾನಿ ಮಾಡಿದ್ದ ಟ್ವೀಟ್ ಆಗಿತ್ತು. ಮೆವಾನಿ ಅವರನ್ನು ಇಂದು ಮುಂಜಾನೆ ವಿಮಾನದ ಮೂಲಕ ಅಸ್ಸಾಂಗೆ ಕರೆದೊಯ್ಯಲಾಯಿತು.
ಮೇವಾನಿ ಬನಸ್ಕಾಂತದ ವಡ್ಗಾಮ್ ಕ್ಷೇತ್ರದಿಂದ ಸ್ವತಂತ್ರ ಶಾಸಕರಾಗಿದ್ದು, ಇತ್ತೀಚೆಗಷ್ಟೇ ಕಾಂಗ್ರೆಸ್ ಸೇರಿದ್ದರು. ಬುಧವಾರ ರಾತ್ರಿ ಪಾಲನ್‌ಪುರ ಸರ್ಕ್ಯೂಟ್ ಹೌಸ್‌ನಿಂದ ಅಸ್ಸಾಂ ಪೊಲೀಸರು ಅವರನ್ನು ಬಂಧಿಸಿದ್ದಾರೆ ಎಂದು ಮೇವಾನಿ ಅವರ ಕಚೇರಿ ಹೇಳಿಕೆಯಲ್ಲಿ ತಿಳಿಸಿದೆ.
ಬಂಧನದ ವಿಚಾರ ತಿಳಿದ ಗುಜರಾತ್ ಕಾಂಗ್ರೆಸ್ ಅಧ್ಯಕ್ಷ ಜಗದೀಶ್ ಠಾಕೂರ್ ಮತ್ತು ಇತರ ಕಾಂಗ್ರೆಸ್ ನಾಯಕರು ಅಹಮದಾಬಾದ್ ವಿಮಾನ ನಿಲ್ದಾಣಕ್ಕೆ ಧಾವಿಸಿ ಬಿಜೆಪಿ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು.