Saturday, 16th November 2024

JK Election: ಕಣಿವೆ ರಾಜ್ಯದಲ್ಲಿ ಕೊನೆಯ ಹಂತದ ಮತದಾನ; ಗರಿಷ್ಠ ವೋಟಿಂಗ್‌ ನಿರೀಕ್ಷೆ

JK election

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದಲ್ಲಿ ವಿಧಾನಸಭೆ ಚುನಾವಣೆ(JK Election)ಯ ಮೂರನೇ ಮತ್ತು ಕೊನೆಯ ಹಂತದ ಮತದಾನ(Voting) ನಡೆಯುತ್ತಿದ್ದು, ಇದುವರೆಗೆ ಶೇ.11.6ರಷ್ಟು ವೋಟಿಂಗ್‌ ಆಗಿದೆ ಎಂಬ ಬರದಿ ಹೊರಬಿದ್ದಿದೆ. ಒಟ್ಟು 90 ಕ್ಷೇತ್ರಗಳಲ್ಲಿ ಇಂದು 40ಕ್ಷೇತ್ರಗಳಿಗೆ ಇಂದು ಮತದಾನ ನಡೆಯುತ್ತಿದೆ. 40ಕ್ಷೇತ್ರಗಳಲ್ಲಿ 24ಜಮ್ಮು ಪ್ರಾಂತ್ಯ ಮತ್ತು ಉಳಿದ ಕ್ಷೇತ್ರಗಳು ಕಾಶ್ಮೀರಕ್ಕೆ ಸೇರಿವೆ.

ಜಮ್ಮು ವಿಭಾಗದ ಜಮ್ಮು, ಸಾಂಬಾ, ಕಥುವಾ ಮತ್ತು ಉಧಂಪುರ ಜಿಲ್ಲೆಗಳ 40 ಕ್ಷೇತ್ರಗಳಲ್ಲಿ ಮತ್ತು ಕಾಶ್ಮೀರ ಕಣಿವೆಯ ಬಾರಾಮುಲ್ಲಾ ಮತ್ತು ಕುಪ್ವಾರ ಜಿಲ್ಲೆಗಳಲ್ಲಿ ಮತದಾನ ನಡೆಯುತ್ತಿದೆ. ಜಮ್ಮು ಜಿಲ್ಲೆಯಲ್ಲಿ 11, ಸಾಂಬಾ ಮೂರು, ಕಥುವಾ 6 ಮತ್ತು ಉಧಮ್‌ಪುರ ನಾಲ್ಕು ವಿಧಾನಸಭಾ ಕ್ಷೇತ್ರಗಳನ್ನು ಹೊಂದಿದ್ದರೆ, ಬಾರಾಮುಲ್ಲಾ ಏಳು, ಬಂಡಿಪೋರಾ ಮೂರು ಮತ್ತು ಕುಪ್ವಾರ ಜಿಲ್ಲೆಯಲ್ಲಿ ಆರು ಸ್ಥಾನಗಳನ್ನು ಹೊಂದಿದೆ.

ಇನ್ನು ಮತದಾನ ಶುರುವಾಗುವ ಮುನ್ನ ಎಕ್ಸ್‌ನಲ್ಲಿ ಪೋಸ್ಟ್‌ವೊಂದನ್ನು ಮಾಡಿದ ಪ್ರಧಾನಿ ಮೋದಿ, ‘ಪ್ರಜಾಪ್ರಭುತ್ವದ ಹಬ್ಬವನ್ನು ಯಶಸ್ವಿಗೊಳಿಸಲು ಮತದಾರರು ಮುಂದೆ ಬಂದು ಮತ ಚಲಾಯಿಸಬೇಕು’ ಎಂದು ಮನವಿ ಮಾಡಿದ್ದಾರೆ. “ಮೊದಲ ಬಾರಿಗೆ ಮತದಾನ ಮಾಡಲು ಹೊರಟಿರುವ ಯುವ ಸ್ನೇಹಿತರು ಮತ್ತು ಮಹಿಳಾ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವ ನಿರೀಕ್ಷೆ ಇದೆ ಎಂದು ಹೇಳಿದ್ದಾರೆ.

ಈ ಹಂತದಲ್ಲಿ ಗರಿಷ್ಠ ಮತದಾನವಾಗುವ ನಿರೀಕ್ಷೆ ಇದೆ. ಮೊದಲ ಹಂತದ ಮತದಾನವು 2014 ರ ಮತದಾನಕ್ಕೆ ಹೋಲಿಸಿದರೆ ದಾಖಲಾದ ಅಂಕಿ ಅಂಶಕ್ಕಿಂತ ಕಡಿಮೆಯಾಗಿದೆ. ಒಂದು ಕಾಲದಲ್ಲಿ ಭಯೋತ್ಪಾದಕರ ಪ್ರಾಬಲ್ಯವಿದ್ದ ಕೆಲವು ಪ್ರದೇಶಗಳಲ್ಲಿ ನಡೆದ ಎರಡನೇ ಹಂತದ ಮತದಾನ ಪ್ರಕ್ರಿಯೆಯಲ್ಲೂ ಕಡಿಮೆ ವೋಟಿಂಗ್‌ ಆಗಿತ್ತು.

ಸೆಪ್ಟೆಂಬರ್ 18 ರಂದು ನಡೆದ ಮೊದಲ ಹಂತದ ಚುನಾವಣೆಯಲ್ಲಿ ಮತದಾನದ ಪ್ರಮಾಣ ಅಧಿಕವಾಗಿತ್ತು. ಚುನಾವಣಾ ಆಯೋಗದ ಅಂಕಿಅಂಶಗಳ ಪ್ರಕಾರ ಏಳು ಜಿಲ್ಲೆಗಳ 24 ಕ್ಷೇತ್ರಗಳಲ್ಲಿ ಮತದಾನ ನಡೆದಿದ್ದು, ಶೇ.61.13ರಷ್ಟು ಮತದಾನವಾಗಿದೆ. ಇದು 2014 ರ ದಾಖಲೆಯ ಅಂಕಿಅಂಶಕ್ಕಿಂತ ಇನ್ನೂ ಕಡಿಮೆಯಾಗಿದೆ. ಎರಡನೇ ಹಂತದ ಚುನಾವಣೆಯಲ್ಲಿ ಶೇಕಡಾ 56 ರಷ್ಟು ಮತದಾನವಾಗಿದೆ.

ಈ ಬಾರಿ ಜಮ್ಮು ಮತ್ತು ಕಾಶ್ಮೀರದಲ್ಲಿ ಬಿಜೆಪಿ, ಮೆಹಬೂಬಾ ಮುಫ್ತಿ ಅವರ ಪೀಪಲ್ಸ್ ಡೆಮಾಕ್ರಟಿಕ್ ಪಾರ್ಟಿ ಮತ್ತು ನ್ಯಾಷನಲ್ ಕಾನ್ಫರೆನ್ಸ್-ಕಾಂಗ್ರೆಸ್ ಮೈತ್ರಿಕೂಟದ ನಡುವೆ ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ. ಸೆಪ್ಟೆಂಬರ್ 18 ಮತ್ತು 25 ರಂದು ಮೊದಲ ಎರಡು ಸುತ್ತಿನ ಚುನಾವಣೆ ನಡೆದಿದ್ದು, ಅಕ್ಟೋಬರ್ 8 ರಂದು ಮತ ಎಣಿಕೆ ನಡೆಯಲಿದೆ.

2024 ರ ಲೋಕಸಭಾ ಚುನಾವಣೆಯ ಕುರಿತು ಮಾತನಾಡುವುದಾದರೆ, ನ್ಯಾಷನಲ್ ಕಾನ್ಫರೆನ್ಸ್ 11 ಸ್ಥಾನಗಳಲ್ಲಿ, ಪಿಡಿಪಿ 5, ಕಾಂಗ್ರೆಸ್ 4 ಮತ್ತು ಬಿಜೆಪಿ 3 ಸ್ಥಾನಗಳಲ್ಲಿ ಮುಂದಿದೆ. 2019 ರ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ 9, ನ್ಯಾಷನಲ್ ಕಾನ್ಫರೆನ್ಸ್ 6, ಪಿಡಿಪಿ 4 ಮತ್ತು ಬಿಜೆಪಿ 2 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿತ್ತು. 2014ರಲ್ಲಿ ನ್ಯಾಷನಲ್ ಕಾನ್ಫರೆನ್ಸ್ 11, ಪಿಡಿಪಿ 5, ಕಾಂಗ್ರೆಸ್ ಮತ್ತು ಬಿಜೆಪಿ ತಲಾ ಮೂರು ಸ್ಥಾನಗಳನ್ನು ಗಳಿಸಿದ್ದವು.

ಈ ಸುದ್ದಿಯನ್ನೂ ಓದಿ: JK Election: ಜಮ್ಮು ಕಾಶ್ಮೀರ ಚುನಾವಣೆ; ಸಮೀಕ್ಷೆ ಹೇಳೋದೇನು?