ಶ್ರೀನಗರ: ಕೆಲವು ದಿನಗಳ ಹಿಂದೆ ಗ್ರಾಮ ರಕ್ಷಣಾ ಸಿಬ್ಬಂದಿ(VGD)ಯನ್ನು ಅಪಹರಿಸಿ ಹತ್ಯೆಗೈದ ಉಗ್ರರನ್ನು ಗುರಿಯಾಗಿಸಿ ಜಮ್ಮು-ಕಾಶ್ಮೀರದಲ್ಲಿ ಸೇನಾ ಕಾರ್ಯಾಚರಣೆ(J&K Encounter) ನಡೆದಿದೆ. ಕಿಶ್ತ್ವಾರ್‌ನ ದೂರದ ಅರಣ್ಯ ಪ್ರದೇಶದಲ್ಲಿ ಭಾನುವಾರ ಸೇನೆ ಮತ್ತು ಉಗ್ರರ ನಡುವೆ ಭಾರೀ ಗುಂಡಿನ ಚಕಮಕಿ ನಡೆದಿದ್ದು, ಸುಮಾರು ಮೂರರಿಂದ ನಾಲ್ಕು ಉಗ್ರರು ಸೇನೆಗೆ ಕೈಗೆ ಸಿಕ್ಕಿ ಬಿದ್ದಿದ್ದಾರೆ ಎನ್ನಲಾಗಿದೆ. ಇನ್ನು ಗುಂಡಿನ ಚಕಮಕಿಯಲ್ಲಿ ಮೂವರು ಯೋಧರಿಗೆ ಗಂಭೀರ ಗಾಯಗಳಾಗಿವೆ.
ಕಳೆದ 24 ಗಂಟೆಗಳಲ್ಲಿ ಭಯೋತ್ಪಾದಕರೊಂದಿಗೆ ನಡೆದ ಮೂರನೇ ಗುಂಡಿನ ಚಕಮಕಿ ಇದಾಗಿದೆ. ಸೇನೆ ಮತ್ತು ಪೋಲೀಸರ ಜಂಟಿ ಶೋಧ ತಂಡಗಳು ಬೆಳಗ್ಗೆ 11 ಗಂಟೆ ಸುಮಾರಿಗೆ ಅಡಗಿ ಕುಳಿತಿದ್ದ ಭಯೋತ್ಪಾದಕರ ಸೆರೆಗೆ ಕಾರ್ಯಾಚರಣೆ ಕೈಗೆತ್ತಿಕೊಂಡಿದ್ದವು. ಈ ವೇಳೆ ಭಾರೀ ಗುಂಡಿನ ಚಕಮಕಿ ನಡೆದಿದ್ದು, ಸುಮಾರು ಮೂರ್ನಾಲ್ಕು ಉಗ್ರರು ಸಿಕ್ಕಿಬಿದ್ದಿರುವ ಶಂಕೆ ಇದೆ.
#WATCH | Kishtwar, J&K: Encounter underway at Keshwan, Kishtwar between terrorists and security forces. 3-4 terrorists are believed to be trapped. This is believed to be the same group which killed 2 VDG members of a village in Kuntwara on November 7.
— ANI (@ANI) November 10, 2024
(Visuals deferred by… pic.twitter.com/emu1Mezs3n
ಇಬ್ಬರು VDGಗಳ ಅಪಹರಣ, ಹತ್ಯೆಯಲ್ಲಿ ಇದೇ ಉಗ್ರರು ಭಾಗಿ
ಈ ವಾರದ ಆರಂಭದಲ್ಲಿ 2 ಮುಗ್ಧ ಗ್ರಾಮಸ್ಥರ ಅಪಹರಣ ಮತ್ತು ಹತ್ಯೆಯಲ್ಲಿ ಭಾಗಿಯಾಗಿದ್ದು ಇದೇ ಉಗ್ರರು ಎಂದು ಅಧಿಕಾರಿಗಳು ಹೇಳಿದರು.
ಜಮ್ಮು ಮತ್ತು ಕಾಶ್ಮೀರ (Jammu and Kashmir)ದ ಕಿಶ್ತ್ವಾರ್ (Kishtwar) ಜಿಲ್ಲೆಯಲ್ಲಿ ಗುರುವಾರ (ನ. 7) ಭಯೋತ್ಪಾದಕರಿಂದ ಹತರಾಗಿದ್ದ ಇಬ್ಬರು ವಿಲೇಜ್ ಡಿಫೆನ್ಸ್ ಗಾರ್ಡ್(VDGs)ಗಳ ಮೃತದೇಹ ನಿನ್ನೆ ಪತ್ತೆಯಾಗಿತ್ತು. ಓಹ್ಲಿ-ಕುಂಟ್ವಾರಾ ಗ್ರಾಮದ ನಿವಾಸಿಗಳಾದ 45 ವರ್ಷದ ನಜೀರ್ ಅಹ್ಮದ್ ಮತ್ತು 33 ವರ್ಷದ ಕುಲದೀಪ್ ಕುಮಾರ್ ಅವರನ್ನು ಗುರುವಾರ ಮುಂಜ್ಲಾ ಧಾರ್ ಅರಣ್ಯದಲ್ಲಿ ಉಗ್ರರು ಹತ್ಯೆ ಮಾಡಿದ್ದರು.
ಜೈಶ್-ಎ-ಮೊಹಮ್ಮದ್ ಭಯೋತ್ಪಾದಕ ಸಂಘಟನೆಯ ಅಂಗಸಂಸ್ಥೆಯಾದ ಕಾಶ್ಮೀರ್ ಟೈಗರ್ಸ್ ಈ ಹತ್ಯೆಯ ಹೊಣೆ ಹೊತ್ತುಕೊಂಡಿದೆ. “ಇಬ್ಬರು ವಿಡಿಜಿಗಳ ಮೃತದೇಹವನ್ನು ಪೊಲೀಸರು ಮತ್ತು ಸೇನೆಯ ತಂಡವು ವಶಪಡಿಸಿಕೊಂಡಿದೆ” ಎಂದು ಜಮ್ಮುವಿನ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ (ಎಡಿಜಿಪಿ) ಆನಂದ್ ಜೈನ್ ತಿಳಿಸಿದ್ದಾರೆ.
ಭಯೋತ್ಪಾದಕ ಚಟುವಟಿಕೆ ತೀವ್ರವಾಗಿದ್ದ ಹಿನ್ನೆಲೆಯಲ್ಲಿ1990ರ ದಶಕದಲ್ಲಿ ಮೊದಲ ಬಾರಿಗೆ ವಿಡಿಜಿಗಳನ್ನು ನೇಮಿಸಲಾಯಿತು. ಬಳಿಕ 2000ದಲ್ಲಿ ವಿಸರ್ಜಿಸಲಾಯಿತು. ಆದರೆ ಜಮ್ಮು ಮತ್ತು ಕಾಶ್ಮೀರದಲ್ಲಿ ಮತ್ತೆ ಭಯೋತ್ಪಾದಕ ದಾಳಿ ತೀವ್ರಗೊಂಡ ಹಿನ್ನೆಲೆಯಲ್ಲಿ 2022ರ ಆಗಸ್ಟ್‌ನಲ್ಲಿ ವಿಡಿಜಿಗಳನ್ನು ಮತ್ತೆ ನೇಮಿಸಲಾಯಿತು. ಗ್ರಾಮ ಸ್ವಯಂಸೇವಕರು ಮತ್ತು ಪೊಲೀಸ್ ಅಧಿಕಾರಿಗಳನ್ನು ಒಳಗೊಂಡ ವಿಡಿಜಿಗಳಿಗೆ ಶಸ್ತ್ರಾಸ್ತ್ರ ತರಬೇತಿ ನೀಡುವ ಜವಾಬ್ದಾರಿಯನ್ನು ಸಿಆರ್‌ಪಿಎಫ್‌ಗೆ ನೀಡಲಾಗಿದೆ. ಇತ್ತೀಚಿನ ಅಧಿಕೃತ ಅಂಕಿಅಂಶಗಳ ಜಮ್ಮು ಮತ್ತು ಕಾಶ್ಮೀರದಲ್ಲಿ ಪ್ರದೇಶದಲ್ಲಿ 4,125 ವಿಡಿಜಿಗಳಿದ್ದಾರೆ.
ಈ ಸುದ್ದಿಯನ್ನೂ ಓದಿ: Terror Attack: ಇಬ್ಬರು ವಿಲೇಜ್ ಡಿಫೆನ್ಸ್ ಗಾರ್ಡ್‌ಗಳ ಮೃತದೇಹ ಪತ್ತೆ; ಉಗ್ರರ ಪತ್ತೆಗೆ ತೀವ್ರಗೊಂಡ ಶೋಧ ಕಾರ್ಯ