ಶ್ರೀನಗರ: ಜಮ್ಮು-ಕಾಶ್ಮೀರದಲ್ಲಿ ವಿಶೇಷ ಸ್ಥಾನಮಾನ(JK Special Status) ಮರುಸ್ಥಾಪನೆ ವಿಚಾರ ವಿಧಾನಸಭೆಯಲ್ಲಿ ಕೋಲಾಹಲವನ್ನೇ ಸೃಷ್ಟಿಸಿದೆ. ಬಿಜೆಪಿ ಸದಸ್ಯರ ಪ್ರತಿಭಟನೆಯ ನಡುವೆಯೇ ಜಮ್ಮು ಮತ್ತು ಕಾಶ್ಮೀರ ವಿಧಾನಸಭೆಯು ಬುಧವಾರ ಸಂವಿಧಾನದ 370 ನೇ ವಿಧಿಯನ್ನು ಮರುಸ್ಥಾಪಿಸುವ ನಿರ್ಣಯವನ್ನು ಅಂಗೀಕರಿಸಿದೆ.
ಇಂದು ಜಮ್ಮು-ಕಾಶ್ಮೀರ ಸದನ ಸಭೆಯ ನಂತರ ನ್ಯಾಶನಲ್ ಕಾನ್ಫರೆನ್ಸ್ ಹಿರಿಯ ನಾಯಕ ಮತ್ತು ಡಿಸಿಎಂ ಸುರೀಂದರ್ ಸಿಂಗ್ ಚೌಧರಿ ಅವರು ಸಂವಿಧಾನ ಪರಿಚ್ಛೇದ 370 ಮರುಸ್ಥಾಪನೆ ಕುರಿತು ನಿರ್ಣಯವನ್ನು ಮಂಡಿಸಿದರು. ನಿರ್ಣಯ ಮಂಡಣೆಯಾಗುತ್ತಿದ್ದಂತೆ ಗದ್ದಲ ಸೃಷ್ಟಿಸಿದ ಬಿಜೆಪಿ ನಾಯಕರು ತೀವ್ರ ವಿರೋಧ ವ್ಯಕ್ತಪಡಿಸಿದರು. ಅಲ್ಲದೇ ಅಧಿಕಾರದಲ್ಲಿರುವ ನ್ಯಾಷನಲ್ ಕಾನ್ಫರೆನ್ಸ್ ನೇತೃತ್ವದ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಲು ಪ್ರಾರಂಭಿಸಿದರು.
Jammu Kashmir Assembly Update : विधानसभा में फिर बवाल, 'Jai Shree Ram' के नारे का Video वायरल | BJP
— Amar Ujala (@AmarUjalaNews) November 6, 2024
अन्य खबरों के लिए लिंक पर क्लिक करें- https://t.co/EizwxAPX28 #jammuandkashmir #jammukashmirassembly #jaishreeram pic.twitter.com/X89Co7rMMj
ಬಿಜೆಪಿ ಶಾಸಕರು “ಆಗಸ್ಟ್ 5 ಜಿಂದಾಬಾದ್”, “ಜೈ ಶ್ರೀ ರಾಮ್”, “ವಂದೇ ಮಾತರಂ”, “ದೇಶ ವಿರೋಧಿ ಅಜೆಂಡಾ ನಹೀ ಚಲೇಗಾ”, “ಜಮ್ಮು ವಿರೋಧಿ ಅಜೆಂಡಾ ನಹೀ ಚಲೇಗಾ”, “ಪಾಕಿಸ್ತಾನಿ ಅಜೆಂಡಾ ನಹೀ ಚಲೇಗಾ” ಘೋಷಣೆಗಳನ್ನು ಕೂಗಿದರು. ಕೊನೆಗೆ ಸ್ಪೀಕರ್ ಅಬ್ದುರ್ ರಹೀಮ್ ರಾಥರ್ ಕಲಾಪವನ್ನು ಮುಂದೂಡಿದರು.
ಐದು ವರ್ಷಗಳ ಹಿಂದೆ, ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಮತ್ತು ಸವಲತ್ತುಗಳನ್ನು ನೀಡುವ 370 ನೇ ವಿಧಿಯನ್ನು ಹಿಂತೆಗೆದುಕೊಂಡಿತು. ಈ ಕ್ರಮವು ಕಾನೂನು ಸಮರಕ್ಕೆ ಕಾರಣವಾಗಿತ್ತು. ಮತ್ತು ಕಳೆದ ವರ್ಷದ ಡಿಸೆಂಬರ್‌ನಲ್ಲಿ, ಸುಪ್ರೀಂ ಕೋರ್ಟ್ 370 ನೇ ವಿಧಿಯನ್ನು “ತಾತ್ಕಾಲಿಕ” ನಿಬಂಧನೆ ಎಂದು ಪರಿಗಣಿಸಿ, ರದ್ದುಗೊಳಿಸುವಿಕೆಯನ್ನು ಎತ್ತಿಹಿಡಿದಿತ್ತು.
ಆರ್ಟಿಕಲ್ 370 ರದ್ದು ಮಾಡಿದ ನಂತರ ಜಮ್ಮು ಮತ್ತು ಕಾಶ್ಮೀರವನ್ನು ಪುನರ್ರಚಿಸಲಾಗಿತ್ತು. ರಾಜ್ಯವನ್ನು ಜಮ್ಮು-ಕಾಶ್ಮೀರ ಮತ್ತು ಲಡಾಖ್ ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ ವಿಂಗಡಿಸಲಾಯಿತು. ಇದಕ್ಕೆ ಜಮ್ಮು-ಕಾಶ್ಮೀರ ಜನಪ್ರತಿನಿಧಿಗಳಿಂದ ಭಾರೀ ವಿರೋಧ ವ್ಯಕ್ತವಾಗಿತ್ತು. ಇನ್ನು ಒಮರ್ ಅಬ್ದುಲ್ಲಾ ಅವರು ಸಿಎಂ ಆಗಿ ಅಧಿಕಾರ ಸ್ವೀಕರಿಸಿದ ಎರಡೇ ದಿನದಲ್ಲಿ ಕರೆದಿದ್ದ ಸಚಿವ ಸಂಪುಟ ಸಭೆಯಲ್ಲಿ ಜಮ್ಮು-ಕಾಶ್ಮೀರದ ರಾಜ್ಯ ಸ್ಥಾನಮಾನ ಮರುಸ್ಥಾಪನೆಯ ನಿರ್ಣಯವನ್ನು ಅಂಗೀಕರಿಸಿತ್ತು.
ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಉಪಮುಖ್ಯಮಂತ್ರಿ ಸುರೀಂದರ್ ಚೌಧರಿ ಮತ್ತು ಸಚಿವರಾದ ಸಕೀನಾ ಮಸೂದ್ ಇಟೂ, ಜಾವೇದ್ ಅಹ್ಮದ್ ರಾಣಾ, ಜಾವೈದ್ ಅಹ್ಮದ್ ದಾರ್ ಮತ್ತು ಸತೀಶ್ ಶರ್ಮಾ ಉಪಸ್ಥಿತರಿದ್ದರು. ನಿರ್ಣಯದ ಕರಡನ್ನು ಸಿದ್ಧಪಡಿಸಲಾಗಿದ್ದು, ಪ್ರಧಾನಿ ನರೇಂದ್ರ ಮೋದಿ ಅವರಿಗೆ ಹಸ್ತಾಂತರಿಸಿದ್ದರು.
ಈ ಸುದ್ದಿಯನ್ನೂ ಓದಿ: JK Special Status: ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ; ವಿಧಾನಸಭೆಯಲ್ಲಿ ನಿರ್ಣಯ ಪಾಸ್
ಇದರ ಬೆನ್ನಲ್ಲೇ ಈ ಬಗ್ಗೆ ನೂತನ ಮುಖ್ಯಮಂತ್ರಿ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಅಕ್ಟೋಬರ್ 23ರಂದು ಹೊಸದಿಲ್ಲಿಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah) ಅವರನ್ನು ಭೇಟಿಯಾಗಿ ಚರ್ಚೆ ನಡೆಸಿದ್ದರು. ಈ ವೇಳೆ ಅಮಿತ್ ಶಾ ಅವರು ಹೊಸದಾಗಿ ಆಯ್ಕೆಯಾದ ಸರ್ಕಾರಕ್ಕೆ ಕೇಂದ್ರದ ಸಂಪೂರ್ಣ ಬೆಂಬಲದ ಭರವಸೆ ನೀಡಿದರು ಮತ್ತು ರಾಜ್ಯಸ್ಥಾನ ಪುನಃ ಸ್ಥಾಪಿಸುವ ಬಗ್ಗೆ ಧನಾತ್ಮಕವಾಗಿ ಪ್ರತಿಕ್ರಿಯಿಸಿದ್ದರು.