Saturday, 14th December 2024

ಜೆಎನ್‌ಯು: ಪ್ರತಿಭಟನೆ, ಹಿಂಸಾಚಾರ ತಡೆಗೆ ಹೊಸ ನಿಯಮಗಳ ಜಾರಿ

ವದೆಹಲಿ: ಪ್ರತಿಭಟನೆ, ಹಿಂಸಾಚಾರ ತಡೆಗಟ್ಟಲು ಜವಾಹರಲಾಲ್ ನೆಹರು ವಿಶ್ವವಿದ್ಯಾಲಯ ಹೊಸ ನಿಯಮಗಳನ್ನು ಜಾರಿಗೊಳಿಸಿದೆ.

ಕ್ಯಾಂಪಸ್‌ನಲ್ಲಿ ಧರಣಿಗಳನ್ನು ನಡೆಸಿದರೆ ವಿದ್ಯಾರ್ಥಿಗಳಿಗೆ 20 ಸಾವಿರ ರೂಪಾಯಿ ದಂಡ ವಿಧಿಸಬಹುದು. ಹಿಂಸಾಚಾರರಕ್ಕೆ ಕಾರಣವಾದರೇ ಕಾಲೇಜು ಪ್ರವೇಶ ರದ್ದತಿ ಎದುರಿಸಬಹುದು ಅಥವಾ 30 ಸಾವಿರ ರೂಪಾಯಿ ವರೆಗೆ ದಂಡ ವಿಧಿಸಬಹುದು.

ಪ್ರಧಾನಿ ನರೇಂದ್ರ ಮೋದಿ ಕುರಿತಾದ ಬಿಬಿಸಿ ಸಾಕ್ಷ್ಯಚಿತ್ರದ ಪ್ರದರ್ಶನದ ವಿಚಾರದಲ್ಲಿ ವಿಶ್ವವಿದ್ಯಾಲಯ ಭಾರೀ ಪ್ರತಿಭಟನೆಗೆ ಸಾಕ್ಷಿಯಾದ ನಂತರ ಹೊಸ ನಿಯಮಗಳು ಜಾರಿಗೆ ಬಂದಿದೆ.

ಹಿಂಸಾಚಾರ ತಡೆಗಟ್ಟುವಿಕೆ, ಜೂಜಾಟದಲ್ಲಿ ತೊಡಗುವುದು, ಹಾಸ್ಟೆಲ್ ಕೊಠಡಿಗಳನ್ನು ಅನಧಿಕೃತವಾಗಿ ವಶಪಡಿಸಿಕೊಳ್ಳುವುದು, ನಿಂದನೀಯ, ಅವಹೇಳನಕಾರಿ ಭಾಷೆಯ ಬಳಕೆ ಮತ್ತು ಫೋರ್ಜರಿ ಮಾಡುವುದು ಸೇರಿದಂತೆ 17 “ಅಪರಾಧಗಳಿಗೆ” ಶಿಕ್ಷೆಗಳನ್ನು ಪಟ್ಟಿ ಮಾಡಲಾಗಿದೆ.

ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ತಿನ ಜೆಎನ್‌ಯು ಕಾರ್ಯದರ್ಶಿ ವಿಕಾಸ್ ಪಟೇಲ್, ಹೊಸ ನಿಯಮಗಳನ್ನು “ತುಘಲಕಿ” ಎಂದು ಕರೆದಿದ್ದು, ಹಳೆಯ ನೀತಿ ಸಂಹಿತೆ ಸಾಕಷ್ಟು ಪರಿಣಾಮಕಾರಿಯಾಗಿದೆ. ಈ “ಕಠಿಣ” ನೀತಿ ಸಂಹಿತೆಯನ್ನು ಹಿಂತೆಗೆದುಕೊಳ್ಳ ಬೇಕೆಂದು ಒತ್ತಾಯಿಸಿದ್ದಾರೆ.