Saturday, 23rd November 2024

ಜಾಬ್ ಫಾರ್ ಜಾಬ್ ಸ್ಕೀಮ್ ಘೋಷಿಸಿದ ಟಾಟಾ ಸ್ಟೀಲ್ ಕಂಪನಿ

ಜಮ್ಶೆಡ್‌ಪುರ: ಟಾಟಾ ಸ್ಟೀಲ್ ಕಂಪನಿಯಲ್ಲಿ ನಿರ್ದಿಷ್ಟ ಅವಧಿಗೆ ಸೇವೆ ಸಲ್ಲಿಸಿದ ಉದ್ಯೋಗಿಗಳಿಗೆ ಆರಂಭಿಕ ಬೇರ್ಪಡಿಕೆ ಮತ್ತು ಜಾಬ್ ಫಾರ್ ಜಾಬ್ ಸ್ಕೀಮ್ ಅನ್ನು ಘೋಷಿಸಲಾಗಿದೆ. ಕಂಪನಿಯ ಉದ್ಯೋಗಿಗಳು ಈ ಯೋಜನೆಗಳಿಗೆ ಜೂನ್ 1 ರಿಂದ ಜೂನ್ 30 ರವರೆಗೆ ಅರ್ಜಿ ಸಲ್ಲಿಸಬಹುದು.

ಸ್ಕೀಮ್ ಅಡಿಯಲ್ಲಿ ಉದ್ಯೋಗಿಗಳು ತಮ್ಮ ಅವಲಂಬಿತರನ್ನು ಹೆಸರಿಸುವ ಮೂಲಕ ತಮ್ಮ ಉದ್ಯೋಗಗಳನ್ನು ವರ್ಗಾಯಿಸಲು ಅವಕಾಶವಿದೆ. ಟಾಟಾ ಸ್ಟೀಲ್‌, ಈ ಎರಡು ಯೋಜನೆಗಳನ್ನು ‘ಗೋಲ್ಡನ್ ಫ್ಯೂಚರ್ ಪ್ಲಾನ್’ ಎಂದು ಕರೆದಿದೆ.

ಟಾಟಾ ಸ್ಟೀಲ್ ಉಪಾಧ್ಯಕ್ಷ ಅತ್ರಾಯಿ ಸನ್ಯಾಲ್ ಆದೇಶ ಹೊರಡಿಸಿದ್ದಾರೆ. ಈ ಯೋಜನೆಯಡಿ ಉದ್ಯೋಗಿಗಳ ನಿವೃತ್ತಿ ವಯಸ್ಸು ಕನಿಷ್ಠ ಐದೂವರೆ ವರ್ಷಗಳು. ನಂತರ ಅವರು ತಮ್ಮ ಉದ್ಯೋಗವನ್ನು ಮಗ, ಮಗಳು, ಅಳಿಯ ಅಥವಾ ಇತರ ಅವಲಂಬಿತರಿಗೆ ವರ್ಗಾಯಿಸಬಹುದು.

ಆದರೆ ಇದಕ್ಕಾಗಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಬೇಕು. ಮೂರು ಬಾರಿ ಪರೀಕ್ಷೆಗೆ ಹಾಜರಾ ಗಲು ಅವಕಾಶ ನೀಡಲಾಗುವುದು. ನಂತರ ಪ್ರಶಿಕ್ಷಣಾರ್ಥಿಯಾಗಿ ಅವರ ಸೇವೆ ಪ್ರಾರಂಭ ವಾಗುತ್ತದೆ. ಈ ಸಮಯದಲ್ಲಿ ಅವರಿಗೆ ಸ್ಟೈಫಂಡ್ ನೀಡಲಾಗುತ್ತದೆ. ತರಬೇತಿ ಮುಗಿದ ನಂತರ ಅವರ ಸೇವೆಯನ್ನು ಖಾಯಂಗೊಳಿಸಲಾಗುವುದು. ಪರೀಕ್ಷೆಯಲ್ಲಿ ಅನುತ್ತೀರ್ಣ ರಾದ ಅವಲಂಬಿತರು ಕೆಲಸದಿಂದ ವಂಚಿತರಾಗುತ್ತಾರೆ.

ಕೆಲಸ ವರ್ಗಾಯಿಸುವ ಉದ್ಯೋಗಿಗೆ ಮಾಸಿಕ 13,000 ರೂಪಾಯಿ ಸಿಗುತ್ತದೆ. ಉದ್ಯೋಗಿಯ ವಯಸ್ಸು 40 ಆಗಿದ್ದರೆ ಅಥವಾ ಹತ್ತು ವರ್ಷಗಳ ಕಾಲ ಕಂಪನಿಯಲ್ಲಿ ಕೆಲಸ ಮಾಡಿ ದವರು ಉದ್ಯೋಗ ವರ್ಗಾಯಿಸಲು ಅರ್ಹರಾಗಿರುತ್ತಾರೆ.

ಉದ್ಯೋಗಿಯು ನಿವೃತ್ತಿಯ ತನಕ ಅಸ್ತಿತ್ವದಲ್ಲಿರುವ ಮೂಲ ವೇತನ ಮತ್ತು ಡಿಎ ಪ್ರಯೋಜನವನ್ನು ಪಡೆಯುತ್ತಾನೆ. ಆದರೆ ವಸತಿ ಸೌಲಭ್ಯ ಸಿಗುವುದಿಲ್ಲ. ಉದ್ಯೋಗಿಗಳು ಕಂಪನಿಯ ನಿವಾಸದಲ್ಲಿ ಉಳಿಯಲು ಬಯಸಿದರೆ ಅವರು ಬಾಡಿಗೆಯನ್ನು ಪಾವತಿಸ ಬೇಕಾಗುತ್ತದೆ.