Friday, 25th October 2024

Job Guide: ಉದ್ಯೋಗಾಕಾಂಕ್ಷಿಗಳಿಗೆ ಗುಡ್‌ನ್ಯೂಸ್‌; ನ್ಯಾಷನಲ್‌ ಇನ್ಶೂರೆನ್ಸ್‌ ಕಂಪೆನಿಯ 500 ಹುದ್ದೆಗಳಿಗೆ ಅರ್ಜಿ ಆಹ್ವಾನ

Job Guide

ಬೆಂಗಳೂರು: ನ್ಯಾಷನಲ್‌ ಇನ್ಶೂರೆನ್ಸ್‌ ಕಂಪೆನಿ ಲಿಮಿಟೆಡ್‌ (National Insurance Company Limited)ನಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ. ದೇಶಾದ್ಯಂತ 500 ಅಸಿಸ್ಟಂಟ್‌ ಹುದ್ದೆಗಳಿದ್ದು, ಪದವಿ ವಿದ್ಯಾರ್ಹತೆ ಹೊಂದಿದವರು ಅಪ್ಲೈ ಮಾಡಬಹುದು (NICL Recruitment 2024). ಕರ್ನಾಟಕದಲ್ಲಿ ಒಟ್ಟು 40 ಹುದ್ದೆಗಳಿವೆ. ಆಸಕ್ತರು ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬೇಕಿದ್ದು, ಕೊನೆಯ ದಿನ ನವೆಂಬರ್‌ 11 (Job Guide).

ಹುದ್ದೆಗಳ ವಿವರ ಮತ್ತು ವಿದ್ಯಾರ್ಹತೆ

ಕ್ಲಾಸ್‌ III ಗ್ರೇಡ್‌ನ ಅಸಿಸ್ಟಂಟ್‌ ಹುದ್ದೆ ಇದಾಗಿದ್ದು, ದೇಶದ ಯಾವುದೇ ಅಂಗೀಕೃತ ವಿಶ್ವ ವಿದ್ಯಾನಿಲಯದಿಂದ ಯಾವುದೇ ಪದವಿ ಪಡೆದವರು ಅರ್ಜಿ ಸಲ್ಲಿಸಬಹುದು.

ವಯೋಮಿತಿ

ಅರ್ಜಿ ಸಲ್ಲಿಸುವವರ ಕನಿಷ್ಠ ವಯಸ್ಸು 21 ವರ್ಷ ಮತ್ತು ಗರಿಷ್ಠ 30 ವರ್ಷ. ಮೀಸಲಾತಿಗೆ ಅನುಗುಣವಾಗಿ ವಯೋಮಿತಿಯಲ್ಲಿ ಸಡಿಲಿಕೆ ಲಭ್ಯ. ಒಬಿಸಿ (ಎನ್‌ಸಿಎಲ್‌) ಅಭ್ಯರ್ಥಿಗಳಿಗೆ 3 ವರ್ಷ, ಎಸ್‌ಸಿ/ಎಸ್‌ಟಿ ಅಭ್ಯರ್ಥಿಗಳಿಗೆ 5 ವರ್ಷ ಮತ್ತು ಪಿಡಬ್ಲ್ಯುಬಿಡಿ ಅಭ್ಯರ್ಥಿಗಳಿಗೆ 10 ವರ್ಷಗಳ ರಿಯಾಯಿತಿ ಇದೆ.

ಅರ್ಜಿ ಶುಲ್ಕ

ಎಸ್‌ಸಿ/ಎಸ್‌ಟಿ/ಪಿಡಬ್ಲ್ಯುಬಿಡಿ/ಮಾಜಿ ಸಚಿವರು ಅರ್ಜಿ ಶುಲ್ಕವಾಗಿ 100 ರೂ. ಪಾವತಿಸಬೇಕು. ಇತರ ಎಲ್ಲ ಅಭ್ಯರ್ಥಿಗಳು ಅರ್ಜಿ ಶುಲ್ಕವಾಗಿ 850 ರೂ. ಪಾವತಿಸಬೇಕು. ಪಾವತಿ ವಿಧಾನ: ಆನ್‌ಲೈನ್‌.

ಆಯ್ಕೆ ವಿಧಾನ ಮತ್ತು ಮಾಸಿಕ ವೇತನ

ಆನ್‌ಲೈನ್‌ ಪರೀಕ್ಷೆ (ಪ್ರಿಲಿಮಿನರಿ, ಮೈನ್‌) ಮತ್ತು ಸ್ಥಳೀಯ ಭಾಷೆಯ ಪರೀಕ್ಷೆಯ ಮೂಲಕ ಅಭ್ಯರ್ಥಿಗಳ ಆಯ್ಕೆ ನಡೆಯಲಿದೆ. ಪ್ರಿಲಿಮಿನರಿ ಪರೀಕ್ಷೆ ಇಂಗ್ಲಿಷ್‌ ಭಾಷೆ, ರೀಸನಿಂಗ್‌ ಎಬಿಲಿಟಿ, ಕ್ವಾಂಟಿಟೇಟಿವ್‌ ಆಪ್ಟಿಟ್ಯೂಡ್‌ ಪ್ರಶ್ನೆಯನ್ನು ಒಳಗೊಂಡಿದೆ. ಇನ್ನು ಮೈನ್‌ ಪರೀಕ್ಷೆಯಲ್ಲಿ ಟೆಸ್ಟ್‌ ರೀಸನಿಂಗ್‌, ಇಂಗ್ಲಿಷ್‌ ಭಾಷೆ, ನ್ಯುಮೆರಿಕಲ್‌ ಎಬಿಲಿಟಿ, ಜನರಲ್‌ ಅವೆರ್‌ನೆಸ್‌, ಕಂಪ್ಯೂಟರ್‌ ಕುರಿತಾದ ಪ್ರಶ್ನೆಗಳಿರುತ್ತವೆ. ಆಲ್‌ನೈನ್‌ ಪರೀಕ್ಷೆಯಲ್ಲಿ ತೇರ್ಗಡೆಯಾದವರಿಗೆ ಸ್ಥಳೀಯ ಭಾಷೆಯ ಪರೀಕ್ಷೆ ನಡೆಸಲಾಗುತ್ತದೆ. ಆಯ್ಕೆಯಾದವರಿಗೆ 22,405 ರೂ. – 62,265 ರೂ. ಮಾಸಿಕ ವೇತನ ದೊರೆಯಲಿದೆ. ಮೊದಲ ಹಂತದ ಪರೀಕ್ಷೆ ನವೆಂಬರ್‌ 30 ಮತ್ತು ಎರಡನೇ ಹಂತದ ಪರೀಕ್ಷೆ ಡಿಸೆಂಬರ್‌ 28ರಂದು ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.

NICL Recruitment 2024 ಅಧಿಸೂಚನೆ ಓದಲು ಇಲ್ಲಿ ಕ್ಲಿಕ್‌ ಮಾಡಿ.

ಅರ್ಜಿ ಸಲ್ಲಿಸುವ ವಿಧಾನ

  • ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್‌ ಮಾಡಿ (https://ibpsonline.ibps.in/niclaoct24/)
  • ಹೆಸರು ನೋಂದಾಯಿಸಿ
  • ಪಾಸ್‌ವರ್ಡ್‌ ಬಳಿಸಿ ಲಾಗಿನ್‌ ಆಗಿ.
  • ಈಗ ಕಂಡುಬರುವ ಅಪ್ಲಿಕೇಷನ್‌ ಫಾರಂ ಅನ್ನು ಎಚ್ಚರಿಕೆಯಿಂದ ಭರ್ತಿ ಮಾಡಿ.
  • ಅಗತ್ಯ ದಾಖಲೆಗಳನ್ನು ಅಪ್‌ಲೋಡ್‌ ಮಾಡಿ.
  • ಆನ್‌ಲೈನ್‌ ಮೂಲಕ ಅರ್ಜಿ ಶುಲ್ಕ ಪಾವತಿಸಿ.
  • ಭರ್ತಿ ಮಾಡಿದ ವಿವರಗಳನ್ನು ಮತ್ತೊಮ್ಮೆ ಪರಿಶೀಲಿಸಿ ಎಲ್ಲವೂ ಸರಿ Submit ಬಟನ್‌ ಕ್ಲಿಕ್‌ ಮಾಡಿ.
  • ಭವಿಷ್ಯದ ಅಗತ್ಯಗಳಿಗೆ ಅಪ್ಲಿಕೇಷನ್‌ ಫಾರಂ ಅನ್ನು ಡೌನ್‌ಲೋಡ್‌ ಮಾಡಿಟ್ಟುಕೊಳ್ಳಿ.

ಹೆಚ್ಚಿನ ವಿವರಗಳಿಗೆ ನ್ಯಾಷನಲ್‌ ಇನ್ಶೂರೆನ್ಸ್‌ ಕಂಪೆನಿ ಲಿಮಿಟೆಡ್‌ನ ಅಧಿಕೃತ ವೆಬ್‌ಸೈಟ್‌ ವಿಳಾಸ nationalinsurance.nic.co.inಗೆ ಭೇಟಿ ನೀಡಿ.

ಈ ಸುದ್ದಿಯನ್ನೂ ಓದಿ: Indian Army: ಭಾರತೀಯ ಸೇನೆ ತಾಂತ್ರಿಕ ಪ್ರವೇಶ ಯೋಜನೆಗೆ ಅರ್ಜಿ ಆಹ್ವಾನ