ಬೆಂಗಳೂರು: ರೂರಲ್ ಎಲೆಕ್ಟ್ರಿಫಿಕೇಷನ್ ಕಾರ್ಪೋರೇಷನ್ ಇಂಡಿಯಾ (Rural Electrification Corporation India) ಖಾಲಿ ಇರುವ ವಿವಿಧ ಹುದ್ದೆಗಳ ಬರ್ತಿಗೆ ಅರ್ಜಿ ಆಹ್ವಾನಿಸಿದೆ. ಮ್ಯಾನೇಜರ್, ಆಫೀಸರ್ ಸೇರಿ ಒಟ್ಟು 74 ಹುದ್ದೆಗಳಿವೆ (REC India Recruitment 2024-2025). ಬಿ.ಇ, ಸಿಎ, ಎಂಬಿಎ, ಸ್ನಾತಕೋತ್ತರ ಪದವಿ ಮುಂತಾದ ವಿದ್ಯಾರ್ಹತೆ ಹೊಂದಿದವರು ಅರ್ಜಿ ಸಲ್ಲಿಸಬಹುದು. ಆಸಕ್ತರು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬೇಕಿದ್ದು, ಕೊನೆಯ ದಿನ ಡಿ. 31 (Job Guide).
ಹುದ್ದೆಗಳ ವಿವರ ಮತ್ತು ವಿದ್ಯಾರ್ಹತೆ
ಜನರಲ್ ಮ್ಯಾನೇಜರ್ (ಎಂಜಿನಿಯರಿಂಗ್)- 2 ಹುದ್ದೆ
ಡೆಪ್ಯುಟಿ ಜನರಲ್ ಮ್ಯಾನೇಜರ್ (ಎಂಜಿನಿಯರಿಂಗ್)- 2 ಹುದ್ದೆ
ಚೀಫ್ ಮ್ಯಾನೇಜರ್ (ಎಂಜಿನಿಯರಿಂಗ್)- 2 ಹುದ್ದೆ
ಮ್ಯಾನೇಜರ್ (ಎಂಜಿನಿಯರಿಂಗ್)- 3 ಹುದ್ದೆ
ಡೆಪ್ಯುಟಿ ಮ್ಯಾನೇಜರ್ (ಎಂಜಿನಿಯರಿಂಗ್)- 6 ಹುದ್ದೆ
ಅಸಿಸ್ಟೆಂಟ್ ಮ್ಯಾನೇಜರ್ (ಎಂಜಿನಿಯರಿಂಗ್)- 5 ಹುದ್ದೆ
ಆಫೀಸರ್ (ಎಂಜಿನಿಯರಿಂಗ್)- 17 ಹುದ್ದೆ
ಡೆಪ್ಯುಟಿ ಮ್ಯಾನೇಜರ್ (ಎಫ್ &ಎ)- 2 ಹುದ್ದೆ
ಅಸಿಸ್ಟೆಂಟ್ ಮ್ಯಾನೇಜರ್ (ಎಫ್ &ಎ)- 2 ಹುದ್ದೆ
ಅಧಿಕಾರಿ (ಎಫ್ &ಎ)-2 ಹುದ್ದೆ
ಡೆಪ್ಯುಟಿ ಮ್ಯಾನೇಜರ್ (ಎಚ್ಆರ್)- 1 ಹುದ್ದೆ
ಆಫೀಸರ್ (ಎಚ್‌ಆರ್)- 1 ಹುದ್ದೆ
ಡೆಪ್ಯುಟಿ ಮ್ಯಾನೇಜರ್ (ಐಟಿ)- 1 ಹುದ್ದೆ
ಅಸಿಸ್ಟೆಂಟ್ ಮ್ಯಾನೇಜರ್ (ಐಟಿ)- 1 ಹುದ್ದೆ
ಆಫೀಸರ್ (ಐಟಿ)- 11 ಹುದ್ದೆ
ಆಫೀಸರ್ (ಫೈರ್ ಸೇಫ್ಟಿ)- 1 ಹುದ್ದೆ
ಚೀಫ್ ಮ್ಯಾನೇಜರ್ (ಸಿಎಸ್)- 1 ಹುದ್ದೆ
ಮ್ಯಾನೇಜರ್ (ಸಿಎಸ್)- 2 ಹುದ್ದೆ
ಡೆಪ್ಯುಟಿ ಮ್ಯಾನೇಜರ್ (ಸಿಎಸ್)- 1 ಹುದ್ದೆ
ಆಫೀಸರ್ (ಸಿಎಸ್)- 1 ಹುದ್ದೆ
ಚೀಫ್ ಮ್ಯಾನೇಜರ್ (ಕಾನೂನು)- 1 ಹುದ್ದೆ
ಡೆಪ್ಯುಟಿ ಮ್ಯಾನೇಜರ್ (ಕಾನೂನು)- 2 ಹುದ್ದೆ
ಆಫೀಸರ್ (ಕಾನೂನು)- 1 ಹುದ್ದೆ
ಜನರಲ್ ಮ್ಯಾನೇಜರ್ (ಸಿಸಿ)- 1 ಹುದ್ದೆ
ಆಫೀಸರ್ (ಸಿಎಸ್ಆರ್)- 1 ಹುದ್ದೆ
ಡೆಪ್ಯುಟಿ ಮ್ಯಾನೇಜರ್ (ಸೆಕ್ರೆಟರಿಯಲ್)- 2 ಹುದ್ದೆ
ಅಸಿಸ್ಟೆಂಟ್ ಮ್ಯಾನೇಜರ್ (ಸೆಕ್ರೆಟರಿಯಲ್)- 1 ಹುದ್ದೆ
ಆಫೀಸರ್ (ರಾಜಭಾಷಾ)- 1 ಹುದ್ದೆ
ವಿವಿಧ ಹುದ್ದೆಗಳಿಗೆ ಅನುಗುಣವಾಗಿ ಬಿ.ಇ ಅಥವಾ ಬಿ.ಟೆಕ್, ಎಂ.ಟೆಕ್, ಸಿಎ, ಸಿಎಂಎ, ಎಂಬಿಎ, ಸ್ನಾತಕೋತ್ತರ ಪದವಿ, ಪದವಿ ವಿದ್ಯಾರ್ಹತೆ ಹೊಂದಿದವರು ಅರ್ಜಿ ಸಲ್ಲಿಸಬಹುದು.
ವಯೋಮಿತಿ
ವಿವಿಧ ಹುದ್ದೆಗಳಿಗೆ ಅನುಗುಣವಾಗಿ 33 ವರ್ಷದಿಂದ 52 ವರ್ಷದೊಳಗಿನವರು ಅರ್ಜಿ ಸಲ್ಲಿಸಬಹುದು. ಒಬಿಸಿ ಅಭ್ಯರ್ಥಿಗಳಿಗೆ 3 ವರ್ಷ, ಎಸ್‌ಸಿ/ಎಸ್‌ಟಿ ಅಭ್ಯರ್ಥಿಗಳಿಗೆ 5 ವರ್ಷ ಮತ್ತು ಪಿಡಬ್ಲ್ಯುಬಿಡಿ ಅಭ್ಯರ್ಥಿಗಳಿಗೆ 10 ವರ್ಷಗಳ ರಿಯಾಯಿತಿ ಇದೆ.
ಅರ್ಜಿ ಶುಲ್ಕ
ಎಸ್‌ಸಿ/ಎಸ್‌ಟಿ/ಪಿಡಬ್ಲ್ಯುಬಿಡಿ/ಮಾಜಿ ಸೈನಿಕರು ಅರ್ಜಿ ಶುಲ್ಕ ಪಾವತಿಸಬೇಕಾಗಿಲ್ಲ. ಇತರ ಎಲ್ಲ ಅಭ್ಯರ್ಥಿಗಳು ಅರ್ಜಿ ಶುಲ್ಕವಾಗಿ 1,000 ರೂ. ಅನ್ನು ಆನ್‌ಲೈನ್ ಮೂಲ ಪಾವತಿಸಬೇಕು. ಲಿಖಿತ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಅಭ್ಯರ್ಥಿಗಳ ಆಯ್ಕೆ ನಡೆಯಲಿದೆ.
REC India Recruitment 2024-2025 ಅಧಿಸೂಚನೆ ಓದಲು ಇಲ್ಲಿ ಕ್ಲಿಕ್ ಮಾಡಿ.
ಅರ್ಜಿ ಸಲ್ಲಿಸುವ ವಿಧಾನ
- ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ
(https://recl.co.in/recljobs/login.php). - ಹೆಸರು ನೋಂದಾಯಿಸಿ.
- ಈಗ ಕಂಡುಬರುವ ಅಪ್ಲಿಕೇಷನ್ ಫಾರಂ ಭರ್ತಿ ಮಾಡಿ.
- ಅಗತ್ಯ ಡಾಕ್ಯುಮೆಂಟ್ ಅಪ್‌ಲೋಡ್ ಮಾಡಿ.
- ಆನ್‌ಲೈನ್ ಮೂಲಕ ಅರ್ಜಿ ಶುಲ್ಕ ಪಾವತಿಸಿ (ಅಗತ್ಯವಿದ್ದವರು ಮಾತ್ರ).
- ಭರ್ತಿ ಮಾಡಿದ ವಿವರಗಳನ್ನು ಮತ್ತೊಮ್ಮೆ ಪರಿಶೀಲಿಸಿ ಎಲ್ಲವೂ ಸರಿ ಇದ್ದರೆ Submit ಬಟನ್ ಕ್ಲಿಕ್ ಮಾಡಿ.
- ಭವಿಷ್ಯದ ಅಗತ್ಯಗಳಿಗಾಗಿ ಅಪ್ಲಿಕೇಷನ್ ಫಾರಂ ಡೌನ್‌ಲೋಡ್ ಮಾಡಿಟ್ಟುಕೊಳ್ಳಿ.
ಹೆಚ್ಚಿನ ವಿವರಗಳಿಗೆ ವೆಬ್‌ಸೈಟ್ ವಿಳಾಸ: recindia.nic.inಗೆ ಭೇಟಿ ನೀಡಿ.
ಈ ಸುದ್ದಿಯನ್ನೂ ಓದಿ: Job Guide: ನ್ಯಾಷನಲ್ ಹೈಡ್ರೋಎಲೆಕ್ಟ್ರಿಕ್ ಪವರ್ ಕಾರ್ಪೋರೇಷನ್‌ನ 118 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ; ಅಪ್ಲೈ ಮಾಡುವ ವಿಧಾನ ಇಲ್ಲಿದೆ