ಬೆಂಗಳೂರು: ಗ್ಯಾಸ್ ಅಥಾರಟಿ ಆಫ್ ಇಂಡಿಯಾ ಲಿಮಿಟೆಡ್ (Gas Authority of India Limited) ಖಾಲಿ ಇರುವ ವಿವಿಧ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದೆ. ಸೀನಿಯರ್ ಎಂಜಿನಿಯರ್, ಚೀಫ್ ಮ್ಯಾನೇಜರ್ ಸೇರಿ ಒಟ್ಟು 275 ಹುದ್ದೆಗಳು ಖಾಲಿ ಇವೆ (GAIL Recruitment 2024). ಪದವಿ, ಎಂಬಿಬಿಎಸ್ ವಿದ್ಯಾರ್ಹತೆ ಹೊಂದಿದವರು ಅರ್ಜಿ ಸಲ್ಲಿಸಬಹುದು. ಆಸಕ್ತರು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬೇಕಿದ್ದು, ಕೊನೆಯ ದಿನ ಡಿ. 11 (Job Guide).
ಹುದ್ದೆಗಳ ವಿವರ ಮತ್ತು ವಿದ್ಯಾರ್ಹತೆ
ಸೀನಿಯರ್ ಇಂಜಿನಿಯರ್ (ನವೀಕರಿಸಬಹುದಾದ ಇಂಧನ) – 6 ಹುದ್ದೆ, ವಿದ್ಯಾರ್ಹತೆ: ಪದವಿ, ಬಿ.ಇ ಅಥವಾ ಬಿ.ಟೆಕ್
ಸೀನಿಯರ್ ಇಂಜಿನಿಯರ್ (ಬಾಯ್ಲರ್ ಆಪರೇಷನ್ಸ್) – 3 ಹುದ್ದೆ, ವಿದ್ಯಾರ್ಹತೆ: ಪದವಿ, ಬಿ.ಇ ಅಥವಾ ಬಿ.ಟೆಕ್
ಸೀನಿಯರ್ ಇಂಜಿನಿಯರ್ (ಮೆಕ್ಯಾನಿಕಲ್) – 30 ಹುದ್ದೆ, ವಿದ್ಯಾರ್ಹತೆ: ಪದವಿ, ಬಿ.ಇ ಅಥವಾ ಬಿ.ಟೆಕ್
ಸೀನಿಯರ್ ಇಂಜಿನಿಯರ್ (ಎಲೆಕ್ಟ್ರಿಕಲ್) – 6 ಹುದ್ದೆ, ವಿದ್ಯಾರ್ಹತೆ: ಪದವಿ, ಬಿ.ಇ ಅಥವಾ ಬಿ.ಟೆಕ್
ಸೀನಿಯರ್ ಇಂಜಿನಿಯರ್ (ಇನ್ಸ್ಟ್ರುಮೆಂಟೇಶನ್) – 1 ಹುದ್ದೆ, ವಿದ್ಯಾರ್ಹತೆ: ಪದವಿ, ಬಿ.ಇ ಅಥವಾ ಬಿ.ಟೆಕ್
ಸೀನಿಯರ್ ಇಂಜಿನಿಯರ್ (ಕೆಮಿಕಲ್) – 36 ಹುದ್ದೆ, ವಿದ್ಯಾರ್ಹತೆ: ಪದವಿ, ಬಿ.ಇ ಅಥವಾ ಬಿ.ಟೆಕ್
ಸೀನಿಯರ್ ಎಂಜಿನಿಯರ್ (ಗೇಲ್ಟೆಲ್ ಟಿಸಿ / ಟಿಎಂ) – 5 ಹುದ್ದೆ, ವಿದ್ಯಾರ್ಹತೆ: ಪದವಿ, ಬಿ.ಇ ಅಥವಾ ಬಿ.ಟೆಕ್
ಸೀನಿಯರ್ ಆಫೀಸರ್ (ಫೈರ್ & ಸೇಫ್ಟಿ) – 20 ಹುದ್ದೆ, ವಿದ್ಯಾರ್ಹತೆ: ಪದವಿ, ಬಿ.ಇ ಅಥವಾ ಬಿ.ಟೆಕ್
ಸೀನಿಯರ್ ಆಫೀಸರ್ (ಸಿ & ಪಿ) – 22 ಹುದ್ದೆ, ವಿದ್ಯಾರ್ಹತೆ: ಪದವಿ, ಬಿ.ಇ ಅಥವಾ ಬಿ.ಟೆಕ್
ಸೀನಿಯರ್ ಇಂಜಿನಿಯರ್ (ಸಿವಿಲ್) – 11 ಹುದ್ದೆ, ವಿದ್ಯಾರ್ಹತೆ: ಪದವಿ, ಬಿ.ಇ ಅಥವಾ ಬಿ.ಟೆಕ್
ಸೀನಿಯರ್ ಆಫೀಸರ್ (ಮಾರ್ಕೆಟಿಂಗ್) – 22 ಹುದ್ದೆ, ವಿದ್ಯಾರ್ಹತೆ: ಪದವಿ, ಬಿ.ಇ ಅಥವಾ ಬಿ.ಟೆಕ್
ಸೀನಿಯರ್ ಆಫೀಸರ್ (ಎಫ್ & ಎ) – 36 ಹುದ್ದೆ, ವಿದ್ಯಾರ್ಹತೆ: ಸಿಎ, ಬಿಎ, ಬಿ.ಎಸ್‌ಸಿ, ಬಿ.ಕಾಂ, ಬಿ.ಇ ಅಥವಾ ಬಿ.ಟೆಕ್
ಸೀನಿಯರ್ ಆಫೀಸರ್ (ಹ್ಯೂಮನ್ ರಿಸೋರ್ಸಸ್) – 23 ಹುದ್ದೆ, ವಿದ್ಯಾರ್ಹತೆ: ಪದವಿ, ಎಂಬಿಎ, ಸ್ನಾತಕೋತ್ತರ ಪದವಿ
ಸೀನಿಯರ್ ಆಫೀಸರ್ (ಕಾನೂನು) – 2 ಹುದ್ದೆ, ವಿದ್ಯಾರ್ಹತೆ: ಎಲ್‌ಎಲ್‌ಬಿ, ಪದವಿ
ಸೀನಿಯರ್ ಆಫೀಸರ್ (ಮೆಡಿಕಲ್ ಸರ್ವೀಸಸ್) – 1 ಹುದ್ದೆ, ವಿದ್ಯಾರ್ಹತೆ: ಪದವಿ, ಎಂಬಿಬಿಎಸ್
ಸೀನಿಯರ್ ಆಫೀಸರ್ (ಕಾರ್ಪೊರೇಟ್ ಕಮ್ಯುನಿಕೇಷನ್) – 4 ಹುದ್ದೆ, ವಿದ್ಯಾರ್ಹತೆ: ಪದವಿ, ಸ್ನಾತಕೋತ್ತರ ಪದವಿ
ಆಫೀಸರ್ (ಲ್ಯಾಬೊರೇಟರಿ) – 16 ಹುದ್ದೆ, ವಿದ್ಯಾರ್ಹತೆ: ಸ್ನಾತಕೋತ್ತರ ಪದವಿ, ಎಂ.ಎಸ್‌ಸಿ
ಆಫೀಸರ್ (ಸೆಕ್ಯುರಿಟಿ) – 4 ಹುದ್ದೆ, ವಿದ್ಯಾರ್ಹತೆ: ಪದವಿ
ಆಫೀಸರ್ (ಅಧಿಕೃತ ಭಾಷೆ) – 13 ಹುದ್ದೆ, ವಿದ್ಯಾರ್ಹತೆ: ಸ್ನಾತಕೊತ್ತರ ಪದವಿ
ಚೀಫ್ ಮ್ಯಾನೇಜರ್ (ನವೀಕರಿಸಬಹುದಾದ ಇಂಧನ) – 4 ಹುದ್ದೆ, ವಿದ್ಯಾರ್ಹತೆ: ಪದವಿ, ಬಿ.ಇ ಅಥವಾ ಬಿ.ಟೆಕ್
ಚೀಫ್ ಮ್ಯಾನೇಜರ್ (ಎಕನಾಮಿಸ್ಟ್) – 4 ಹುದ್ದೆ, ವಿದ್ಯಾರ್ಹತೆ: ಸ್ನಾತಕೋತ್ತರ ಪದವಿ
ಚೀಫ್ ಮ್ಯಾನೇಜರ್ (ಕಾನೂನು)- 1 ಹುದ್ದೆ, ವಿದ್ಯಾರ್ಹತೆ: ಎಲ್‌ಎಲ್‌ಬಿ
ಚೀಫ್ ಮ್ಯಾನೇಜರ್ (ಮೆಡಿಕಲ್ ಸರ್ವೀಸಸ್) – 2 ಹುದ್ದೆ, ವಿದ್ಯಾರ್ಹತೆ: ಎಂಎಬಿಬಿಎಸ್, ಎಂ.ಡಿ, ಡಿಎನ್‌ಬಿ
ಚೀಫ್ ಮ್ಯಾನೇಜರ್ (ಎಚ್‌ಆರ್) – 3 ಹುದ್ದೆ, ವಿದ್ಯಾರ್ಹತೆ: ಪದವಿ,ಎಂಬಿಎ, ಸ್ನಾತಕೋತ್ತರ ಪದವಿ
ವಯೋಮಿತಿ
ಹುದ್ದೆಗಳಿಗೆ ಅನುಗುಣವಾಗಿ 28ರಿಂದ 45 ವರ್ಷ ವಯೋಮಾನದವರು ಅರ್ಜಿ ಸಲ್ಲಿಸಬಹುದು. ಮೀಸಲಾತಿಗೆ ಅನುಗುಣವಾಗಿ ವಯೋಮಿತಿಯಲ್ಲಿ ಸಡಿಲಿಕೆ ಲಭ್ಯ. ಒಬಿಸಿ ಅಭ್ಯರ್ಥಿಗಳಿಗೆ 3 ವರ್ಷ, ಎಸ್‌ಸಿ/ಎಸ್‌ಟಿ ಅಭ್ಯರ್ಥಿಗಳಿಗೆ 5 ವರ್ಷ ಮತ್ತು ಪಿಡಬ್ಲ್ಯುಬಿಡಿ ಅಭ್ಯರ್ಥಿಗಳಿಗೆ 10 ವರ್ಷಗಳ ರಿಯಾಯಿತಿ ಇದೆ.
ಅರ್ಜಿ ಶುಲ್ಕ ಮತ್ತು ಆಯ್ಕೆ ವಿಧಾನ
ಅರ್ಜಿ ಶುಲ್ಕವಾಗಿ ಸಾಮಾನ್ಯ/ಇಡಬ್ಲ್ಯುಎಸ್/ಒಬಿಸಿ ಅಭ್ಯರ್ಥಿಗಳು 250 ರೂ. ಪಾವತಿಸಬೇಕು. ಎಸ್‌ಸಿ/ಎಸ್‌ಟಿ/ಪಿಡಬ್ಲ್ಯುಬಿಡಿ ಅಭ್ಯರ್ಥಿಗಳು ಅರ್ಜಿ ಶುಲ್ಕ ಸಲ್ಲಿಸಬೇಕಾಗಿಲ್ಲ. ಸ್ಕಿಲ್ ಟೆಸ್ಟ್, ದೈಹಿಕ ಪರೀಕ್ಷೆ, ಗ್ರೂಪ್ ಡಿಸ್ಕಷನ್ ಮತ್ತು ಸಂದರ್ಶನದ ಮೂಲಕ ಅಭ್ಯರ್ಥಿಗಳ ಆಯ್ಕೆ ನಡೆಯಲಿದೆ.
ಸೀನಿಯರ್ ಎಂಜಿನಿಯರ್ ಹುದ್ದೆಗಳ ಅಧಿಸೂಚನೆ ಓದಲು ಇಲ್ಲಿ ಕ್ಲಿಕ್ ಮಾಡಿ
ಚೀಫ್ ಮ್ಯಾನೇಜರ್ ಹುದ್ದೆಗಳ ಅಧಿಸೂಚನೆ ಓದಲು ಇಲ್ಲಿ ಕ್ಲಿಕ್ ಮಾಡಿ
ಅರ್ಜಿ ಸಲ್ಲಿಸುವ ವಿಧಾನ
- ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ (https://gailebank.gail.co.in/recruitmentSystem/user/er_login.aspx)
- ಮೊದಲು ಹೆಸರು ನೋಂದಾಯಿಸಿ.
- ಪಾಸ್‌ವರ್ಡ್ ಬಳಸಿ ಲಾಗಿನ್ ಆಗಿ.
- ಈಗ ಕಂಡುಬರುವ ಅಪ್ಲಿಕೇಷನ್ ಫಾರಂ ಅನ್ನು ಎಚ್ಚರಿಕೆಯಿಂದ ಭರ್ತಿ ಮಾಡಿ.
- ಅಗತ್ಯ ದಾಖಲೆಗಳನ್ನು ಸರಿಯಾದ ಅಳತೆಯಲ್ಲಿ ಅಪ್‌ಲೋಡ್ ಮಾಡಿ.
- ಅರ್ಜಿ ಶುಲ್ಕವನ್ನು ಪಾವತಿಸಿ (ಅಗತ್ಯವಿದ್ದವರು ಮಾತ್ರ).
- ಭರ್ತಿ ಮಾಡಿದ ವಿವರಗಳನ್ನು ಮತ್ತೊಮ್ಮೆ ಪರಿಶೀಲಿಸಿ ಎಲ್ಲವೂ ಸರಿ ಇದ್ದರೆ Submit ಬಟನ್ ಕ್ಲಿಕ್ ಮಾಡಿ.
- ಭವಿಷ್ಯದ ಅಗತ್ಯಗಳಿಗೆ ಅಪ್ಲಿಕೇಷನ್ ಫಾರಂ ಡೌನ್‌ಲೋಡ್ ಮಾಡಿಟ್ಟುಕೊಳ್ಳಿ.
ಈ ಸುದ್ದಿಯನ್ನೂ ಓದಿ: Job Guide: ಡಿಪ್ಲೊಮಾ, ಐಟಿಐ ವಿದ್ಯಾರ್ಹತೆ ಹೊಂದಿದ್ದೀರಾ? HALನಲ್ಲಿದೆ 57 ಹುದ್ದೆ: ಹೀಗೆ ಅಪ್ಲೈ ಮಾಡಿ