Thursday, 12th December 2024

Job Guide: ರಾಷ್ಟ್ರೀಯ ಕೆಮಿಕಲ್‌ & ಫರ್ಟಿಲೈಸರ್ಸ್‌ ಲಿಮಿಟೆಡ್‌ನಲ್ಲಿದೆ 378 ಹುದ್ದೆ; ಇಂದೇ ಅಪ್ಲೈ ಮಾಡಿ

ಬೆಂಗಳೂರು: ರಾಷ್ಟ್ರೀಯ ಕೆಮಿಕಲ್‌ & ಫರ್ಟಿಲೈಸರ್ಸ್‌ ಲಿಮಿಟೆಡ್‌ (Rashtriya Chemicals & Fertilizers) ಖಾಲಿ ಇರುವ ವಿವಿಧ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದೆ. ಒಟ್ಟು 378 ಸೆಕ್ರೆಟೆರಿಯಲ್‌ ಅಸಿಸ್ಟಂಟ್‌, ಅಪ್ರೆಂಟಿಸ್‌ (Secretarial Assistant, Apprentice) ಹುದ್ದೆಗಳಿದ್ದು, ದ್ವಿತೀಯ ಪಿಯುಸಿ, ಡಿಪ್ಲೊಮಾ, ಪದವಿ ಪೂರೈಸಿದವರು ಅರ್ಜಿ ಸಲ್ಲಿಸಬಹುದು (RCF Recruitment 2024-2025). ಉದ್ಯೋಗದ ಸ್ಥಳ: ಮಾಹಾರಾಷ್ಟ್ರದ ಮುಂಬೈಯ ರಾಯ್‌ಗಢ. ಆಸಕ್ತರು ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬೇಕಿದ್ದು, ಕೊನೆಯ ದಿನ ಡಿ. 24 (Job Guide).

ಹುದ್ದೆಗಳ ವಿವರ ಮತ್ತು ವಿದ್ಯಾರ್ಹತೆ

ಅಕೌಂಟ್ಸ್ ಎಕ್ಸಿಕ್ಯೂಟಿವ್ – 51 ಹುದ್ದೆ, ವಿದ್ಯಾರ್ಹತೆ: ಬಿ.ಕಾಂ, ಬಿಬಿಎ, ಪದವಿ
ಸೆಕ್ರೆಟರಿಯಲ್ ಅಸಿಸ್ಟೆಂಟ್ – 96 ಹುದ್ದೆ, ವಿದ್ಯಾರ್ಹತೆ: ಪದವಿ
ನೇಮಕಾತಿ ಎಕ್ಸಿಕ್ಯೂಟಿವ್ (ಎಚ್ಆರ್) – 35 ಹುದ್ದೆ, ವಿದ್ಯಾರ್ಹತೆ: ಪದವಿ
ಟೆಕ್ನಿಷಿಯನ್ ಅಪ್ರೆಂಟಿಸ್ (ಕೆಮಿಕಲ್)- 20 ಹುದ್ದೆ, ವಿದ್ಯಾರ್ಹತೆ: ಡಿಪ್ಲೊಮಾ ಇನ್‌ ಕೆಮಿಕಲ್‌ ಎಂಜಿನಿಯರಿಂಗ್‌
ಟೆಕ್ನಿಷಿಯನ್ ಅಪ್ರೆಂಟಿಸ್ (ಸಿವಿಲ್) – 14 ಹುದ್ದೆ, ವಿದ್ಯಾರ್ಹತೆ: ಡಿಪ್ಲೊಮಾ ಇನ್‌ ಸಿವಿಲ್ ಎಂಜಿನಿಯರಿಂಗ್‌
ಟೆಕ್ನಿಷಿಯನ್ ಅಪ್ರೆಂಟಿಸ್ (ಕಂಪ್ಯೂಟರ್) – 6 ಹುದ್ದೆ, ವಿದ್ಯಾರ್ಹತೆ: ಡಿಪ್ಲೊಮಾ ಇನ್‌ ಕಂಪ್ಯೂಟರ್‌ ಎಂಜಿನಿಯರಿಂಗ್‌
ಟೆಕ್ನಿಷಿಯನ್ ಅಪ್ರೆಂಟಿಸ್ (ಎಲೆಕ್ಟ್ರಿಕಲ್) – 10 ಹುದ್ದೆ, ವಿದ್ಯಾರ್ಹತೆ: ಡಿಪೊಮಾ ಇನ್‌ ಎಲೆಕ್ಟ್ರಿಕಲ್‌ ಎಂಜಿನಿಯರಿಂಗ್‌
ಟೆಕ್ನಿಷಿಯನ್ ಅಪ್ರೆಂಟಿಸ್ (ಇನ್ಸ್ಟ್ರುಮೆಂಟೇಶನ್) – 20 ಹುದ್ದೆ, ವಿದ್ಯಾರ್ಹತೆ: ಡಿಪೊಮಾ ಇನ್‌ ಇನ್‌ಸ್ಟ್ರುಮೆಂಟೇಶನ್‌ ಎಂಜಿನಿಯರಿಂಗ್‌
ಟೆಕ್ನಿಷಿಯನ್ ಅಪ್ರೆಂಟಿಸ್ (ಮೆಕ್ಯಾನಿಕಲ್) – 20 ಹುದ್ದೆ, ವಿದ್ಯಾರ್ಹತೆ: ಡಿಪೊಮಾ ಇನ್‌ ಮೆಕ್ಯಾನಿಕಲ್‌ ಎಂಜಿನಿಯರಿಂಗ್‌
ಅಟೆಂಡೆಂಟ್ ಆಪರೇಟರ್ – 74 ಹುದ್ದೆ, ವಿದ್ಯಾರ್ಹತೆ: ಬಿ.ಎಸ್‌ಸಿ
ಬಾಯ್ಲರ್ ಅಟೆಂಡೆಂಟ್ – 3 ಹುದ್ದೆ, ವಿದ್ಯಾರ್ಹತೆ: 12ನೇ ತರಗತಿ
ಎಲೆಕ್ಟ್ರಿಷಿಯನ್ – 4 ಹುದ್ದೆ, ವಿದ್ಯಾರ್ಹತೆ: 12ನೇ ತರಗತಿ
ತೋಟಗಾರಿಕೆ ಸಹಾಯಕ – 6 ಹುದ್ದೆ, ವಿದ್ಯಾರ್ಹತೆ: 12ನೇ ತರಗತಿ
ಇನ್ಸ್ಟ್ರುಮೆಂಟ್ ಮೆಕ್ಯಾನಿಕ್ – 3 ಹುದ್ದೆ, ವಿದ್ಯಾರ್ಹತೆ: ಬಿ.ಎಸ್‌ಸಿ
ಪ್ರಯೋಗಾಲಯ ಸಹಾಯಕ – 14 ಹುದ್ದೆ, ವಿದ್ಯಾರ್ಹತೆ: ಬಿ.ಎಸ್‌ಸಿ
ಮೆಡಿಕಲ್‌ ಲ್ಯಾಬ್‌ ಟೆಕ್ನಿಶಿಯನ್‌ – 2 ಹುದ್ದೆ, ವಿದ್ಯಾರ್ಹತೆ: 12ನೇ ತರಗತಿ

ವಯೋಮಿತಿ

ಅಧಿಸೂಚನೆ ಪ್ರಕಾರ ಗರಿಷ್ಠ ವಯೋಮಿತಿ 25 ವರ್ಷ. ಮೀಸಲಾತಿಗೆ ಅನುಗುಣವಾಗಿ ವಯೋಮಿತಿಯಲ್ಲಿ ಸಡಿಲಿಕೆ ಲಭ್ಯ. ಒಬಿಸಿ ಅಭ್ಯರ್ಥಿಗಳಿಗೆ 3 ವರ್ಷ, ಎಸ್‌ಸಿಎಸ್‌ಟಿ ಅಭ್ಯರ್ಥಿಗಳಿಗೆ 5 ವರ್ಷ, ಪಿಡಬ್ಲ್ಯುಬಿಡಿ ಅಭ್ಯರ್ಥಿಗಳಿಗೆ 10 ವರ್ಷಗಳ ರಿಯಾಯಿತಿ ಇದೆ.

ಅರ್ಜಿ ಶುಲ್ಕ ಮತ್ತು ಆಯ್ಕೆ ವಿಧಾನ

ಯಾವುದೇ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕವಿಲ್ಲ. ಲಿಖಿತ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಅಭ್ಯರ್ಥಿಗಳ ಆಯ್ಕೆ ನಡೆಯಲಿದೆ.

RCF Recruitment 2024-2025 ಅಧಿಸೂಚನೆ ಓದಲು ಇಲ್ಲಿ ಕ್ಲಿಕ್‌ ಮಾಡಿ.

ಅರ್ಜಿ ಸಲ್ಲಿಸುವ ವಿಧಾನ

  • ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್‌ ಮಾಡಿ
    (https://ors.rcfltd.com/3054/Position/APTREC-2024/ORS/)
  • ಈಗ ಕಂಡುಬರುವ ಅಪ್ಲಿಕೇಷನ್‌ ಫಾರಂ ಭರ್ತಿ ಮಾಡಿ.
  • ಅಗತ್ಯ ಡಾಕ್ಯುಮೆಂಟ್‌ ಅಪ್‌ಲೋಡ್‌ ಮಾಡಿ.
  • ಭರ್ತಿ ಮಾಡಿದ ವಿವರಗಳನ್ನು ಮತ್ತೊಮ್ಮೆ ಪರಿಶೀಲಿಸಿ ಎಲ್ಲವೂ ಸರಿ ಇದ್ದರೆ Submit ಬಟನ್‌ ಕ್ಲಿಕ್‌ ಮಾಡಿ.
  • ಭವಿಷ್ಯದ ಅಗತ್ಯಗಳಿಗಾಗಿ ಅಪ್ಲಿಕೇಷನ್‌ ಫಾರಂ ಡೌನ್‌ಲೋಡ್‌ ಮಾಡಿಟ್ಟುಕೊಳ್ಳಿ.

ಈ ಸುದ್ದಿಯನ್ನೂ ಓದಿ: Job Guide: ನ್ಯಾಷನಲ್‌ ಹೈಡ್ರೋಎಲೆಕ್ಟ್ರಿಕ್‌ ಪವರ್‌ ಕಾರ್ಪೋರೇಷನ್‌ನ 118 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ; ಅಪ್ಲೈ ಮಾಡುವ ವಿಧಾನ ಇಲ್ಲಿದೆ