Sunday, 15th December 2024

ಡೆಲಾಯ್ಟ್ ಕಂಪನಿಯಿಂದಲೂ 1,200 ಉದ್ಯೋಗಿಗಳಿಗೆ ಗೇಟ್ ಪಾಸ್

ವದೆಹಲಿ : ವಿಶ್ವದಾದ್ಯಂತ ವಿವಿಧ ಕ್ಷೇತ್ರಗಳ ಮೇಲೆ ಜಾಗತಿಕ ಆರ್ಥಿಕ ಹಿಂಜರಿತ ಪರಿಣಾಮ ಬೀರುತ್ತಿದ್ದು, ಪ್ರಪಂಚ ದಾದ್ಯಂತದ ಅನೇಕ ದೊಡ್ಡ ಕಂಪನಿಗಳು ದೊಡ್ಡ ಪ್ರಮಾಣದಲ್ಲಿ ಉದ್ಯೋಗಿಗಳನ್ನ ವಜಾಗೊಳಿಸಿವೆ.

ವಜಾ ಕಂಪನಿಗಳ ಪಟ್ಟಿಯಲ್ಲಿ ಈಗ ಲೆಕ್ಕಪರಿಶೋಧನಾ ಸಂಸ್ಥೆ ಕಂಪನಿ ಡೆಲಾಯ್ಟ್ ಹೆಸರು ಸೇರಿದೆ. ಕಂಪನಿಯು ತನ್ನ ಒಟ್ಟು ಉದ್ಯೋಗಿಗಳಲ್ಲಿ 1.5 ಪ್ರತಿಶತವನ್ನ ವಜಾಗೊಳಿಸಲು ಯೋಜಿಸಿದೆ. ಅದ್ರಂತೆ, ಕಂಪನಿಯು ಒಟ್ಟು 1,200 ಉದ್ಯೋಗಿಗಳಿಗೆ ಗೇಟ್ ಪಾಸ್ ನೀಡಿದೆ.

ಕಂಪನಿಯು ವಿವಿಧ ವಿಭಾಗಗಳಲ್ಲಿ ಕೆಲಸ ಮಾಡುವ ಜನರನ್ನ ವಜಾಗೊಳಿಸಲಿದೆ.

ಅದರಲ್ಲಿ ಹಣಕಾಸು ಸಲಹಾ ವ್ಯವಹಾರದಲ್ಲಿ ಕೆಲಸ ಮಾಡುವ ಹೆಚ್ಚು ಉದ್ಯೋಗಿಗಳು ಸೇರಿದ್ದಾರೆ. ಅಂದ್ಹಾಗೆ, ಯುಎಸ್ನಲ್ಲಿ ಎಲ್ಲಾ 1,200 ಉದ್ಯೋಗಿಗಳನ್ನ ವಜಾ ಗೊಳಿಸಲು ಕಂಪನಿ ನಿರ್ಧರಿಸಿದೆ.