Sunday, 13th October 2024

ಜಾನ್ಸನ್‌ & ಜಾನ್ಸ‌ನ್‌ ಬೇಬಿ ಪೌಡರ್‌ ಉತ್ಪಾದನೆಗೆ ಹೇರಿದ್ದ ನಿಷೇಧ ರದ್ದು

ಮುಂಬೈ: ಮಹಾರಾಷ್ಟ್ರ ಸರ್ಕಾರವು ಜಾನ್ಸನ್‌ & ಜಾನ್ಸ‌ನ್‌ ಬೇಬಿ ಪೌಡರ್‌ ಉತ್ಪಾದನೆಗೆ ಹೇರಿದ್ದ ನಿಷೇಧವನ್ನು ಬಾಂಬೆ ಹೈ ಕೋರ್ಟ್‌ ರದ್ದು ಮಾಡಿದೆ.

ಆದರೆ ಮಾರಾಟದ ಮೇಲಿನ ನಿಷೇಧ ಮುಂದುವರಿಸಿದೆ. ಜತೆಗೆ ಸ್ಯಾಂಪಲ್‌ಗಳನ್ನು ಹೊಸ ದಾಗಿ ಪರೀಕ್ಷೆಗೆ ಒಳಪಡಿಸಬೇಕು ಎಂದು ಆದೇಶಿಸಿದೆ.

ಪೌಡರ್‌ನಲ್ಲಿ ಹಾನಿಕಾರಕ ಅಂಶಗಳಿದ್ದು, ಹೀಗಾಗಿ ತಕ್ಷಣವೇ ಉತ್ಪಾದನೆ ನಿಲ್ಲಿಸಬೇಕು ಎಂದು ಮಹಾರಾಷ್ಟ್ರ ಸರ್ಕಾರ ಸೆ‍ಪ್ಟೆಂಬರ್‌ 15 ರಂದು ಸೂಚನೆ ನೀಡಿ, ಪರವಾನಗಿ ರದ್ದು ಮಾಡಿತ್ತು.

ಮಹಾರಾಷ್ಟ್ರ ಆಹಾರ ಹಾಗೂ ಔ‍ಷಧ ಆಡಳಿತ, ಜಾನ್ಸನ್‌ ಆಂಡ್‌ ಜಾನ್ಸನ್‌ ಬೇಬಿ ಪೌಡರ್‌ನ ಉತ್ಪಾದನಾ ಪರವಾನಗಿಯನ್ನು ರದ್ದು ಮಾಡಿತ್ತು.

ಇದನ್ನು ಪ್ರಶ್ನಿಸಿ ಕಂಪನಿ ಹೈಕೋರ್ಟ್‌ ಮೊರೆ ಹೋಗಿತ್ತು. ಸದ್ಯ ಉತ್ಪಾದನೆ ಮೇಲಿರುವ ನಿಷೇಧವನ್ನು ಹೈಕೋರ್ಟ್‌ ರದ್ದು ಮಾಡಿದೆ.

ವಿಭಾಗೀಯ ಪೀಠ ಈ ಆದೇಶ ನೀಡಿದ್ದು, ಹೊಸ ಸ್ಯಾಂಪಲ್‌ಗಳನ್ನು ಸಂಗ್ರಹಿಸಿ ಮೂರು ದಿನದೊಳಗೆ ಮೂರು ಪ್ರಯೋಗಾ ಲಯಕ್ಕೆ ಕಳುಹಿಸಿ ಎಂದು ನಿರ್ದೇಶಿಸಿದೆ.