Sunday, 15th December 2024

ಏಪ್ರಿಲ್ 16ರಿಂದ 21ರವರೆಗೆ ಜಂಟಿ ಪ್ರವೇಶ ಪರೀಕ್ಷೆ

ನವದೆಹಲಿ: ವರ್ಷಕ್ಕೆ ಎರಡು ಬಾರಿ ನಡೆಯುವ ಜಂಟಿ ಪ್ರವೇಶ ಪರೀಕ್ಷೆ ಎಪ್ರಿಲ್ 16ರಿಂದ 21ರವರೆಗೆ ನಡೆಯಲಿದೆ ಎಂದು ರಾಷ್ಟ್ರೀಯ ಪರೀಕ್ಷಾ ಪ್ರಾಧಿಕಾರ ಪ್ರಕಟಿಸಿದೆ. ಎರಡನೇ ಜೆಇಇ ಮೈನ್ಸ್ ಪರೀಕ್ಷೆ ಯನ್ನು ಮೇ 24ರಿಂದ 29ರವರೆಗೆ ನಡೆಸಲಾಗುವುದು.

ಕಂಪ್ಯೂಟರ್ ಆಧಾರಿತ ಬಹು ಆಯ್ಕೆಯ ಪ್ರಶ್ನೆಗಳನ್ನು ಒಳಗೊಂಡ ಪರೀಕ್ಷೆ ಎರಡು ಪ್ರಶ್ನೆಪತ್ರಿಕೆ ಗಳನ್ನು ಒಳಗೊಂಡಿರುತ್ತದೆ.

ಒಂದನೇ ಪ್ರಶ್ನೆ ಪತ್ರಿಕೆಯ ಪರೀಕ್ಷೆಯನ್ನು ಎನ್‌ಐಟಿ, ಐಐಐಟಿ ಮತ್ತು ಇತರ ಕೇಂದ್ರೀಯ ನೆರವಿನ ತಾಂತ್ರಿಕ ಸಂಸ್ಥೆಗಳಲ್ಲಿ ಮತ್ತು ಪಾಲುದಾರಿಕೆಯ ರಾಜ್ಯ ಸರ್ಕಾರಗಳ ಮಾನ್ಯತೆ ಪಡೆದ/ ಅನುದಾನ ಪಡೆಯುವ ಸಂಸ್ಥೆಗಳು/ ವಿಶ್ವವಿದ್ಯಾನಿಲಯಗಳಲ್ಲಿ ಎಂಜಿನಿಯರಿಂಗ್ ಪದವಿ ಪ್ರವೇಶ ಬಯಸುವ ವಿದ್ಯಾರ್ಥಿಗಳಿಗೆ (ಬಿಇ/ಬಿಟೆಕ್) ನಡೆಸಲಾಗುತ್ತದೆ. ಎರಡನೇ ಪ್ರಶ್ನೆಪತ್ರಿಕೆ ಪರೀಕ್ಷೆಯನ್ನು ವಾಸ್ತುಶಿಲ್ಪದಲ್ಲಿ ಪದವಿ ಮತ್ತು ಪ್ಲಾನಿಂಗ್ ಪದವಿ ಕೋರ್ಸ್‌ ಗಳಿಗೆ ಪ್ರವೇಶ ಪಡೆಯಲು ನಡೆಸಲಾಗುತ್ತದೆ.

ಜೆಇಇ- ಮೈನ್ 2022ರ ಆನ್‌ಲೈನ್ ಅರ್ಜಿಗಳು ಮಾ.1ರಿಂದ ಲಭ್ಯವಿದ್ದು, ಅರ್ಜಿಗಳನ್ನು ಸಲ್ಲಿಸಲು ಈ ತಿಂಗಳ 31 ಕೊನೆಯ ದಿನವಾಗಿರುತ್ತದೆ.