Thursday, 12th December 2024

ನ್ಯಾ.ರೋಹಿಂಟನ್‌ ಫಾಲಿ ನಾರಿಮನ್‌ ನಿವೃತ್ತಿ

ನವದೆಹಲಿ: ಸುಪ್ರೀಂ ಕೋರ್ಟ್‌’ನ ಅನೇಕ ಐತಿಹಾಸಿಕ ತೀರ್ಪುಗಳ ರೂವಾರಿ ನ್ಯಾ.ರೋಹಿಂಟನ್‌ ಫಾಲಿ ನಾರಿಮನ್‌, ಗುರುವಾರ ನಿವೃತ್ತ ರಾಗಿದ್ದಾರೆ.

ಸುಪ್ರೀಂ ಕೋರ್ಟ್‌ ನ್ಯಾಯಾಮೂರ್ತಿಯಾಗಿ 2014 ಜು. 7ರಂದು ಅಧಿಕಾರ ಸ್ವೀಕರಿಸಿದ್ದ ನ್ಯಾ.ನಾರಿಮನ್‌, 13,500ಕ್ಕೂ ಹೆಚ್ಚು ಪ್ರಕರಣಗಳನ್ನು ವಿಲೇವಾರಿ ಮಾಡಿದ್ದಾರೆ.

ಮೂಲಭೂತ ಹಕ್ಕುಗಳ ಸಂರಕ್ಷಣೆ, ಐಟಿ ಕಾಯ್ದೆಯಡಿ ಬಂಧಿಸುವ ಅಧಿಕಾರ ರದ್ದುಗೊಳಿಸುವುದು, ಸಲಿಂಗ ಕಾಮವನ್ನು ಶಿಕ್ಷಾರ್ಹ ಪ್ರಕರಣಗಳ ವ್ಯಾಪ್ತಿಯಿಂದ ಹೊರಗಿಟ್ಟಿದ್ದು, ಶಬರಿಮಲೆ ದೇಗುಲಕ್ಕೆ ಎಲ್ಲಾ ವಯೋ ಮಾನದ ಮಹಿಳೆಯರ ಪ್ರವೇಶಕ್ಕೆ ಅವಕಾಶ ಕಲ್ಪಿಸಿದ್ದು ಸೇರಿದಂತೆ ಅನೇಕ ಮಹತ್ವದ ಪ್ರಕರಣಗಳಲ್ಲಿ ಐತಿಹಾಸಿಕ ತೀರ್ಪು ನೀಡಿದ ಹೆಗ್ಗಳಿಕೆ ಅವರದ್ದು.

ನ್ಯಾ.ಫಾಲಿ ನಾರಿಮನ್‌ ನಿವೃತ್ತಿಯ ಬಗ್ಗೆ ಪ್ರತಿಕ್ರಿಯಿಸಿರುವ ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಎನ್‌.ವಿ. ರಮಣ, ನನ್ನ ಸಹೋದರ ನ್ಯಾ.ನಾರಿಮನ್‌ ಅವರ ನಿವೃತ್ತಿಯಿಂದ ನ್ಯಾಯಾಂಗದ ಆಶಯಗಳನ್ನು ಕಾಪಾಡುತ್ತಿದ್ದ ಸಿಂಹವೊಂದರ ಸೇವೆ ಮುಕ್ತಾಯವಾದಂತಾಗಿದೆ ಎಂದು ಬಣ್ಣಿಸಿದ್ದಾರೆ.