ತಂಜಾವೂರು: ಮೇಕೆದಾಟು ಅಣೆಕಟ್ಟು ನಿರ್ಮಾಣ ಯೋಜನೆಯನ್ನು ಕೈಬಿಡಬೇಕು ಎಂದು ನೆರೆ ರಾಜ್ಯ ಕರ್ನಾಟಕ ವನ್ನು ಒತ್ತಾಯಿಸಿ ಬಿಜೆಪಿ ತಮಿಳುನಾಡು ಘಟಕದ ನೇತೃತ್ವದಲ್ಲಿ ಕಾರ್ಯಕರ್ತರು ಗುರುವಾರ ಉಪವಾಸ ಸತ್ಯಾಗ್ರಹ ನಡೆಸಿದರು.
ಹಸಿರು ಶಾಲು ಧರಿಸಿ, ಎತ್ತಿನಗಾಡಿ ಮೆರವಣಿಗೆ ನಡೆಸಿದ ಮುಖಂಡರು, ಕಾರ್ಯಕರ್ತರು, ಕರ್ನಾಟಕ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.
ಮೇಕೆದಾಟುವಿಗೆ ಸಂಬಂಧಿಸಿ ಕರ್ನಾಟಕದ ಬಿಜೆಪಿ ಸರ್ಕಾರ ಬೆಂಬಲಿಸುವ ವಿರೋಧಪಕ್ಷಗಳ ನಿಲುವನ್ನು ಟೀಕಿಸಿದ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಕೆ.ಅಣ್ಣಾ ಮಲೈ, ‘ಕಾನೂನು ಸ್ಪಷ್ಟವಾಗಿ ನದಿಯ ಕೆಳಹಂತದ ರಾಜ್ಯಗಳ ಪರವಾಗಿದೆ’ ಎಂದರು.
ಕೆಳಹಂತದ ರಾಜ್ಯ ತಮಿಳುನಾಡು ಸಹಮತವಿಲ್ಲದೆ ಅಣೆಕಟ್ಟು ನಿರ್ಮಿಸುವುದು ಸಾಧ್ಯವೇ ಇಲ್ಲ. ಅಂತರರಾಜ್ಯ ನದಿ ವಿವಾದ ಕಾಯ್ದೆಯೂ ಸ್ಪಷ್ಟವಾಗಿದೆ. ಬಿಜೆಪಿಯು ಎಂದಿಗೂ ರೈತರ ಪರವಾಗಿರಲಿದ್ದು, ಅಣೆಕಟ್ಟು ನಿರ್ಮಿಸಲು ಅವಕಾಶ ಕೊಡುವುದಿಲ್ಲ. ಕರ್ನಾಟಕ ಸರ್ಕಾರ ಇದನ್ನು ಕೈಬಿಡಬೇಕು ಎಂದು ಪ್ರತಿಪಾದಿಸಿದರು.