ರಾಮೇಶ್ವರಂ: ಭಾರತದ ಮಾಜಿ ರಾಷ್ಟ್ರಪತಿ ದಿವಂಗತ ಡಾ.ಎ.ಪಿ.ಜೆ.ಅಬ್ದುಲ್ ಕಲಾಂ ಅವರ ಹಿರಿಯ ಸಹೋದರ ಮೊಹಮ್ಮದ್ ಮುತ್ತು ಮೀರಾ ಲೆಬ್ಬೆ ಮರಕಯಾರ್(104) ಅವರು ರಾಮೇಶ್ವರಂನ ಸ್ವಗೃಹದಲ್ಲಿ ಭಾನುವಾರ ನಿಧನರಾದರು.
ಮೊಹಮ್ಮದ್ ಮುತ್ತು ವಯೋ ಸಹಜ ಕಾಯಿಲೆಗಳಿಂದ ಬಳಲುತ್ತಿದ್ದರು. ಮಾಜಿ ಅಧ್ಯಕ್ಷ ಎಪಿಜೆ ಅಬ್ದುಲ್ ಕಲಾಂ ಅವರು ಜುಲೈ 27, 2015 ರಂದು ಮೇಘಾಲಯದ ಶಿಲ್ಲಾಂಗ್ನಲ್ಲಿ ವಿದ್ಯಾರ್ಥಿಗಳ ಜೊತೆ ಸಂವಾದ ನಡೆಸಲು ಮುಂದಾಗಿದ್ದವರು ಹೃದಯಾಘಾತ ಕ್ಕೊಳಗಾಗಿ ಮೃತಪಟ್ಟಿದ್ದರು.
ಕಲಾಂ ಆಸ್ತಿ ಸಂರಕ್ಷಿಸಿದ್ದ ಮೊಹಮ್ಮದ್ ಕಲಾಂ ಅವರ ದೊಡ್ಡ ಆಸ್ತಿ ಎಂದರೆ ಅವರ ಬಳಿ ಇದ್ದ ಪುಸ್ತಕಗಳು, ವೀಣೆ, ಒಂದು ಲ್ಯಾಪ್ ಟಾಪ್, ವ್ರಿಸ್ಟ್ ವಾಚ್, ಎರಡು ಬೆಲ್ಟ್, ಸಿಡಿ ಪ್ಲೇಯರ್, ಅವರ ನೆಚ್ಚಿನ ನೀಲಿ ಅಂಗಿ. ಇದಲ್ಲದೆ, ಕಲಾಂ ಹಿರಿಯ ಸಹೋದರರೇ ಎಲ್ಲ ಪುಸ್ತಕಗಳ ರಾಯಲ್ಟಿಗೆ ಪಾಲುದಾರರಾಗಿದ್ದರು.
ಮೃತ ಮೊಹಮ್ಮದ್ ಅವರ ಅಂತಿಮ ಸಂಸ್ಕಾರವನ್ನು ಸೋಮವಾರ ಸ್ವಗ್ರಾಮದಲ್ಲಿ ನೆರವೇರಿಸಲಾಗುತ್ತದೆ.