Saturday, 23rd November 2024

ಕಂಬಳ, ಜಲ್ಲಿಕಟ್ಟು, ಚಕ್ಕಡಿ ಸ್ಪರ್ಧೆಗೆ ಇಲ್ಲ ತಡೆ

ನವದೆಹಲಿ: ತಮಿಳುನಾಡು, ಕರ್ನಾಟಕ ಮತ್ತು ಮಹಾರಾಷ್ಟ್ರದಲ್ಲಿ ಕ್ರಮವಾಗಿ ಜಲ್ಲಿಕ ಟ್ಟು, ಕಂಬಳ ಮತ್ತು ಚಕ್ಕಡಿ ಸ್ಪರ್ಧೆಗೆ ಅನುಮತಿಸುವ ಕಾನೂನು ಪ್ರಶ್ನಿಸಿ ಸಲ್ಲಿಕೆಯಾಗಿದ್ದ ಎಲ್ಲ ಅರ್ಜಿಗಳನ್ನು ಸುಪ್ರೀಂ ಕೋರ್ಟ್‌ನ ಸಾಂವಿಧಾನಿಕ ಪೀಠವು ತಳ್ಳಿ ಹಾಕಿದೆ.

ರಾಜ್ಯದಲ್ಲಿ ಇನ್ನು ಮುಂದೆ ಕಂಬಳವು ಯಾವುದೇ ಅಡೆತಡೆ ಇಲ್ಲದೇ ಸರಾಗವಾಗಿ ನಡೆಯ ಲಿದೆ.

ತಮಿಳುನಾಡಿನಲ್ಲಿ ಜಲ್ಲಿಕಟ್ಟು ಸಂಸ್ಕೃತಿಯ ಭಾಗವಾಗಿದೆ. ಹಾಗಾಗಿ, ತಮಿಳುನಾಡು ಸರ್ಕಾರವು ಜಲ್ಲಿಕಟ್ಟು ತಮ್ಮ ಸಂಸ್ಕೃತಿಯ ಭಾಗವಾಗಿದೆ ಎಂದು ಘೋಷಿಸಿದರೆ, ನ್ಯಾಯಾಂಗ ಆ ಬಗ್ಗೆ ಏನೂ ಮಾಡಲು ಬರುವುದಿಲ್ಲ. ತಮಗೆ ಸೂಕ್ತ ಎನಿಸುವ ಕಾನೂನು ರೂಪಿಸಲು ರಾಜ್ಯ ಸ್ವತಂತ್ರವಾಗಿದೆ ಎಂದು ಸಾಂವಿಧಾನಿಕ ಪೀಠದ ಜಸ್ಟೀಸ್ ಕೆ ಎಂ ಜೋಸೆಫ್, ಜಸ್ಟೀಸ್ ಅಜಯ್ ರಸ್ತೋಗಿ, ಜಸ್ಟೀಸ್ ಅನಿರುದ್ಧ ಬೋಸ್, ಜಸ್ಟೀಸ್ ಹೃಷಿಕೇಶ್ ರಾಯ್, ಜಸ್ಟೀಸ್ ಸಿ ಟಿ ರವಿಕುಮಾರ್ ಅವರು ಅಭಿಪ್ರಾಯಪಟ್ಟಿದ್ದಾರೆ.

ಇದೇ ಮಾನದಂಡವು ಕರ್ನಾಟಕದ ಕಂಬಳ ಹಾಗೂ ಮಹಾರಾಷ್ಟ್ರದ ಚಕ್ಕಡಿ ರೇಸ್‌ಗೂ ಅನ್ವಯವಾಗುತ್ತದೆ. ಈ ಸಂಬಂಧ ಕಾನೂನುಗಳನ್ನು ಕಟ್ಟು ನಿಟ್ಟಾದ ರೀತಿಯಲ್ಲಿ ಜಾರಿ ಮಾಡುವ ಹೊಣೆಗಾರಿಕೆಯನ್ನು ಜಿಲ್ಲಾ ಮ್ಯಾಜಿಸ್ಟ್ರೇಟ್‌ಗಳಿಗೆ ವಹಿಸ ಲಾಗಿದೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ.