ಚೆನ್ನೈ: ಬಿಜೆಪಿ ತಮಿಳುನಾಡು ಅಧ್ಯಕ್ಷ ಕೆ.ಅಣ್ಣಾಮಲೈ ಆರು ದಿನಗಳ ಪ್ರವಾಸಕ್ಕಾಗಿ ಇಂಗ್ಲೆಂಡಿಗೆ ಗುರುವಾರ ತೆರಳಿದರು.
ಬ್ರಿಟನ್ ತಮಿಳರು ಆಯೋಜಿಸುವ ವಿವಿಧ ಕಾರ್ಯಕ್ರಮಗಳಲ್ಲಿ ಅವರು ಭಾಗವಹಿಸಲಿದ್ದಾರೆ ಎಂದು ತಮಿಳುನಾಡು ಬಿಜೆಪಿ ಮೂಲಗಳು ತಿಳಿಸಿವೆ.
ಕಳೆದ ಒಂಬತ್ತು ವರ್ಷಗಳ ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ಸಾಧನೆಗಳ ಕುರಿತು ಬಿಜೆಪಿ ನಾಯಕರು ಪ್ರಸ್ತುತಿ ನೀಡಲಿದ್ದಾರೆ. ತಮ್ಮ 6 ದಿನಗಳ ಭೇಟಿಯಲ್ಲಿ ಲಂಡನ್, ಬರ್ಮಿಂಗ್ಹ್ಯಾಮ್ ಮತ್ತು ಹೌನ್ಸ್ಲೋದಲ್ಲಿ ವಾಸಿಸುವ ತಮಿಳು ಸಮುದಾಯದೊಂದಿಗೆ ಸಂವಾದ ನಡೆಸಲಿದ್ದಾರೆ ಮತ್ತು ಅವರು ಜೂ.29 ರಂದು ಮತ್ತೆ ಚೆನ್ನೈಗೆ ಬರಲಿದ್ದಾರೆ.
ಅಣ್ಣಾಮಲೈ ಅವರು ಕಳೆದ ವರ್ಷ 3 ದಿನಗಳ ಕಾಲ ಶ್ರೀಲಂಕಾಕ್ಕೆ ಪ್ರಯಾಣಿಸಿ ಲಂಕಾ ತಮಿಳರೊಂದಿಗೆ ಸಂವಾದ ನಡೆಸಿದ್ದನ್ನು ಈ ವೇಳೆ ಸ್ಮರಿಸ ಬಹುದು. ಆಗ ಶ್ರೀಲಂಕಾ ತಮಿಳರಿಗೆ ಅಗತ್ಯ ನೆರವು ನೀಡುವಂತೆ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರುವುದಾಗಿ ಭರವಸೆ ನೀಡಿದ್ದರು.