ಚೆನ್ನೈ: ಟ್ವಿಟರ್’ನಲ್ಲಿ ಪೋಸ್ಟ್ ಮಾಡಲಾದ ವಲಸೆ ಕಾರ್ಮಿಕರ ಸಮಸ್ಯೆಗೆ ಸಂಬಂಧಿಸಿದಂತೆ ಪ್ರಚೋದನಕಾರಿ ಭಾಷಣಕ್ಕಾಗಿ ತಮಿಳುನಾಡು ಬಿಜೆಪಿ ಅಧ್ಯಕ್ಷ ಕೆ ಅಣ್ಣಾಮಲೈ ವಿರುದ್ಧ ಚೆನ್ನೈನ ಸೆಂಟ್ರಲ್ ಕ್ರೈಮ್ ಬ್ರಾಂಚ್ ಸೈಬರ್ ಕ್ರೈಂ ವಿಭಾಗ ಭಾನುವಾರ ಪ್ರಕರಣ ದಾಖಲಿಸಿದೆ.
ಅವರ ವಿರುದ್ಧ ನಾಲ್ಕು ಸೆಕ್ಷನ್ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಈ ವಿಚಾರವಾಗಿ ಅಣ್ಣಾಮಲೈ ಪ್ರತಿಕ್ರಿಯೆ ನೀಡಿರುವ ಹೇಳಿಕೆಯನ್ನು ತಮಿಳುನಾಡು ಬಿಜೆಪಿಯ ಅಧಿಕೃತ ಹ್ಯಾಂಡಲ್ ಬಳಸಿ ಟ್ವೀಟ್ ಪೋಸ್ಟ್ ಮಾಡಲಾಗಿದೆ. ಅಣ್ಣಾಮಲೈ ಸಹಿ ಮಾಡಿರುವ ಹೇಳಿಕೆಯಲ್ಲಿ, ‘ಡಿಎಂಕೆಯ ಹಿಂದಿ ವಿರೋಧಿ ಆಂದೋಲನದಿಂದಾಗಿ ತಮಿಳುನಾಡಿನಲ್ಲಿ ವಲಸೆ ಕಾರ್ಮಿಕರ ವಿರುದ್ಧ ತಾರತಮ್ಯ ಪ್ರಾರಂಭವಾಯಿತು ಎಂದಿರುವ ಅವರು, ಹಲವಾರು ಡಿಎಂಕೆ ಸಚಿವರು, ಶಾಸಕರು ಮತ್ತು ಸಂಸದರನ್ನು ಹೆಸರಿಸಿ ದ್ದರು. ಅವರು ಆಪಾದಿತ ಹೇಳಿಕೆಗಳನ್ನೂ ನೀಡಿದ್ದರು. ಈ ಸಂಬಂಧ ತನಿಖೆಗಳು ನಡೆಯುತ್ತಿವೆ.