ಕಾನ್ಪುರ: ವಯೋಸಹಜ ಕಾಯಿಲೆಗಳಿಂದ ಕಾನ್ಪುರ ಮೃಗಾಲಯದಲ್ಲಿ (Kanpur Zoo) 19 ವರ್ಷದ ಹುಲಿ (tiger death) ಇತ್ತೀಚೆಗೆ ಸಾವನ್ನಪ್ಪಿದ್ದು, ಸಿಬ್ಬಂದಿ ಮತ್ತು ಪ್ರವಾಸಿಗರಲ್ಲಿ ಅಪಾರ ದುಃಖವನ್ನು ಉಂಟು ಮಾಡಿದೆ. 11 ವರ್ಷಗಳಿಂದ ಮೃಗಾಲಯದಲ್ಲಿ (Kanpur Zoological Park) ಇರುವ ಈ ಹುಲಿಯ ಹೆಸರು ಪ್ರಶಾಂತ್ (tiger Prashant).
ಮೃಗಾಲಯದ ಎಲ್ಲ ಸಿಬ್ಬಂದಿಗೂ ಅತ್ಯಾಪ್ತವಾಗಿದ್ದ ಈ ಹುಲಿ ಪ್ರವಾಸಿಗರ ಆಕರ್ಷಣೆಯಾಗಿತ್ತು. ಹೀಗಾಗಿ ಈ ಹುಲಿಯ ಸಾವು ಎಲ್ಲರಿಗೂ ದುಃಖವನ್ನು ಉಂಟು ಮಾಡಿದೆ.
ಮೃಗಾಲಯದ ಸಿಬ್ಬಂದಿ ಹಾಗೂ ಶಾಲಾ ಮಕ್ಕಳು ಹುಲಿಗೆ ಪುಷ್ಪ ಅರ್ಪಿಸಿ ಅಂತಿಮ ನಮನ ಸಲ್ಲಿಸಿದರು.
ಕಾನ್ಪುರ ಮೃಗಾಲಯದ ಪಶುವೈದ್ಯಾಧಿಕಾರಿ ಡಾ. ಅನುರಾಗ್ ಸಿಂಗ್ ಅವರು, ಪ್ರಶಾಂತ್ ಜೊತೆಗಿನ ಅನುಭವವನ್ನು ಹಂಚಿಕೊಂಡರು. 2010ರ ಅಕ್ಟೋಬರ್ 14ರಂದು ಟೈಗರ್ ಪ್ರಶಾಂತ್ ಗೆ ಐದು ವರ್ಷವಾಗಿದ್ದಾಗ ಫರೂಕಾಬಾದ್ ಜಿಲ್ಲೆಯಲ್ಲಿ ರಕ್ಷಿಸಲ್ಪಟ್ಟಿದ್ದ. ಆಗ ಆತ ಒಂಬತ್ತು ಜನರನ್ನು ಕೊಂದಿದ್ದ ಎನ್ನುವ ಕುಖ್ಯಾತಿಯನ್ನು ಪಡೆದಿದ್ದ. ಬಳಿಕ ಮೃಗಾಲಯಕ್ಕೆ ಬಂದಿದ್ದ. 2010ರಲ್ಲಿ ಗುಜರಾತ್‌ನ ಶಕ್ಕರ್‌ಬಾಗ್ ಮೃಗಾಲಯದಿಂದ ತಂದ ಟೈಗ್ರೆಸ್ ಟ್ರುಷಾ ಜೊತೆ ಪ್ರಶಾಂತ್ ಜೋಡಿಯಾಗಿ ಏಳು ಮರಿಗಳನ್ನು ಹೊಂದಿದ್ದ ಎಂದು ಡಾ. ಸಿಂಗ್ ತಿಳಿಸಿದರು.
ವನ್ಯಜೀವಿ ಪ್ರಾಣಿಗಳ ವಿನಿಮಯದ ಸಮಯದಲ್ಲಿ ಅದರ ಮರಿಗಳಲ್ಲಿ ಒಂದಾದ ಬಾದ್‌ಶಾ ಎಲ್ಲರ ಗಮನ ಸೆಳೆದಾಗ ಪ್ರಶಾಂತ್ ವಂಶಕ್ಕೆ ರಾಷ್ಟ್ರೀಯ ಮನ್ನಣೆ ಸಿಕ್ಕಿತ್ತು.
2016 ರಲ್ಲಿ ಛತ್ತೀಸ್‌ಗಢದ ನ್ಯೂ ರಾಯ್‌ಪುರದಲ್ಲಿ ಏಷ್ಯಾದ ಅತಿದೊಡ್ಡ ಜಂಗಲ್ ಸಫಾರಿ ಉದ್ಘಾಟನೆಯ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಬಾದ್‌ಶಾ ನೊಂದಿಗೆ ಛಾಯಾಚಿತ್ರವನ್ನು ತೆಗೆದು ಹಂಧಿಕೊಂಡಿದ್ದರು. ಇದು ಎಲ್ಲರ ಗಮನ ಸೆಳೆದಿತ್ತು ಎಂದು ಡಾ. ಸಿಂಗ್ ತಿಳಿಸಿದರು.
ಪ್ರಶಾಂತ್‌ನ ಇತರ ಮರಿಗಳು ದೆಹಲಿ, ಜೋಧ್‌ಪುರ ಮೃಗಾಲಯ ಸೇರಿದಂತೆ ದೇಶಾದ್ಯಂತ ವಿವಿಧ ಭಾಗಗಳ ಮೃಗಾಲಯಗಳಲ್ಲಿ ನೆಲೆಯಾಗಿವೆ. ಕೆಲವು ಕಾನ್ಪುರದಲ್ಲಿ ವಾಸಿಸುತ್ತಿವೆ. ಅಕ್ಬರ್, ಅಮರ್, ಅಂಬಿಕಾ ಮತ್ತು ಅಂತೋನಿಗಳು ಪ್ರಶಾಂತ್ ನ ಪರಂಪರೆಯನ್ನು ಮುಂದಕ್ಕೆ ಸಾಗಿಸುವ ಮೂಲಕ ಗುರುತಿಸಲ್ಪಟ್ಟಿವೆ.
Drug Seized: ಗುಜರಾತ್ ಕರಾವಳಿಯಲ್ಲಿ 700 ಕೆ.ಜಿ. ಡ್ರಗ್ಸ್ ವಶ, ಎಂಟು ಮಂದಿ ಇರಾನ್ ಪ್ರಜೆಗಳು ಅರೆಸ್ಟ್
ಪಶುವೈದ್ಯಕೀಯ ತಂಡದ ಉತ್ತಮ ಪ್ರಯತ್ನದ ಹೊರತಾಗಿಯೂ ದೀರ್ಘಕಾಲದ ಚಿಕಿತ್ಸೆಯ ಅನಂತರ ಪ್ರಶಾಂತ್ ಸಾವನ್ನಪ್ಪಿದ್ದಾನೆ. ನಾಲ್ಕು ಪಶುವೈದ್ಯರ ಸಮಿತಿಯು ನಡೆಸಿದ ಅದರ ಮರಣೋತ್ತರ ಪರೀಕ್ಷೆಯಿಂದ ವಯಸ್ಸಿಗೆ ಸಂಬಂಧಿಸಿದ ತೊಡಕುಗಳನ್ನು ಸಾವಿಗೆ ಕಾರಣ ಎಂಬುದನ್ನು ದೃಢಪಡಿಸಿವೆ.